ಜೈಪುರ (ರಾಜಸ್ಥಾನ) : ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಕಲ್ಲು ತೂರಾಟ, ಗಲಭೆ, ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಕಾನೂನು ಉಲ್ಲಂಘನೆಯಿಂದ ರಾಜ್ಯವನ್ನು ರಕ್ಷಿಸಬೇಕಿದೆ. ಹೀಗಾಗಿ ಬಿಜೆಪಿಯನ್ನು ಗೆಲ್ಲಿಸಿ" ಎಂದು ಅವರು ಮನವಿ ಮಾಡಿದರು.
-
#WATCH | At Chittorgarh, Rajasthan: Prime Minister Narendra Modi says, "I feel pain when atrocities take place against daughters anywhere in the country but Congress has made this a tradition in Rajasthan... Every woman and daughter of Rajasthan is saying Bjp will come to power… pic.twitter.com/UxkmJfPmHu
— ANI (@ANI) October 2, 2023 " class="align-text-top noRightClick twitterSection" data="
">#WATCH | At Chittorgarh, Rajasthan: Prime Minister Narendra Modi says, "I feel pain when atrocities take place against daughters anywhere in the country but Congress has made this a tradition in Rajasthan... Every woman and daughter of Rajasthan is saying Bjp will come to power… pic.twitter.com/UxkmJfPmHu
— ANI (@ANI) October 2, 2023#WATCH | At Chittorgarh, Rajasthan: Prime Minister Narendra Modi says, "I feel pain when atrocities take place against daughters anywhere in the country but Congress has made this a tradition in Rajasthan... Every woman and daughter of Rajasthan is saying Bjp will come to power… pic.twitter.com/UxkmJfPmHu
— ANI (@ANI) October 2, 2023
ಚಿತ್ತೋರ್ಗಢದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ ಬೊಕ್ಕಸ ತುಂಬುವ ಕೆಲಸ ಮಾಡುತ್ತಿರುವ ಸರ್ಕಾರವನ್ನು ಕಿತ್ತೊಗೆಯಬೇಕಿದೆ. ವೀರಯೋಧರಾದ ಮಹಾರಾಣಾ ಪ್ರತಾಪ್ ಮತ್ತು ರಾಣಿ ಪದ್ಮಿನಿಯ ನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಪುಣ್ಯಭೂಮಿಯಲ್ಲಿ ಕಲ್ಲು ತೂರಾಟ, ಗಲಭೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದನ್ನೆಲ್ಲಾ ಮಟ್ಟಹಾಕುವ ಕಾಲ ಸನ್ನಿಹಿತವಾಗಿದೆ" ಎಂದು ಹೇಳಿದರು.
"ಸೋಲೊಪ್ಪಿಕೊಂಡ ಸಿಎಂ ಗೆಹ್ಲೋಟ್": "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಯಾವುದೇ ಯೋಜನೆಯನ್ನು ನಿಲ್ಲಿಸಬೇಡಿ ಎಂದು ಹೇಳಿಕೆ ನೀಡುವ ಮೂಲಕ ಸಿಎಂ ಅಶೋಕ್ ಗೆಹ್ಲೋಟ್ ಅವರು ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಬದಲಿಗೆ ಅವುಗಳನ್ನು ಇನ್ನಷ್ಟು ಸುಧಾರಣೆ ಮಾಡುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.
-
#WATCH | Rajasthan is saying with great confidence and trust - BJP will come, hooliganism will go, BJP will come and stop the riots, BJP will come and stop stone pelting, BJP will come and stop dishonesty, BJP will come, it will bring women security, BJP will come and bring… pic.twitter.com/4moNI3JTHx
— ANI (@ANI) October 2, 2023 " class="align-text-top noRightClick twitterSection" data="
">#WATCH | Rajasthan is saying with great confidence and trust - BJP will come, hooliganism will go, BJP will come and stop the riots, BJP will come and stop stone pelting, BJP will come and stop dishonesty, BJP will come, it will bring women security, BJP will come and bring… pic.twitter.com/4moNI3JTHx
— ANI (@ANI) October 2, 2023#WATCH | Rajasthan is saying with great confidence and trust - BJP will come, hooliganism will go, BJP will come and stop the riots, BJP will come and stop stone pelting, BJP will come and stop dishonesty, BJP will come, it will bring women security, BJP will come and bring… pic.twitter.com/4moNI3JTHx
— ANI (@ANI) October 2, 2023
"ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈಗಾಗಲೇ ಯೋಜನೆಗಳ ವಿಚಾರವಾಗಿ ನಿಲ್ಲಿಸದಂತೆ ವಿನಂತಿಸಿಕೊಂಡಿದ್ದಾರೆ. ಇದರರ್ಥ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಮೊದಲೇ ಗ್ರಹಿಸಿದ್ದಾರೆ. ಯೋಜನೆಗಳನ್ನು ನಿಲ್ಲಿಸಬಾರದು ಎಂದು ಸಾರ್ವಜನಿಕವಾಗಿ ಕೇಳಿಕೊಳ್ಳುವ ಮೂಲಕ ಅವರು ಬಿಜೆಪಿಯನ್ನು ಅಭಿನಂದಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಯಾವುದೇ ಯೋಜನೆಯನ್ನು ಬಿಜೆಪಿ ನಿಲ್ಲಿಸುವುದಿಲ್ಲ" ಎಂದು ಅಭಯ ನೀಡಿದರು.
