ನವದೆಹಲಿ: 'ಪ್ರತಿಯೊಬ್ಬ ವೀರನ ಹೃದಯದಲ್ಲಿ ಒಂದು ಸಿಂಹ ನಿದ್ರಿಸುತ್ತಿರುತ್ತದೆ' ಅನ್ನೋದು ಟರ್ಕಿಶ್ ಗಾದೆ. ಈ ಗಾದೆ ಸಿಂಹದ ಪರಾಕ್ರಮವನ್ನು ಸೂಚಿಸುತ್ತದೆ. 'ಸತ್ಯ ಎಂಬುದು ಸಿಂಹವಿದ್ದ ಹಾಗೆ. ಅದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ, ಬೇರೊಬ್ಬರ ಅಗತ್ಯವಿಲ್ಲ ಎಂಬುದು ತತ್ವಜ್ಞಾನಿಯೋರ್ವ ಸಿಂಹಕ್ಕೆ ಸತ್ಯವನ್ನು ಹೋಲಿಸಿ ಹೇಳಿರುವ ಮತ್ತೊಂದು ಮಾತು. ಈ ರೀತಿಯಾಗಿ ಸಾಕಷ್ಟು ಮಂದಿ ಸಿಂಹವನ್ನು ಪರಾಕ್ರಮ, ಧೈರ್ಯಗಳಿಗೆ ಸಂಕೇತವನ್ನಾಗಿ ಬಳಸಿದ್ದಾರೆ.
-
The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021 " class="align-text-top noRightClick twitterSection" data="
">The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021
ವಿಶ್ವ ಸಿಂಹಗಳ ದಿನ. ಸಿಂಹಗಳ ರಕ್ಷಣೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಆಗಸ್ಟ್ 10ರಂದು ವಿಶ್ವ ಸಿಂಹಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಸ್ತುತ ಐಯುಸಿಎನ್ (International Union for Conservation of Nature) ವರದಿ ಸಿಂಹಗಳನ್ನು ಕೆಂಪು ಪಟ್ಟಿಗೆ ಸೇರಿಸಿರುವ ಕಾರಣದಿಂದ ಅವುಗಳ ರಕ್ಷಣೆಗೆಂದು ಒಂದು ದಿನದ ಅನಿವಾರ್ಯತೆಯಿದೆ.
ಮೃಗರಾಜ ಅಥವಾ ಕಾಡಿನ ರಾಜ ಎಂದೇ ಹೆಸರುವಾಸಿಯಾಗಿರುವ ಸಿಂಹಗಳ ಸಂಖ್ಯೆ ಭಾರತದ ಹಲವೆಡೆ ಹೆಚ್ಚಾಗುತ್ತಿದೆ ಎಂಬುದು ಸಂತಸ ವಿಚಾರ. ಭಾರತದ ಗುಜರಾತ್ನಲ್ಲಿರುವ ಗಿರ್ ಕಾಡುಗಳು ಏಷ್ಯಾಟಿಕ್ ಸಿಂಹಗಳಿಗೆ ಹೆಸರುವಾಸಿಯಾಗಿದ್ದು, ಈ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ.
ಸಿಂಹಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು...
- ಸಿಂಹಗಳ ಘರ್ಜನೆ ಸುಮಾರು 45 ಕಿಲೋಮೀಟರ್ವರೆಗೆ ಕೇಳಬಲ್ಲದು
- ಸಾಮಾನ್ಯವಾಗಿ ಸಿಂಹಗಳು ರಾತ್ರಿ ಬೇಟೆಯಾಡುತ್ತವೆ. ಅವುಗಳ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿವೆ.
- ಹೆಣ್ಣು ಸಿಂಹಗಳು ಚಿಕ್ಕವಾಗಿದ್ದು, ಗಂಡು ಸಿಂಹಗಳಿಗಿಂತ ಹೆಚ್ಚು ಬೇಗ ಬೇಟೆಯಾಡುತ್ತವೆ.
- ಸಿಂಹಗಳಿಗೆ ದಟ್ಟವಾದ ಕಾಡುಗಳಿಗಿಂತ, ಕುರುಚಲು ಕಾಡು, ಬಂಡೆಗಳು ಇಷ್ಟ
- ಮರುಭೂಮಿಗಳಲ್ಲೂ ಕೂಡಾ ಸಿಂಹಗಳು ವಾಸಿಸುವ ಸಾಮರ್ಥ್ಯವಿದೆ.
