ನವದೆಹಲಿ : ಹನುಮ ಜಯಂತಿಯ ಹಿನ್ನೆಲೆಯಲ್ಲಿ ಗುಜರಾತ್‌ನ ಮೊರ್ಬಿಯಲ್ಲಿ 108 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಅನಾವರಣಗೊಳಿಸಲಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ (ಪಿಎಂಒ) ಶುಕ್ರವಾರ ಅಧಿಕೃತ ಹೇಳಿಕೆ ಪ್ರಕಟಿಸಿದೆ.
ಹನುಮ ಜಯಂತಿಯ ಪ್ರಯುಕ್ತ ಗುಜರಾತ್‌ನ ಮೊರ್ಬಿಯಲ್ಲಿ ಹನುಮಂತನ ವಿಗ್ರಹವನ್ನು ಮೋದಿ ಅನಾವರಣಗೊಳಿಸಲಿದ್ದಾರೆ. ಹನುಮನಿಗೆ ಸಂಬಂಧಿಸಿದ ಚಾರ್ ಧಾಮ್ ಯೋಜನೆಯಡಿ, ದೇಶದ ನಾಲ್ಕು ದಿಕ್ಕಿನಲ್ಲಿ ಹನುಮಂತನ ಮೂರ್ತಿಯನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಎರಡನೇ ವಿಗ್ರಹವನ್ನು ಪಶ್ಚಿಮ ದಿಕ್ಕಿನಲ್ಲಿರುವ, ಮೊರ್ಬಿಯ ಬಾಪು ಕೇಶವಾನಂದ ಸ್ವಾಮೀಜಿಗಳ ಆಶ್ರಮದಲ್ಲಿ ಸ್ಥಾಪಿಸಲಾಗಿದೆ.
ಈ ಯೋಜನೆಯ ಮೊದಲ ವಿಗ್ರಹವನ್ನು 2010 ರಲ್ಲಿ ಉತ್ತರ ದಿಕ್ಕಿನಲ್ಲಿರುವ ಶಿಮ್ಲಾದಲ್ಲಿ ಸ್ಥಾಪಿಸಲಾಗಿತ್ತು. ಜೊತೆಗೆ ದಕ್ಷಿಣ ದಿಕ್ಕಿನಲ್ಲಿನ ರಾಮೇಶ್ವರಂನಲ್ಲಿ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಅದರ ಕಾರ್ಯವು ನಿರ್ಮಾಣ ಹಂತದಲ್ಲಿದೆ ಎಂದು ಪಿಎಂಒ ತಿಳಿಸಿದೆ.
ಓದಿ : ಮಧುರೈ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತ.. ಇಬ್ಬರು ದುರ್ಮರಣ, 8 ಮಂದಿಗೆ ಗಾಯ