ETV Bharat / bharat

ದೇಶದಲ್ಲಿ ಉಲ್ಬಣಿಸಿದ ಕೊರೊನಾ: ಏ.8ರಂದು ಸಿಎಂಗಳೊಂದಿಗೆ ನಮೋ ಮತ್ತೊಂದು ಸುತ್ತಿನ ಸಭೆ

author img

By

Published : Apr 5, 2021, 5:36 PM IST

ಎರಡನೇ ಹಂತದ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಇದೀಗ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

PM Narendra Modi to interact with CM
PM Narendra Modi to interact with CM

ನವದೆಹಲಿ: ದೇಶದಲ್ಲಿ 2ನೇ ಹಂತದ ಮಹಾಮಾರಿ ಕೊರೊನಾ ವೈರಸ್ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್​​ 8ರಂದು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • PM Narendra Modi to interact with Chief Ministers on COVID-19 & vaccination-related issues on 8th April, via video conferencing: Sources pic.twitter.com/JbrLj3ozJe

    — ANI (@ANI) April 5, 2021 " class="align-text-top noRightClick twitterSection" data=" ">

ಎರಡನೇ ಹಂತದ ವೈರಸ್​ ವೇಗವಾಗಿ ಹರಡಲು ಶುರು ಮಾಡಿರುವ ಕಾರಣ ನರೇಂದ್ರ ಮೋದಿ ಮಾರ್ಚ್​​​ 17ರಂದು ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಕೋವಿಡ್​ ಪ್ರಕರಣದ ಹೆಚ್ಚಳದ ಬಗ್ಗೆ ಜನರಲ್ಲಿ ಭಯ ಸೃಷ್ಟಿ ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಟೆಸ್ಟ್​​, ಟ್ರೇಸ್​, ಟ್ರ್ಯಾಕ್​ ಮಂತ್ರದಿಂದ ಕೊರೊನಾ ಸೋಂಕನ್ನು ನಿಯಂತ್ರಿಸುವ ಅವಶ್ಯಕತೆ ಇದೆ. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಹೆಚ್ಚಿನ ಜನರು ಒಟ್ಟಾಗಿ ಒಂದೆಡೆ ಸೇರಿಕೊಳ್ಳದಂತೆ ನೋಡಿಕೊಳ್ಳಲು ಸೂಚಿಸಿದ್ದರು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಬೆನ್ನಲ್ಲೇ 45 ಸಹ ಕಲಾವಿದರಿಗೂ ವಕ್ಕರಿಸಿತು ಮಹಾಮಾರಿ ಕೊರೊನಾ!

ಇದೀಗ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್​, ದೆಹಲಿ, ರಾಜಸ್ಥಾನ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ 2ನೇ ಹಂತದ ಮಹಾಮಾರಿ ಜೋರಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಇನ್ನೊಮ್ಮೆ ಮಹತ್ವದ ಸಭೆ ನಡೆಸಲಿದ್ದು, ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್​ ನೀಡುವ ಅಭಿಯಾನ ಆರಂಭಗೊಂಡಿದ್ದು, ಪ್ರಧಾನಿ ಮೋದಿ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.