- ಒಂದು ಬಾರಿ ಸುಮಾರು 40 ಕೆ.ಜಿ ಮಾಂಸವನ್ನು ಸಿಂಹಗಳು ತಿನ್ನಬಲ್ಲವು.
- 1972ಕ್ಕೂ ಮೊದಲು ಭಾರತದ ರಾಷ್ಟ್ರೀಯ ಪ್ರಾಣಿ ಸಿಂಹ ಆಗಿತ್ತು.
ಭಾರತದಲ್ಲಿರುವ ಸಿಂಹಗಳ ಬಗ್ಗೆ..
ಭಾರತದಲ್ಲಿ ಗಿರ್ ಕಾಡುಗಳಲ್ಲಿ ಸಿಂಹಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವುಗಳನ್ನು ಏಷ್ಯಾಟಿಕ್ ಸಿಂಹಗಳು ಎಂದು ಕರೆಯಾಗುತ್ತಿದೆ. ಈ ಸಿಂಹಗಳ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ ಪರ್ಸಿಕಾ. ಇವುಗಳ ಎತ್ತರ ಸುಮಾರು ಸರಾಸರಿ 110 ಸೆಂಟಿಮೀಟರ್ ಇರುತ್ತದೆ.
ಇದನ್ನೂ ಓದಿ: 2024ರ ವೇಳೆಗೆ ಪ್ರತಿ 1,000 ಜನಸಂಖ್ಯೆಗೆ ಓರ್ವ ವೈದ್ಯ: ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್
ಸಿಂಹಗಳನ್ನು ವನ್ಯಜೀವಿ (ಸಂರಕ್ಷಣೆ) ಕಾಯಿದೆ-1972 ಶೆಡ್ಯೂಲ್ 1ರಲ್ಲಿ ಸಿಂಹಗಳನ್ನು ಸೇರಿಸಲಾಗಿದೆ. ಐಯುಸಿಎನ್ ಸಿಂಹಗಳನ್ನು ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದು, ಅಂದರೆ ಈ ಸಿಂಹಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳೆಂದು ಪಟ್ಟಿ ಮಾಡಲಾಗಿದೆ. ಈ ಸಿಂಹಗಳು ಆಫ್ರಿಕನ್ ಸಿಂಹಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ವಯಸ್ಕ ಗಂಡು ಸಿಂಹದ ತೂಕ 160ರಿಂದ 190ಕೆಜಿ ಇದ್ದರೆ ಮತ್ತು ಹೆಣ್ಣು ಸಿಂಹದ ತೂಕ 110ರಿಂದ 120ಕೆಜಿ ಇರುತ್ತದೆ.
ಪ್ರಧಾನಿ ಮೋದಿ ಟ್ವೀಟ್
-
The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021 " class="align-text-top noRightClick twitterSection" data="
">The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021The lion is majestic and courageous. India is proud to be home to the Asiatic Lion. On World Lion Day, I convey my greetings to all those passionate about lion conservation. It would make you happy that the last few years have seen a steady increase in India’s lion population. pic.twitter.com/GaCEXnp7hG
— Narendra Modi (@narendramodi) August 10, 2021
ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು, ಸಿಂಹವು ಧೈರ್ಯಶಾಲಿ. ಏಷಿಯಾಟಿಕ್ ಸಿಂಹಕ್ಕೆ ತವರು ಎಂದು ಭಾರತ ಹೆಮ್ಮೆ ಪಡುತ್ತದೆ. ವಿಶ್ವ ಸಿಂಹಗಳ ದಿನದಂದು, ಸಿಂಹ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ನನ್ನ ಶುಭಾಶಯ ತಿಳಿಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸಿಂಹಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಎಂಬುದು ಸಂತಸದ ವಿಚಾರ ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ನಾನು ಗುಜರಾತ್ ಸಿಎಂ ಆಗಿದ್ದಾಗ, ಗಿರ್ ಸಿಂಹಗಳಿಗೆ ಸುರಕ್ಷಿತ ಆವಾಸಸ್ಥಾನ ಒದಗಿಸುವ ಕೆಲಸ ಮಾಡಲು ನನಗೆ ಅವಕಾಶವಿತ್ತು. ಈ ವೇಳೆಯೇ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಸಿಂಹಗಳ ರಕ್ಷಣೆಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.