ETV Bharat / bharat

ಇಟಲಿಯಲ್ಲಿ ನಾಳೆ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ಮೋದಿ

ಭದ್ರತೆ ಮತ್ತು ಭಯೋತ್ಪಾದನೆ ವಿರೋಧಿ ಹೋರಾಟದ ಬಗ್ಗೆಯೂ ಇಲ್ಲಿ ಚರ್ಚೆಯಾಗಲಿದೆ. ಸಭೆಯ ಕಾರ್ಯಸೂಚಿಯು ಮಾನವೀಯ ಅಗತ್ಯಗಳಿಗೆ ಪ್ರತಿಕ್ರಿಯೆ ಮತ್ತು ಮೂಲ ಸೇವೆಗಳು ಮತ್ತು ಜೀವನೋಪಾಯದ ವಿಷಯಗಳನ್ನು ಒಳಗೊಂಡಿರುತ್ತವೆ..

ಮೋದಿ
ಮೋದಿ
author img

By

Published : Oct 11, 2021, 5:50 PM IST

Updated : Oct 11, 2021, 6:28 PM IST

ನವದೆಹಲಿ : ನಾಳೆ ಇಟಲಿಯ ರಾಜಧಾನಿ ರೋಮ್​ನಲ್ಲಿ ನಡೆಯಲಿರುವ ಜಿ-20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ (G20 Extraordinary Leaders Summit) ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಶೃಂಗಸಭೆಗೆ ಹಾಜರಾಗಲು 20 ರಾಷ್ಟ್ರಗಳ ಗುಂಪಿನ ಇಟಲಿಯ ಅಧ್ಯಕ್ಷರಿಂದ ಆಹ್ವಾನವನ್ನು ನೀಡಲಾಗಿದೆ. ಈ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಜಿ-20ಯ ಇಟಲಿಯ ಅಧ್ಯಕ್ಷರ ಆಹ್ವಾನದ ಮೇರೆಗೆ, ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ G-20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ಅಕ್ಟೋಬರ್ 12ರಂದು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ” ಎಂದು ಎಂಇಎ ಹೇಳಿದೆ.

ಸಚಿವಾಲಯದ ಪ್ರಕಾರ ತಾಲಿಬಾನ್ ಆಫ್ಘನ್ ​ಅನ್ನು ಸ್ವಾಧೀನಪಡಿಸಿಕೊಂಡ ನಂತರ, ನಾಳಿನ ಸಭೆಯಲ್ಲಿ ಆಫ್ಘನ್​ ಬಿಕ್ಕಟ್ಟಿನ ಮಾನವೀಯ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ.

ಭದ್ರತೆ ಮತ್ತು ಭಯೋತ್ಪಾದನೆ ವಿರೋಧಿ ಹೋರಾಟದ ಬಗ್ಗೆಯೂ ಇಲ್ಲಿ ಚರ್ಚೆಯಾಗಲಿದೆ. ಸಭೆಯ ಕಾರ್ಯಸೂಚಿಯು ಮಾನವೀಯ ಅಗತ್ಯಗಳಿಗೆ ಪ್ರತಿಕ್ರಿಯೆ ಮತ್ತು ಮೂಲಭೂತ ಸೇವೆಗಳು ಮತ್ತು ಜೀವನೋಪಾಯದ ವಿಷಯಗಳನ್ನು ಒಳಗೊಂಡಿರುತ್ತವೆ.

ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟ, ಚಲನಶೀಲತೆ, ವಲಸೆ ಮತ್ತು ಮಾನವ ಹಕ್ಕುಗಳ ಬಗ್ಗೆ ಇಲ್ಲಿ ಚರ್ಚಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಕೇಂದ್ರ ಸಚಿವ ಸ್ಥಾನದಿಂದ ಅಜಯ್ ಮಿಶ್ರಾ ವಜಾಗೊಳಿವಂತೆ ಆಗ್ರಹ.. ಕಾಂಗ್ರೆಸ್ ಮೌನ ಪ್ರತಿಭಟನೆ

ಆಗಸ್ಟ್ 15ರಂದು ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿತ್ತು ಮತ್ತು ಆಗಸ್ಟ್ 31ರ ವೇಳೆಗೆ ಯುನೈಟೆಡ್ ಸ್ಟೇಟ್ಸ್ ತನ್ನ ನಿಗದಿತ ಮಿಲಿಟರಿ ವಾಪಸಾತಿಯನ್ನು ಪೂರ್ಣಗೊಳಿಸಿತು.

Last Updated : Oct 11, 2021, 6:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.