ETV Bharat / bharat

ಮನ್​ ಕಿ ಬಾತ್​ಗೆ 100 ರ ಸಂಭ್ರಮ: ವಿಶ್ವಸಂಸ್ಥೆಯಲ್ಲಿಂದು ಮನದಾಳದ ಮಾತು ಪ್ರಸಾರ

author img

By

Published : Apr 30, 2023, 9:58 AM IST

ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮ ಇಂದು 100 ಕಂತುಗಳನ್ನು ಪೂರೈಸಲಿದೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೋದಿ ಭಾಷಣ ಕೇಳಿಬರಲಿದೆ.

ಮನ್​ ಕಿ ಬಾತ್​ಗೆ 100 ರ ಸಂಭ್ರಮ
ಮನ್​ ಕಿ ಬಾತ್​ಗೆ 100 ರ ಸಂಭ್ರಮ

ನವದೆಹಲಿ: ದೇಶದ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಯ್ದುಕೊಂಡ ಮಾರ್ಗವಾದ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ಗೆ ಇಂದು ಶತದ ಸಂಭ್ರಮ. 2014 ರಲ್ಲಿ ಆರಂಭವಾದ ಕಾರ್ಯಕ್ರಮ ಇಂದಿಗೆ 100ನೇ ಕಂತನ್ನು ಪೂರೈಸಲಿದೆ. ಪ್ರಧಾನಿ ಮೋದಿ ಅವರ ನೂರನೇ ಮಾಸಿಕ ರೇಡಿಯೋ ಭಾಷಣವನ್ನು ದೇಶಾದ್ಯಂತ ಕೇಳುವುದರ ಜೊತೆಗೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿಯೂ ಅವರ ಮಾತು ಧ್ವನಿಸಲಿದೆ ಎಂಬುದು ವಿಶೇಷ.

ಇಂದು 11 ಗಂಟೆಗೆ ಪ್ರಸಾರವಾಗಲಿರುವ ಮನ್​ ಕಿ ಬಾತ್​ ಕಾರ್ಯಕ್ರಮದ ಯಶಸ್ಸಿಯಾಗಿ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. 4 ಲಕ್ಷ ಕಡೆಗಳಲ್ಲಿ ಜನರು ಕೇಳುವಂತೆ ಮಾಡುತ್ತಿದೆ. ಅಲ್ಲದೇ, ವಿಶ್ವಸಂಸ್ಥೆಯಲ್ಲೂ ಇದರ ನೇರಪ್ರಸಾರವಾಗಲಿದೆ.

ಅಕ್ಟೋಬರ್​ 3, 2104 ರಂದು ಪ್ರಾರಂಭವಾದ ಈ ಕಾರ್ಯಕ್ರಮವು ಮಹಿಳೆಯರು, ಯುವಕರು ಮತ್ತು ರೈತರು ಸೇರಿದಂತೆ ಎಲ್ಲ ಸಾಮಾಜಿಕ ವರ್ಗಗಳನ್ನು ಒಳಗೊಂಡಿದೆ. ಇದು 22 ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೇ, ಫ್ರೆಂಚ್​, ಚೈನೀಸ್​, ಇಂಡೋನೇಷಿಯನ್​, ಟಿಬೆಟಿಯನ್​, ಬರ್ಮೀಸ್​, ಬಲೂಚಿ, ಅರೇಬಿಕ್​, ಪಶ್ತು, ಪರ್ಷಿಯನ್​, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರವಾಗುತ್ತದೆ.

100 ಕೋಟಿಗೂ ಹೆಚ್ಚು ಜನರು ಒಮ್ಮೆಯಾದರೂ ಮನ್ ಕಿ ಬಾತ್‌ ಕಾರ್ಯಕ್ರಮದ ಶ್ರೋತೃಗಳಾಗಿದ್ದಾರೆ. ನೇರವಾಗಿ ಜನರೊಂದಿಗೆ ಮಾತನಾಡುವ, ತಳಮಟ್ಟದ ಬದಲಾವಣೆ, ಜನರ ಸಾಧನೆಗಳನ್ನು ಕಾರ್ಯಕ್ರಮ ಪರಿಚಯಿಸುತ್ತದೆ. ಮನ್ ಕಿ ಬಾತ್​ನಲ್ಲಿ ಪ್ರಮುಖವಾಗಿ ಸ್ವಚ್ಛತೆ ಮತ್ತು ನೈರ್ಮಲ್ಯ, ಆರೋಗ್ಯ, ಸೌಖ್ಯ, ನೀರಿನ ಸಂರಕ್ಷಣೆ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಐದು ಪ್ರಮುಖ ವಿಷಯಗಳನ್ನು ಗುರುತಿಸಲಾಗಿದೆ.

