ETV Bharat / bharat

ಪ್ರಧಾನಿ ನರೇಂದ್ರ ಮೋದಿ- ನೇಪಾಳ ಪ್ರಧಾನಿ ಭೇಟಿ.. ಉಭಯ ರಾಷ್ಟ್ರಗಳ ಸಹಕಾರದ ಬಗ್ಗೆ ಚರ್ಚೆ

author img

By

Published : Apr 2, 2022, 3:56 PM IST

ದೆಹಲಿಯಲ್ಲಿರುವ ಹೈದರಾಬಾದ್​ ಹೌಸ್​ನಲ್ಲಿ ನೇಪಾಳ ಪ್ರಧಾನಿ ಶೇರ್​ ಬಹದ್ದೂರ್​ ದೇವುಬಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಭೇಟಿಯಾಗಿ ಉಭಯ ರಾಷ್ಟ್ರಗಳ ಸಹಕಾರದ ಕುರಿತು ಚರ್ಚಿಸಿದರು.

pm-narendra
ಪ್ರಧಾನಿ ಭೇಟಿ

ನವದೆಹಲಿ: ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಶೇರ್​ ಬಹದ್ದೂರ್​ ದೇವುಬಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಕುರಿತು ನಾಯಕರು ಚರ್ಚಿಸಿದರು.

ವಿವಿಧ ಕ್ಷೇತ್ರಗಳಲ್ಲಿ ನೇಪಾಳ ಮತ್ತು ಭಾರತದ ಮಧ್ಯೆ ಇರುವ ಸಹಕಾರವನ್ನು ಮುನ್ನಡೆಸುವ ಬಗ್ಗೆ ಪ್ರಸ್ತಾಪ ನಡೆದಿದೆ. ಅಲ್ಲದೇ, ನಾಯಕರ ಮಾತುಕತೆಯ ನಂತರ ದೇವುಬಾ ಮತ್ತು ಮೋದಿ ಅವರು ಜನಕ್‌ಪುರ - ಜಯನಗರ ರೈಲಿಗೆ ಚಾಲನೆ ನೀಡಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರದಂದು ನೇಪಾಳದ ಪ್ರಧಾನ ಮಂತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ, ನೇಪಾಳಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಬಂಧವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದರು. ಈ ವೇಳೆ, ನೇಪಾಳ ಪ್ರಧಾನಿ ದೇವುಬಾರ ಪತ್ನಿ ಅರ್ಜು ದೇವುಬಾ, ವಿದೇಶಾಂಗ ಸಚಿವ ನಾರಾಯಣ ಖಡ್ಕಾ, ಇಂಧನ ಮತ್ತು ಜಲಸಂಪನ್ಮೂಲ ಸಚಿವ ಪಂಫಾ ಭೂಸಾಲ್ ಮತ್ತು ಆರೋಗ್ಯ ಸಚಿವ ಮಹೇಂದ್ರ ರೈ ಯಾದವ್ ಸಭೆಯಲ್ಲಿದ್ದರು.

ಓದಿ: ಕಾಂಗ್ರೆಸ್​​ನಲ್ಲಿ ಟಿಕೆಟ್ ಪಡೆಯುವುದು ಹಿಂದಿನಷ್ಟು ಸುಲಭವಲ್ಲ.. ಸ್ಪಷ್ಟ ಸಂದೇಶ ನೀಡಿದ ರಾಹುಲ್!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.