ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸತ್ ಕ್ಷೇತ್ರವಾದ ವಾರಣಾಸಿಯಲ್ಲಿ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಇತರ ಆರೋಗ್ಯ ಕಾರ್ಯಕರ್ತರೊಂದಿಗೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ.
-
At 11 AM tomorrow, 21st May, will be interacting with doctors and frontline workers who are working tirelessly to contain COVID-19 in Kashi. https://t.co/RuopsFsKNr
— Narendra Modi (@narendramodi) May 20, 2021 " class="align-text-top noRightClick twitterSection" data="
">At 11 AM tomorrow, 21st May, will be interacting with doctors and frontline workers who are working tirelessly to contain COVID-19 in Kashi. https://t.co/RuopsFsKNr
— Narendra Modi (@narendramodi) May 20, 2021At 11 AM tomorrow, 21st May, will be interacting with doctors and frontline workers who are working tirelessly to contain COVID-19 in Kashi. https://t.co/RuopsFsKNr
— Narendra Modi (@narendramodi) May 20, 2021
ಡಿಆರ್‌ಡಿಒ ಮತ್ತು ಭಾರತೀಯ ಸೇನೆಯ ಜಂಟಿ ಪ್ರಯತ್ನಗಳ ಮೂಲಕ ಇತ್ತೀಚೆಗೆ ಪ್ರಾರಂಭವಾದ ಪಂಡಿತ್ ರಾಜನ್ ಮಿಶ್ರಾ ಕೋವಿಡ್ ಆಸ್ಪತ್ರೆ ಸೇರಿದಂತೆ ವಾರಣಾಸಿಯ ವಿವಿಧ ಕೋವಿಡ್ ಆಸ್ಪತ್ರೆಗಳ ಕಾರ್ಯಗಳನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ ಪ್ರಧಾನಮಂತ್ರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಸನಿಹದಲ್ಲೇ ಚೀನಾದಿಂದ ಹೆದ್ದಾರಿ ನಿರ್ಮಾಣ
ಕೋವಿಡ್ ಆಸ್ಪತ್ರೆಗಳ ಜೊತೆಗೆ ಕೋವಿಡ್ ಅಲ್ಲದ ಆಸ್ಪತ್ರೆಗಳ ಕಾರ್ಯವನ್ನೂ ಪ್ರಧಾನಿ ಪರಿಶೀಲನೆ ನಡೆಸಲಿದ್ದು, ವಾರಣಾಸಿಯಲ್ಲಿ ಕೋವಿಡ್ ಎರಡನೇ ಅಲೆಯನ್ನು ತಡೆಯಲು ನಡೆಯುತ್ತಿರುವ ಪ್ರಯತ್ನಗಳು ಮತ್ತು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಧಾನಮಂತ್ರಿ ಕೂಡಾ ಟ್ವೀಟ್ ಮಾಡಿದ್ದಾರೆ.