"ಆತ್ಮಸಾಕ್ಷಿಗೆ ಮತ ನೀಡಿ": "ಕಾಂಗ್ರೆಸ್ ಸರ್ಕಾರ ಸ್ವಾರ್ಥ, ಸ್ವಹಿತಾಸಕ್ತಿಯಿಂದ ಕೂಡಿದೆ. ಅದನ್ನು ತೊಲಗಿಸಲು ಜನರು 'ಆತ್ಮಸಾಕ್ಷಿ'ಯಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಪ್ರಧಾನಿ ಮೋದಿ ಅವರು ಕೋರಿದರು. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ. ಅಪರಾಧದಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ. ಇವೆಲ್ಲವನ್ನೂ ತೊಡೆದುಹಾಕುವ ಬಿಜೆಪಿ ಸರ್ಕಾರ ಮುಂದೆ ಬರಲಿದೆ. ಇದು ನನ್ನ ಗ್ಯಾರಂಟಿ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
-
#WATCH | At Chittorgarh, Rajasthan: Prime Minister Narendra Modi says "...CM Ashok Gehlot is aware that the countdown for Congress's farewell has begun. Gehlot ji himself is confident that he is going and that is why he has already congratulated BJP. He is requesting that after… pic.twitter.com/B1sOJPUHVB
— ANI (@ANI) October 2, 2023 " class="align-text-top noRightClick twitterSection" data="
">#WATCH | At Chittorgarh, Rajasthan: Prime Minister Narendra Modi says "...CM Ashok Gehlot is aware that the countdown for Congress's farewell has begun. Gehlot ji himself is confident that he is going and that is why he has already congratulated BJP. He is requesting that after… pic.twitter.com/B1sOJPUHVB
— ANI (@ANI) October 2, 2023#WATCH | At Chittorgarh, Rajasthan: Prime Minister Narendra Modi says "...CM Ashok Gehlot is aware that the countdown for Congress's farewell has begun. Gehlot ji himself is confident that he is going and that is why he has already congratulated BJP. He is requesting that after… pic.twitter.com/B1sOJPUHVB
— ANI (@ANI) October 2, 2023
"ಭ್ರಷ್ಟಾಚಾರದ ವಿರುದ್ಧ ಕ್ರಮ": "ದೇಶದ ಎಲ್ಲಿಯಾದರೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಅದು ನನಗೆ ನೋವು ತರುತ್ತದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಇದನ್ನೇ ಸಂಪ್ರದಾಯವನ್ನಾಗಿ ಮಾಡಿಕೊಂಡಿದೆ. ಭ್ರಷ್ಟಾಚಾರ ಮತ್ತು ಮಹಿಳೆಯರ ಸುರಕ್ಷತೆಯ ವಿಷಯದ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧತೆ ಹೊಂದಿಲ್ಲ" ಎಂದು ಪ್ರಧಾನಿ ಆರೋಪಿಸಿದರು.
"ಅಪರಾಧ, ಗಲಭೆಗಳು, ಮಹಿಳೆಯರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯಗಳ ವಿಷಯದಲ್ಲಿ ರಾಜಸ್ಥಾನ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ತನಿಖೆ ನಡೆಸಲಾಗುವುದು. ಎಲ್ಲಾ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಮುಂದುವರಿಸಲಾಗುವುದು" ಎಂದು ಜನರಿಗೆ ಭರವಸೆ ನೀಡಿದರು.
ಇದನ್ನೂ ಓದಿ: ಗಾಂಧಿ ಜಯಂತಿ: ರಾಜ್ಘಾಟ್ನಲ್ಲಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ, ಖರ್ಗೆ