ಈ ಕಾರ್ಯಕ್ರಮವನ್ನು ದೂರದರ್ಶನ ದೇಶಾದ್ಯಂತ ರಾಜಭವನಗಳಲ್ಲಿ ನೇರ ಪ್ರಸಾರ ಮಾಡಲಿದೆ. ಮುಂಬೈನಲ್ಲಿರುವ ರಾಜಭವನವು ಅಲ್ಲಿನ ನಾಗರಿಕರು ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು, ಮನ್ ಕಿ ಬಾತ್ ಒಂದು ವಿಶಿಷ್ಟ ಪ್ರಯೋಗವಾಗಿದ್ದು, ಅದು ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಿದೆ ಎಂದು ಹೊಗಳಿದ್ದರು.

ಬದಲಾಗುತ್ತಿರುವ ಕಾಲ ಮತ್ತು ವಿಭಿನ್ನ ಸಂವಹನ ಮಾಧ್ಯಮಗಳಿಂದಾಗಿ ಜನರು ಆಲ್ ಇಂಡಿಯಾ ರೇಡಿಯೊವನ್ನು ಬಹುತೇಕ ಮರೆತಿದ್ದಾರೆ. ಆದರೆ, ಪ್ರಧಾನಿ ಮನ್ ಕಿ ಬಾತ್ ಮೂಲಕ ಯುವ ಪೀಳಿಗೆಯನ್ನು ಸಂಪರ್ಕಿಸಿದರು. ಆಲ್ ಇಂಡಿಯಾ ರೇಡಿಯೋಗೆ ಹೊಸ ಆಯಾಮವನ್ನು ನೀಡಿದರು. ಪ್ರಧಾನಿ ಮೋದಿ ಅವರು ದೇಶದ ಪ್ರತಿ ಮನೆ ಮತ್ತು ಹಳ್ಳಿಗಳಿಗೆ ಆಲ್ ಇಂಡಿಯಾ ರೇಡಿಯೋವನ್ನು ಕೊಂಡೊಯ್ದರು ಎಂದು ಶಾ ಹೇಳಿದರು.

ದೇಶದ ಸಕಾರಾತ್ಮಕ ಶಕ್ತಿ ಮತ್ತು ಸೃಜನಶೀಲ ಶಕ್ತಿಯ ಅಭಿವ್ಯಕ್ತಿಗೆ ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿದೆ. ಮನ್ ಕಿ ಬಾತ್‌ನ 99 ಸಂಚಿಕೆಗಳ ಮೂಲಕ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಮಂತ್ರವನ್ನು ತಳಮಟ್ಟದಲ್ಲಿ ತಂದಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಕಾರ್ಯಕ್ರಮದಲ್ಲಿ ಮನ್ ಕಿ ಬಾತ್‌ನ 100 ಸಂಚಿಕೆಗಳನ್ನು ನೆನಪಿಸುವ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.

ಇಂದು ಏನೆಲ್ಲಾ ಇರುತ್ತೆ?: 100 ನೇ ಕಂತಿಕ ಕಾರ್ಯಕ್ರಮವನ್ನು ದೇಶದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಜನರಿಗೆ ಕೇಳಿಸುವಂತೆ ಬಿಜೆಪಿ ಯೋಜನೆ ರೂಪಿಸಿದೆ. 4 ಬೂತ್​ ಮಟ್ಟಗಳಲ್ಲಿ ಶ್ರವಣ ಕೇಂದ್ರಗಳನ್ನು ಆರಂಭಿಸಿದೆ. ದೇಶದ ಎಲ್ಲಾ ರಾಜಭವನ ಮತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ಗಣ್ಯರಿಗೆ ಭಾಷಣ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಕಳೆದ 99 ಕಂತುಗಳ ಪೈಕಿ ಮೋದಿ ಜೊತೆಗೆ ಮಾತನಾಡಿದ 500 ಜನರ ಪೈಕಿ 105 ಮಂದಿಯನ್ನು ದೆಹಲಿಗೆ ಆಹ್ವಾನಿಸಲಾಗಿದೆ. ಎಲ್ಲ ರಾಜ್ಯಗಳಿಂದ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ರಾಜಭವನಕ್ಕೆ ಆಹ್ವಾನಿಸಲಾಗಿದ್ದು, ಅವರೆಲ್ಲರೂ ರಾಜ್ಯಪಾಲರ ಜೊತೆಗೆ ಕುಳಿತು ಭಾಷಣ ಆಲಿಸಲಿದ್ದಾರೆ.

ಓದಿ: ಇಂದು ಕೋಲಾರ, ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಬೃಹತ್​ ಸಮಾವೇಶ: ಮೈಸೂರಲ್ಲಿ ಮೆಗಾ ರೋಡ್​​ ಶೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.