ETV Bharat / bharat

ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ​ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ - ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತು

ಹಲವು ವಲಯಗಳಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಭಾರತ ವಿಶ್ವದ ನಾಯಕತ್ವ ವಹಿಸಬೇಕಾಗಿದೆ. ಸ್ವಾತಂತ್ರ್ಯಾ ನಂತರ ಬಡವರ ಎಲ್ಲ ಮನೆಗಳಿಗೆ ವಿದ್ಯುತ್​, ಗ್ಯಾಸ್​ ಸಂಪರ್ಕ ಕಲ್ಪಿಸಿದ್ದು ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.

pm narendra
ಪ್ರಧಾನಿ ಮೋದಿ
author img

By

Published : Feb 7, 2022, 5:55 PM IST

Updated : Feb 7, 2022, 7:03 PM IST

ನವದೆಹಲಿ: ಗಾನ ಕೋಗಿಲೆ ಲತಾ ಮಂಗೇಶ್ಕರ್​ ಅವರ ನಿಧನ ಭಾರತದ ಧ್ವನಿಯನ್ನೇ ಕಳೆದುಕೊಂಡಂತಾಗಿದೆ ಎಂದು ಪ್ರಧಾನಿ ಮೋದಿ ಲತಾ ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ರಾಷ್ಟ್ರಪತಿ ಭಾಷಣದ ಮೇಲೆ ವಂದನಾರ್ಪಣೆಗೆ ಉತ್ತರ ನೀಡಿದ ಅವರು, ಬಡವರ ಮನೆಗಳಲ್ಲಿ ಬೆಳಕು ಮೂಡಿದ್ದು, ಬಡವರ ಸಂತಸ ದೇಶದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಗ್ಯಾಸ್​ ಸಂಪರ್ಕ ಮಹಿಳೆಯರ ಸಂಕಷ್ಟ ದೂರ ಮಾಡಿದೆ ಎಂದು ಹೇಳಿದರು.

ಹಲವು ವಲಯಗಳಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಭಾರತ ವಿಶ್ವದ ನಾಯಕತ್ವ ವಹಿಸಬೇಕಾಗಿದೆ. ಸ್ವಾತಂತ್ರ್ಯಾನಂತರ ಬಡವರ ಎಲ್ಲಾ ಮನೆಗಳಿಗೆ ವಿದ್ಯುತ್​, ಗ್ಯಾಸ್​ ಸಂಪರ್ಕ ಕಲ್ಪಿಸಿದ್ದು ಸರ್ಕಾರ ಸಾಧನೆ ಎಂದು ಬಣ್ಣಿಸಿದರು.

ಸದನದಲ್ಲಿ ಪ್ರಧಾನಿ ಮೋದಿ ಮಾತು

ಕಾಂಗ್ರೆಸ್​ ವಿರುದ್ಧ ಪ್ರಧಾನಿ ಟೀಕಾ ಪ್ರಹಾರ: ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್​ ನಾಯಕರನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್​ ತೆಲಂಗಾಣ, ಜಾರ್ಖಂಡ್​ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿ ತಿರಸ್ಕೃತವಾಗಿ ದೇಶದಿಂದಲೇ ಪಕ್ಷ ಮಾಯವಾಗುತ್ತಿದೆ ಎಂದು ಟೀಕಿಸಿದರು. ಕೊರೊನಾ ವೇಳೆ ಜನರು ಎಲ್ಲಿದ್ದಾರೋ ಅಲ್ಲಿಯೇ ಇರಿ ಎಂದು ವಿಶ್ವಸಂಸ್ಥೆ ಹೇಳಿತ್ತು.

ಆದರೆ, ಕಾಂಗ್ರೆಸ್​ ನಾಯಕರು ಮುಗ್ಧ ಜನರು, ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್​ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಿದ್ದರು. ಇದರಿಂದ ಉತ್ತರಾಖಂಡ, ಪಂಜಾಬ್​, ಮಹಾರಾಷ್ಟ್ರ ವಿವಿಧ ರಾಜ್ಯಗಳಲ್ಲಿ ಕೊರೊನಾ ಉತ್ತುಂಗಕ್ಕೇರಲು ಕಾರಣವಾಯಿತು ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಜನರನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ರಾಷ್ಟ್ರೀಯ ಪಕ್ಷವೊಂದು ಜನರ ಜೀವದ ಜೊತೆ ಆಟವಾಡಿದೆ. ಕೊರೊನಾ ನಿರ್ಬಂಧ ಹೇರಿದರೆ ಕೇಂದ್ರ ಸರ್ಕಾರಕ್ಕೆ ಏನು ಪ್ರಯೋಜನವಿತ್ತು. ಇದು ಜನರ ಒಳಿತಿಗಾಗಿ ಹಾಕಲಾಗಿದ್ದ ನಿರ್ಬಂಧ ಅಷ್ಟೇ ಎಂದು ಹೇಳಿದರು.

