ETV Bharat / bharat

ನಾಳೆ ಗುಜರಾತ್​ಗೆ ಪ್ರಧಾನಿ ಮೋದಿ ಭೇಟಿ; ಬೃಹತ್ ರೋಡ್ ಶೋ - ಗುಜರಾತ್ ಪಂಚಾಯತ್ ಮಹಾಸಮ್ಮೇಳನ

ನಾಳೆ ಸಂಜೆ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಅವರು 11ನೇ ಖೇಲ್ ಮಹಾಕುಂಭವನ್ನು ಉದ್ಘಾಟಿಸಲಿದ್ದಾರೆ.

ಮಾರ್ಚ್ 11-12 ರಂದು ಗುಜರಾತ್‌ ಮೋದಿ ಭೇಟಿ : ಬೃಹತ್ ರೋಡ್ ಶೋ

author img

By

Published : Mar 10, 2022, 3:36 PM IST

ಅಹಮದಾಬಾದ್: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮತ್ತು ನಾಡಿದ್ದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ.

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕಮಲಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿವರೆಗೆ ನಡೆಯುವ ಬೃಹತ್ ರಸ್ತೆ ರ್ಯಾಲಿಯಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿ ಆರ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಮಾರ್ಚ್ 11 ರ ಸಂಜೆ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಅವರು 11 ನೇ ಖೇಲ್ ಮಹಾಕುಂಭವನ್ನು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಂತೆ ಯುಪಿಯಲ್ಲೂ ಮೂಢನಂಬಿಕೆ; ಸುಳ್ಳು ಮಾಡಿದ ಸಿಎಂ ಯೋಗಿ!

ಖೇಲ್ ಮಹಾಕುಂಭದಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಭಾಗವಹಿಸಲಿದ್ದಾರೆ. ಇದು ಸಾಂಪ್ರದಾಯಿಕ ಕ್ರೀಡೆಗಳಾದ ಕಬಡ್ಡಿ, ಖೋ-ಖೋ, ಟಗ್ ಆಫ್ ವಾರ್, ಯೋಗಾಸನ, ಮಲ್ಲಕಂಭ ಮತ್ತು ಆಧುನಿಕ ಕ್ರೀಡೆಗಳಾದ ಕಲಾತ್ಮಕ ಸ್ಕೇಟಿಂಗ್, ಟೆನ್ನಿಸ್ ಮತ್ತು ಫೆನ್ಸಿಂಗ್‌ನ ವಿಶಿಷ್ಟ ಸಂಗಮವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.