ನವದೆಹಲಿ: ಭಾರತ-ಜಪಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಭಾಗಿಯಾದರು. ಈ ವೇಳೆ ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ 3.2 ಲಕ್ಷ ಕೋಟಿ ರೂ.(42 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ಜಪಾನ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
-
#WATCH Japan will invest 5 trillion Yen or Rs 3.2 lakh crores in the next five years in India, says PM Modi pic.twitter.com/IlpJQbbmAp
— ANI (@ANI) March 19, 2022 " class="align-text-top noRightClick twitterSection" data="
">#WATCH Japan will invest 5 trillion Yen or Rs 3.2 lakh crores in the next five years in India, says PM Modi pic.twitter.com/IlpJQbbmAp
— ANI (@ANI) March 19, 2022#WATCH Japan will invest 5 trillion Yen or Rs 3.2 lakh crores in the next five years in India, says PM Modi pic.twitter.com/IlpJQbbmAp
— ANI (@ANI) March 19, 2022
2018ರ ಬಳಿಕ ಭಾರತ-ಜಪಾನ್ ನಡುವೆ 14ನೇ ಶೃಂಗಸಭೆ ನಡೆದಿದ್ದು, ಈ ವೇಳೆ ಉಭಯ ದೇಶದ ನಾಯಕರು ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುವ ದೇಶಗಳ ಪೈಕಿ ಜಪಾನ್ ಕೂಡ ಒಂದಾಗಿದ್ದು, ಈಗಾಗಲೇ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ನಲ್ಲಿ ಭಾರತದ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರಗತಿ, ಸಮೃದ್ಧಿ ಮತ್ತು ಪಾಲುದಾರಿಕೆಯಲ್ಲಿ ಭಾರತ-ಜಪಾನ್ ಸಂಬಂಧ ಗಟ್ಟಿಯಾಗಿದ್ದು, ದೇಶದಲ್ಲಿರುವ ಜಪಾನ್ನ ಎಲ್ಲ ಕಂಪನಿಗಳಿಗೆ ಸಾಧ್ಯವಾಗುವಷ್ಟು ಬೆಂಬಲ ನೀಡಲು ನಾವು ಸಿದ್ಧರಾಗಿದ್ದೇವೆ. ಜಪಾನ್ ಪ್ರಧಾನಿ ಕಿಶಿಡಾ ಭಾರತದ ಹಳೆಯ ಸ್ನೇಹಿತರಾಗಿದ್ದು, ಈ ಹಿಂದೆ ಅವರು ಜಪಾನ್ ವಿದೇಶಾಂಗ ಸಚಿವರಾಗಿದ್ದ ವೇಳೆ ಅನೇಕ ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದೇನೆ ಎಂದರು.
-
Yōkoso Prime Minister!
— Arindam Bagchi (@MEAIndia) March 19, 2022 " class="align-text-top noRightClick twitterSection" data="
Japanese PM @kishida230 arrives in New Delhi for the 14th India-Japan Annual Summit. He was received by Minister @RailMinIndia @AshwiniVaishnaw.
This is PM Kishida’s first bilateral foreign visit after assuming office. pic.twitter.com/QQZHULUp1l
">Yōkoso Prime Minister!
— Arindam Bagchi (@MEAIndia) March 19, 2022
Japanese PM @kishida230 arrives in New Delhi for the 14th India-Japan Annual Summit. He was received by Minister @RailMinIndia @AshwiniVaishnaw.
This is PM Kishida’s first bilateral foreign visit after assuming office. pic.twitter.com/QQZHULUp1lYōkoso Prime Minister!
— Arindam Bagchi (@MEAIndia) March 19, 2022
Japanese PM @kishida230 arrives in New Delhi for the 14th India-Japan Annual Summit. He was received by Minister @RailMinIndia @AshwiniVaishnaw.
This is PM Kishida’s first bilateral foreign visit after assuming office. pic.twitter.com/QQZHULUp1l
ಇದನ್ನೂ ಓದಿ: ಭಾರತದಲ್ಲಿ 42 ಬಿಲಿಯನ್ ಡಾಲರ್ ಹೂಡಿಕೆಗೆ ಜಪಾನ್ ಸಜ್ಜು.. ಮೋದಿ-ಜಪಾನ್ ಪಿಎಂ ಭೇಟಿ ವೇಳೆ ಒಪ್ಪಂದ
ಇದೇ ವೇಳೆ ಮಾತನಾಡಿರುವ ಜಪಾನ್ ಪ್ರಧಾನಿ, ಅನೇಕ ರೀತಿಯ ಗೊಂದಲಗಳಿಂದ ಇಡೀ ವಿಶ್ವ ಇಂದು ನಲುಗಿದೆ. ಭಾರತ-ಜಪಾನ್ ನಡುವಿನ ಪಾಲುದಾರಿಕೆ ಅತ್ಯಂತ ಪ್ರಭಾವಶಾಲಿಯಾಗಿದೆ. ಇಂದಿನ ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟಿನ ಬಗ್ಗೆ ಸಹ ಚರ್ಚೆ ನಡೆಸಲಾಗಿದ್ದು, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಇಂಡೋ-ಪೆಸಿಫಿಕ್ ಸಾಗರದಲ್ಲಿ ನಮಗೆ ಮುಕ್ತವಾಗಿ ಸಂಚಾರಕ್ಕಾಗಿ ಅವಕಾಶ ಸಿಗಬೇಕು ಎಂಬ ಇಂಗಿತ ವ್ಯಕ್ತಪಡಿಸಿರುವ ಜಪಾನ್ ಪಿಎಂ, ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಭಾರತ-ಜಪಾನ್ ಸದಾ ಬೆಂಬಲ ನೀಡುತ್ತವೆ ಎಂದು ತಿಳಿಸಿದರು.