ETV Bharat / bharat

ಪಿಎಂ ತಮ್ಮ ತಪ್ಪು ಒಪ್ಪಿಕೊಂಡು, ಭಾರತ ಮರು ನಿರ್ಮಾಣಕ್ಕಾಗಿ ತಜ್ಞರ ಸಹಾಯ ಪಡೆಯಲಿ: ರಾಗಾ - ಕೇಂದ್ರದ ವಿರುದ್ಧ ರಾಹುಲ್​ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಪ್ಪು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

Rahul Gandhi
Rahul Gandhi
author img

By

Published : Jun 17, 2021, 4:57 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ತಮ್ಮ ತಪ್ಪು ಒಪ್ಪಿಕೊಂಡು, ಭಾರತದ ಮರು ನಿರ್ಮಾಣಕ್ಕಾಗಿ ತಜ್ಞರ ಸಲಹೆ ಪಡೆದುಕೊಳ್ಳಲಿ. ಹಾಗಾದಾಗ ಮಾತ್ರ ಭಾರತ ಮರುಕಟ್ಟಲು ಸಾಧ್ಯ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಇದೇ ವಿಚಾರವಾಗಿ ಟ್ವೀಟ್​​ ಮಾಡಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ಬಡತನ ಹೆಚ್ಚಾಗಿರುವ ವಿಚಾರ ಟ್ವಿಟರ್​ನಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಾವು ಮಾಡಿರುವ ತಪ್ಪುಗಳನ್ನ ಮುಚ್ಚಿಹಾಕುವುದರಿಂದ ಯಾವುದೇ ರೀತಿಯ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದಿರುವ ರಾಹುಲ್​ ಗಾಂಧಿ, ತಜ್ಞರ ಸಹಾಯ ಪಡೆದುಕೊಳ್ಳಬೇಕಾಗಿರುವುದು ಅತಿ ಅವಶ್ಯವಾಗಿದೆ ಎಂದಿದ್ದಾರೆ. ಮಹಾಮಾರಿ ಕೊರೊನಾ ಸಂಕಷ್ಟದ ಸಮಯದಲ್ಲಿ ಜಾಗತಿಕವಾಗಿ ಬಡತನ ಹೆಚ್ಚಾಗಿದ್ದು, ಶೇ.59.3ರಷ್ಟಿದೆ. ಆದರೆ, ಇದರಲ್ಲಿ ಭಾರತದ ಪಾಲು ಶೇ. 57.3ರಷ್ಟು ಇದೆ ಎಂದು ವಿಶ್ವಬ್ಯಾಂಕ್​ನ ವರದಿವೊಂದನ್ನ ತಮ್ಮ ಟ್ವಿಟರ್​ನಲ್ಲಿ ಅಂಟಿಸಿದ್ದಾರೆ.

  • This is the result of GOI’s pandemic mismanagement.

    But we must look at the future now. Rebuilding our country will begin when PM acknowledges his mistakes & seeks help from the experts.

    Living in denial will not solve anything. pic.twitter.com/JhBfmTd41w

    — Rahul Gandhi (@RahulGandhi) June 17, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಪ್ರಜಾಪ್ರಭುತ್ವದ ಬಗ್ಗೆ ಟ್ಟಿಟರ್ ನಮಗೆ ​ಬೋಧಿಸುವ ಅಗತ್ಯತೆ ಇಲ್ಲ: ರವಿಶಂಕರ್​ ಪ್ರಸಾದ್​

ಮಹಾಮಾರಿ ಕೊರೊನಾ ನಿರ್ವಹಣೆಯಲ್ಲಿ ಭಾರತ ಎಡವಿದೆ. ಇದೀಗ ಪ್ರಧಾನಿ ಮೋದಿ ಭಾರತದ ಮರು ನಿರ್ಮಾಣಕ್ಕಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.