ETV Bharat / bharat

Mann Ki Baat: ಇಂದು 11 ಗಂಟೆಗೆ 102ನೇ ಕಂತಿನ ಪ್ರಧಾನಿ ಮೋದಿ 'ಮನ್​ ಕಿ ಬಾತ್​' - ಇಂದು 11 ಗಂಟೆಗೆ ಮನ್​ ಕಿ ಬಾತ್​

ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರ 102 ನೇ ಕಂತಿನ 'ಮನ್​ ಕಿ ಬಾತ್'​ ಕಾರ್ಯಕ್ರಮ ಪ್ರಸಾರವಾಗಲಿದೆ.

ಪ್ರಧಾನಿ ಮೋದಿ ಮನ್​ ಕಿ ಬಾತ್​
ಪ್ರಧಾನಿ ಮೋದಿ ಮನ್​ ಕಿ ಬಾತ್​
author img

By

Published : Jun 18, 2023, 7:29 AM IST

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಇಂದು (ಭಾನುವಾರ) ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 102ನೇ ಸಂಚಿಕೆಯಾಗಿದ್ದು, ಹಲವು ವಿಚಾರಗಳನ್ನು ಪ್ರಧಾನಿ ಮೋದಿ ಅವರು ದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಮೋದಿ ಅವರು ಮೊದಲ ಬಾರಿಗೆ ತಮ್ಮ ಆಲೋಚನೆ ಮತ್ತು ವಿಚಾರಗಳನ್ನು ಜನರೊಂದಿಗೆ ನೇರವಾಗಿ ಹಂಚಿಕೊಳ್ಳಲು ಮತ್ತು ಟಿವಿ, ಮೊಬೈಲ್​ಗಳ ಭರಾಟೆಯ ನಡುವೆ ರೇಡಿಯೋವನ್ನು ಪುನರುಜ್ಜೀವನ ನೀಡಲು 2014ರ ಅ.3 ರಂದು ವಿಜಯ ದಶಮಿ ಸಂದರ್ಭದಲ್ಲಿ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ನಿರಂತರವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಕಾರ್ಯಕ್ರಮ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದೆ.

100 ಎಪಿಸೋಡ್‌ ಪೂರೈಕೆ: ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೋದ ಮನ್​ ಕಿ ಬಾತ್​ ಕಾರ್ಯಕ್ರಮ ಕಳೆದ ಮೇ 26 ರಂದು ಪ್ರಸಾರವಾಗಿತ್ತು. ಇದು 101ನೇ ಎಪಿಸೋಡ್​ ಆಗಿತ್ತು. 9 ವರ್ಷಗಳಲ್ಲಿ ಇದು 100 ಕಂತುಗಳನ್ನು ಪೂರೈಸಿದೆ.

101 ರ ಕಂತಿನ ವಿಶೇಷ: ದೇಶದ ಒಂದು ಭಾಗದ ಯುವಕರು ಮತ್ತೊಂದು ಭಾಗಕ್ಕೆ ಪ್ರಯಾಣಿಸಿ ಅಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುವ 'ಯುವಸಂಗಮ ಯೋಜನೆ'ಯನ್ನು ಪ್ರಧಾನಿ ಶ್ಲಾಘಿಸಿದ್ದರು. ಯುವ ಸಂಗಮ್‌ನ ಮೊದಲ ಸುತ್ತಿನಲ್ಲಿ ಸುಮಾರು 1,200 ಯುವಕರು ದೇಶದ 22 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ. 'ಮನ್ ಕಿ ಬಾತ್' ನ 101 ನೇ ಸಂಚಿಕೆಯಲ್ಲಿ, 'ಯುವ ಸಂಗಮ'ದಲ್ಲಿ ಭಾಗಿಯಾಗಿರುವ ಕೆಲವರೊಂದಿಗೆ ಪ್ರಧಾನಿ ಸಂವಾದ ನಡೆಸಿ, ತಮ್ಮ ಅನುಭವಗಳನ್ನು ಆಧರಿಸಿದ ಬ್ಲಾಗ್ ಬರೆಯಬೇಕೆಂದು ಮನವಿ ಮಾಡಿದ್ದರು.

ಪ್ರಧಾನಿ ಅವರ ಭಾಷಣವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್‌ಗಳಲ್ಲಿ ಕೇಳಬಹುದು. ಆಲ್‌ ಇಂಡಿಯಾ ರೇಡಿಯೋ (AIR) ನ್ಯೂಸ್ ವೆಬ್‌ಸೈಟ್‌ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಪ್ರಸಾರವಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಐಆರ್‌ ನ್ಯೂಸ್, ಡಿಡಿ ನ್ಯೂಸ್, ಪಿಎಂಒ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತದೆ. ಮೊದಲು ಹಿಂದಿಯಲ್ಲಿ ಬಳಿಕ ಎಐಆರ್‌ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುತ್ತದೆ.

ಈ ಕಾರ್ಯಕ್ರಮವು ಮಹಿಳೆಯರು, ಯುವಕರು ಮತ್ತು ರೈತರು ಸೇರಿದಂತೆ ಎಲ್ಲ ಸಾಮಾಜಿಕ ವರ್ಗಗಳನ್ನು ಒಳಗೊಂಡಿದೆ. ಇದು 22 ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೇ, ಫ್ರೆಂಚ್​, ಚೈನೀಸ್​, ಇಂಡೋನೇಷಿಯನ್​, ಟಿಬೆಟಿಯನ್​, ಬರ್ಮೀಸ್​, ಬಲೂಚಿ, ಅರೇಬಿಕ್​, ಪಶ್ತು, ಪರ್ಷಿಯನ್​, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರವಾಗುತ್ತದೆ.

2017 ರಲ್ಲಿ ಆಲ್ ಇಂಡಿಯಾ ರೇಡಿಯೊ ಸಮೀಕ್ಷೆಯ ಪ್ರಕಾರ ಬಿಹಾರ, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಅತ್ಯಧಿಕ ಮನ್ ಕಿ ಬಾತ್ ಕೇಳುಗರಿದ್ದಾರೆ. ಆಂಧ್ರಪ್ರದೇಶ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಕಡಿಮೆ ಕೇಳುಗರಿದ್ದಾರೆ. 2017 ರಿಂದ ಮನ್ ಕಿ ಬಾತ್ ಪ್ರಾದೇಶಿಕ ಉಪಭಾಷೆಗಳಲ್ಲಿ ಲಭ್ಯವಾಗುತ್ತಿದೆ.

ಇದನ್ನೂ ಓದಿ: ಮನ್​ ಕಿ ಬಾತ್ 101ನೇ ಸಂಚಿಕೆ: ಯುವ ಸಂಗಮ ಕಾರ್ಯಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.