ಡೆಹ್ರಾಡೂನ್ (ಉತ್ತರಾಖಂಡ): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ನ 105ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಯುವಕರು ನಡೆಸುತ್ತಿರುವ ಘೋಡಾ ಗ್ರಂಥಾಲಯ (ಕುದುರೆ ಗ್ರಂಥಾಲಯ)ವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ದೇಶದಲ್ಲಿ ಶಿಕ್ಷಣವನ್ನು ಯಾವಾಗಲೂ ಸೇವೆಯಾಗಿ ನೋಡಲಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಉತ್ತರಾಖಂಡದ ಕೆಲವು ಯುವಕರು ಘೋಡಾ ಗ್ರಂಥಾಲಯದ ಮೂಲಕ ದೂರದ ಪ್ರದೇಶಗಳ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ತಲುಪಿಸುತ್ತಿದ್ದಾರೆ ಎಂದು ತಿಳಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನೈನಿತಾಲ್ ಜಿಲ್ಲೆಯ ರಿಮೋಟ್ ಕೊಟಾಬಾಗ್ ಡೆವಲಪ್‌ಮೆಂಟ್ ಬ್ಲಾಕ್‌ನ ಶುಭಂ ಬಧಾನಿ ಅವರ ಕುದುರೆ ಲೈಬ್ರರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದರು. ನಮ್ಮ ದೇಶದಲ್ಲಿ ಶಿಕ್ಷಣವನ್ನು ಯಾವಾಗಲೂ ಸೇವೆಯಾಗಿ ನೋಡಲಾಗುತ್ತಿದೆ. ಇದೇ ಮನೋಭಾವದಿಂದ ನೈನಿತಾಲ್ ಜಿಲ್ಲೆಯ ಕೆಲವು ಯುವಕರು ಮಕ್ಕಳಿಗಾಗಿ ವಿಶಿಷ್ಟವಾದ ಕುದುರೆ ಗ್ರಂಥಾಲಯವನ್ನು ಪ್ರಾರಂಭಿಸಿದ್ದಾರೆ. ಇದರ ವಿಶೇಷತೆ ಎಂದರೆ ಅತ್ಯಂತ ದೂರದ ಪ್ರದೇಶಗಳಲ್ಲೂ ಪುಸ್ತಕಗಳು ಮಕ್ಕಳನ್ನು ತಲುಪುತ್ತಿವೆ. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದೆ ಎಂದಿದ್ದಾರೆ.
ನೈನಿತಾಲ್‌ನ 12 ಹಳ್ಳಿಗಳಿಗೂ ಘೋಡಾ ಲೈಬ್ರರಿ (ಕುದುರೆ ಲೈಬ್ರರಿ) ಮೂಲಕ ಪುಸ್ತಕ ತಲುಪಿಸಲಾಗುತ್ತಿದೆ. ಮಕ್ಕಳನ್ನು ಶಿಕ್ಷಣದೊಂದಿಗೆ ಸಂಪರ್ಕಿಸಲು ಸ್ಥಳೀಯರೂ ಮುಂದೆ ಬರುತ್ತಿದ್ದಾರೆ. ಈ ಘೋಡಾ ಗ್ರಂಥಾಲಯದ ಮೂಲಕ ದೂರದ ಹಳ್ಳಿಗಳಲ್ಲಿ ವಾಸಿಸುವ ಮಕ್ಕಳಿಗೆ ಶಾಲಾ ಪುಸ್ತಕಗಳ ಹೊರತಾಗಿ ಕವಿತೆಗಳು, ಕಥೆಗಳು ಮತ್ತು ನೈತಿಕ ಶಿಕ್ಷಣ ಪುಸ್ತಕಗಳನ್ನು ಓದಲು ಸಂಪೂರ್ಣ ಅವಕಾಶವನ್ನು ಪಡೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅಲ್ಲದೆ, ಮಕ್ಕಳು ಈ ವಿಶಿಷ್ಟ ಗ್ರಂಥಾಲಯವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.
ಘೋಡಾ ಲೈಬ್ರರಿ ಎಂದರೇನು?: ನೈನಿತಾಲ್ ಜಿಲ್ಲೆಯ ದೂರದ ಕೋಟಬಾಗ್ ಅಭಿವೃದ್ಧಿ ಬ್ಲಾಕ್‌ನ ಬಘ್ನಿ, ಜಲ್ನಾ, ಮಹಲ್ಧುರ, ಅಲೇಖ್, ಗೌತಿಯಾ, ಧಿನ್ವಖರಕ್ ಹಾಗೂ ಬಂಸಿ ಗ್ರಾಮಗಳಲ್ಲಿ ಕುದುರೆಗಳು ಪುಸ್ತಕಗಳನ್ನು ಹೊತ್ತು ಸಾಗಿ ಮಕ್ಕಳಿಗೆ ಅಕ್ಷರ ಕಲಿಕೆಗೆ ನೀರೆರೆಯುತ್ತಿವೆ. ಸಂಕಲ್ಪ್ ಯೂತ್ ಫೌಂಡೇಶನ್ ಸಂಸ್ಥೆಯ ನೆರವಿನಿಂದ ಮಲೆನಾಡಿನ ಮನೆಗಳಿಗೆ ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ಇಲ್ಲಿ ತಲುಪಿಸಲಾಗುತ್ತಿದೆ. ಯುವಕರಾದ ಶುಭಂ, ಸುಭಾಷ್ ಮತ್ತಿತರರು ಈ ಸಂಚಾರಿ ಗ್ರಂಥಾಲಯದ ಮೂಲಕ ಪ್ರತಿ ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪುಸ್ತಕಗಳೊಂದಿಗೆ ಮಕ್ಕಳನ್ನು ಸಂಪರ್ಕಿಸುವುದು ಇದರ ಉದ್ದೇಶವಾಗಿದೆ.
