ETV Bharat / bharat

ಮೊದಲು ಚರ್ಚೆ ಆಮೇಲೆ ವಿಷಯ ಮಂಡನೆ: ಪ್ರಧಾನಿ ಕೊರೊನಾ ವಿಚಾರ ಪ್ರಸ್ತುತಿಗೆ ಖರ್ಗೆ ಖಡಕ್​ ಹೇಳಿಕೆ

ಪ್ರಧಾನಿ ಮೋದಿಯವರು ಕೊರೊನಾ ಬಗ್ಗೆ ಮಾಹಿತಿ ನೀಡಬೇಕು ಎಂದಾದರೆ ಸೆಂಟ್ರಲ್​ ಹಾಲ್​​ನಲ್ಲಿ ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರಿಗೆ ಪ್ರತ್ಯೇಕವಾಗಿ ನೀಡಲಿ. ಆದರೆ ಮೊದಲು ಸಂಸದರಿಗೆ ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

Mallikarjun Kharge
ಮಲ್ಲಿಕಾರ್ಜುನ ಖರ್ಗೆ
author img

By

Published : Jul 20, 2021, 11:23 AM IST

Updated : Jul 20, 2021, 11:49 AM IST

ನವದೆಹಲಿ: ಸಂಸತ್ತಿನಲ್ಲಿ ಕೋವಿಡ್​ಗೆ ಸಂಬಂಧಿಸಿದ ವಿಚಾರಗಳ ಚರ್ಚೆಗೆ ಕಾಂಗ್ರೆಸ್​ ಪಟ್ಟು ಹಿಡಿದಿದೆ. ಕೋವಿಡ್ ಸಂಬಂಧಿ ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡಲು ಮೊದಲು ಸಂಸದರಿಗೆ ಅವಕಾಶ ನೀಡಬೇಕು ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಕೊರೊನಾದಿಂದಾಗಿರುವ ಸಂಕಷ್ಟಗಳ ಬಗ್ಗೆ ಆಯಾ ಕ್ಷೇತ್ರಗಳ ಎಂಪಿಗಳು ಸದನದಲ್ಲಿ ಮೊದಲು ಚರ್ಚೆ ಮಾಡಲಿ. ಹೀಗಾಗಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ಕೋವಿಡ್​ ವಿಚಾರದ ಬಗ್ಗೆ ಪ್ರಧಾನಿಯವರು ಪೂರ್ಣ ವಿವರಣೆ ನೀಡಬೇಕಾದರೆ ಅವರು ಸೆಂಟ್ರಲ್​ ಹಾಲ್​​ನಲ್ಲಿ ನೀಡಲಿ. ಲೋಕಸಭಾ ಸದಸ್ಯರಿಗೆ ಮತ್ತು ರಾಜ್ಯಸಭಾ ಸದಸ್ಯರಿಗೆ ಪ್ರತ್ಯೇಕವಾಗಿ ವಿವರಿಸಲಿ ಎಂದು ಖರ್ಗೆ ಹೇಳಿದ್ದಾರೆ.

ಇನ್ನು ಪೆಗಾಸಸ್​ ಸಮಸ್ಯೆಯ ಬಗ್ಗೆ ಮಾತನಾಡಿದ ಅವರು, "ರಾಷ್ಟ್ರದ ಅಭಿವೃದ್ಧಿಗೆ ಯಾರೂ ಅಡ್ಡಿಯಾಗುತ್ತಿಲ್ಲ. ಬಿಜೆಪಿಯವರೇ ಅದನ್ನು ತಡೆದಿದ್ದಾರೆ. ಅವರು ಸೆಸ್ ವಿಧಿಸುವ ಮೂಲಕ, ಇಂಧನ ಬೆಲೆಯನ್ನು ಹೆಚ್ಚಿಸುವ ಮೂಲಕ, ಯೋಜನೆಗಳಿಗೆ ಹಣವನ್ನು ವ್ಯರ್ಥ ಮಾಡುವ ಮೂಲಕ ಲಕ್ಷ ಮತ್ತು ಕೋಟಿ ಹಣವನ್ನು ವ್ಯರ್ಥಮಾಡಿದ್ದಾರೆ" ಎಂದು ಖರ್ಗೆ ನೇರವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Last Updated : Jul 20, 2021, 11:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.