ಯೋಗ ಮಾಡಲೂ ವಿರೋಧ: ಯೋಗ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಲಾಗುತ್ತೆ. ಅದನ್ನು ಸಾಮೂಹಿಕವಾಗಿ ಮಾಡಲು ಹೇಳಿದಾಗ ಆಗಲೂ ವಿರೋಧ ವ್ಯಕ್ತವಾಯಿತು. ಸರ್ಕಾರ ಮಾಡುವ ಎಲ್ಲಾ ಉತ್ತಮ ಕಾರ್ಯಗಳನ್ನು ಕಾಂಗ್ರೆಸ್​ ವಿರೋಧಿಸುವುದರಿಂದ ಈಗ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅವಲೋಕಿಸಿಕೊಳ್ಳಲಿ ಎಂದು ಹೇಳಿದರು.

  • PM Modi pays tribute to singing legend Lata Mangeshkar in Lok Sabha

    Lata Mangeshkar moved an entire nation. She also brought the whole nation together, PM says. pic.twitter.com/1F39nJugcy

    — ANI (@ANI) February 7, 2022 " class="align-text-top noRightClick twitterSection" data=" ">

ನಮ್ಮ ಉದ್ಯಮಿಗಳನ್ನೇ ವೈರಸ್​ ಎಂದು ಕಾಂಗ್ರೆಸ್​ ಟೀಕಿಸಿದೆ. ದೇಶದ ಅಭ್ಯುದಯದಲ್ಲಿ ಪಾಲುದಾರರಾಗಿರುವ ಉದ್ಯಮಿಗಳನ್ನು ವೈರಸ್​ ಎಂದು ಜರಿದ ಕಾಂಗ್ರೆಸ್​ ಇಂದು ದಿವಾಳಿಯಾಗಿದೆ. ತಮ್ಮ ಖಜಾನೆ ತುಂಬಿಕೊಳ್ಳುತ್ತಿದ್ದ ಕಾಂಗ್ರೆಸ್​ಗೆ ಮೇಕ್​ ಇನ್​ ಇಂಡಿಯಾ ಬ್ರೇಕ್​ ಹಾಕಿದೆ. ಇದರಿಂದ ಅದು ಮೇಕ್​ ಇನ್​ ಇಂಡಿಯಾ ಯೋಜನೆಯನ್ನೂ ವಿರೋಧಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ಸನ್ನೇ ಓಡಿಸಿದ ಬಡತನ

ಕಾಂಗ್ರೆಸ್​ ಪಕ್ಷ ಬಡತನದ ವಿರುದ್ಧ ಹೋರಾಡಲಿಲ್ಲ. ಇದರಿಂದ ಕಾಂಗ್ರೆಸ್​ ಅನ್ನು ಬಡತನವೇ ಹೋಗಲಾಡಿಸಿದೆ. ಭಾರತದ ಗಡಿ ವಿಷಯದಲ್ಲೂ ಕಾಂಗ್ರೆಸ್​ ರಾಜಕೀಯ ಮಾಡಿದೆ. ಪಕ್ಷ ಇದನ್ನು ಮುಂದುವರೆಸಿದ್ದೇ ಆದಲ್ಲಿ ಇತಿಹಾಸದಿಂದಲೇ ಕಳೆದು ಹೋಗಲಿದೆ ಎಂದು ಶ್ಲೋಕದ ಮೂಲಕ ಮೋದಿ ತಿವಿದರು.

ತಮಿಳುನಾಡಿನಲ್ಲಿ ಸಿಡಿಎಸ್​ ರಾವತ್​ಗೆ ಅದ್ಭುತ ವಿದಾಯ

ತಮಿಳುನಾಡಿನಲ್ಲಿ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಅವರು ಮೃತಪಟ್ಟಾಗ ಅಲ್ಲಿನ ಜನರು ವೀರ ಯೋಧನಿಗೆ ಅದ್ಭುತ ವಿದಾಯ ಹೇಳಿದ್ದಾರೆ. ಆದರೆ, ದೇಶವನ್ನು ಒಡೆದು ಆಳುವ ನೀತಿ ಹೊಂದಿರುವ ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.

ಇಂತಹ ನೂರಾರು ಜನರು ಬಂದು ಹೋಗಿದ್ದಾರೆ. ಭಾರತ ಶ್ರೇಷ್ಠ ದೇಶ, ಶ್ರೇಷ್ಠವಾಗಿದೆ. ಶ್ರೇಷ್ಠವಾಗಿರುತ್ತದೆ. ದೇಶ ಎಂದಿಗೂ ಅಜರಾಮರವಾಗಿರುತ್ತದೆ. ಕಾಂಗ್ರೆಸ್​ನ ಯಾವ ಗೇಮ್​ ಪ್ಲಾನ್​ ಇಲ್ಲಿ ನಡೆಯಲ್ಲ ಎಂದು ಹೇಳಿದರು.

ಓದಿ: ಅತೃಪ್ತ ಸಿ.ಎಂ.ಇಬ್ರಾಹಿಂ ಮನವೊಲಿಕೆಗೆ ಆಪ್ತನ ಮೂಲಕ ಸಿದ್ದರಾಮಯ್ಯ ಯತ್ನ!

Last Updated : Feb 7, 2022, 7:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.