-
'मन की बात' कार्यक्रम में आदरणीय प्रधानमंत्री श्री @narendramodi जी ने जनपद नैनीताल के युवाओं द्वारा शुरू की गई "घोडा लाइब्रेरी" का जिक्र किया। माननीय प्रधानमंत्री जी ने इस अभूतपूर्व कार्य में सहयोग करने हेतु स्थानीय लोगों की भी प्रशंसा की।
— Pushkar Singh Dhami (@pushkardhami) September 24, 2023 " class="align-text-top noRightClick twitterSection" data="
घोड़े की मदद से किताबों को दुर्गम… pic.twitter.com/mDCt0SES3N
">'मन की बात' कार्यक्रम में आदरणीय प्रधानमंत्री श्री @narendramodi जी ने जनपद नैनीताल के युवाओं द्वारा शुरू की गई "घोडा लाइब्रेरी" का जिक्र किया। माननीय प्रधानमंत्री जी ने इस अभूतपूर्व कार्य में सहयोग करने हेतु स्थानीय लोगों की भी प्रशंसा की।
— Pushkar Singh Dhami (@pushkardhami) September 24, 2023
घोड़े की मदद से किताबों को दुर्गम… pic.twitter.com/mDCt0SES3N'मन की बात' कार्यक्रम में आदरणीय प्रधानमंत्री श्री @narendramodi जी ने जनपद नैनीताल के युवाओं द्वारा शुरू की गई "घोडा लाइब्रेरी" का जिक्र किया। माननीय प्रधानमंत्री जी ने इस अभूतपूर्व कार्य में सहयोग करने हेतु स्थानीय लोगों की भी प्रशंसा की।
— Pushkar Singh Dhami (@pushkardhami) September 24, 2023
घोड़े की मदद से किताबों को दुर्गम… pic.twitter.com/mDCt0SES3N
ಮಳೆಗಾಲದಲ್ಲಿ ಶಾಲೆಗಳನ್ನು ಮುಚ್ಚಬೇಕಾದಾಗ ಈ ಗ್ರಂಥಾಲಯವು ಸಹಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ಸಂಚಾರಿ ಗ್ರಂಥಾಲಯದಿಂದ ಓದುವ ಅವಕಾಶ ದೊರೆಯಿತು. ಪುಸ್ತಕಗಳನ್ನು ಒದಗಿಸುವ ಶುಭಂ ಬಧಾನಿ ಅವರು ಬಘ್ನಿ, ಛಾಡಾ ಮತ್ತು ಜಲ್ನಾ ಗ್ರಾಮಗಳ ಕೆಲವು ಯುವಕರು ಮತ್ತು ಸ್ಥಳೀಯ ಶಿಕ್ಷಣ ಪ್ರೇರಕರ ಸಹಾಯದಿಂದ ಘೋಡಾ ಗ್ರಂಥಾಲಯವನ್ನು ಪ್ರಾರಂಭಿಸಿದರು. ಆರಂಭಿಕ ಹಂತದಲ್ಲಿ, ಗ್ರಾಮ ಸಭೆ ಜಲ್ನಾ ನಿವಾಸಿ ಕವಿತಾ ರಾವತ್ ಮತ್ತು ಬಘ್ನಿ ನಿವಾಸಿ ಸುಭಾಷ್ ಬಧಾನಿ ಈ ಅಭಿಯಾನದೊಂದಿಗೆ ಸಂಬಂಧ ಹೊಂದಿದ್ದರು. ಕ್ರಮೇಣ ಹಳ್ಳಿಗಳ ಇತರ ಕೆಲವು ಯುವಕರು ಮತ್ತು ಸ್ಥಳೀಯ ಪೋಷಕರು ಸಹ ಈ ಅಭಿಯಾನದಲ್ಲಿ ಸೇರಿಕೊಂಡರು.
ಇದನ್ನೂ ಓದಿ: ಕುದುರೆ ಗ್ರಂಥಾಲಯ! ಉತ್ತರಾಖಂಡದ ಗುಡ್ಡಗಾಡು ಮಕ್ಕಳ ಅಕ್ಷರ ಕಲಿಕೆಗೆ ಆಸರೆ