ETV Bharat / bharat

ವಿಶ್ವದ ಅತಿದೊಡ್ಡ ಮೊಟೆರಾ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟಿಸಲಿರುವ ಮೋದಿ.. ಇದರ ವಿಶೇಷತೆ ಅಷ್ಟಿಷ್ಟಲ್ಲ! - ಅಹಮದಾಬಾದ್

ಹಳೆಯ ಮೊಟೆರಾ ಕ್ರೀಡಾಂಗಣವನ್ನು ನೆಲಸಮ ಮಾಡಿದ ನಂತರ ಈಗ ವಿಶ್ವ ದರ್ಜೆಯ ಕ್ರೀಡಾಂಗಣ ನಿರ್ಮಾಣವಾಗಿದೆ. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​ಈ ಹೊಸ ಕ್ರೀಡಾಂಗಣವನ್ನು ನಿರ್ಮಿಸುವ ಕೆಲಸವನ್ನು ಪೂರೈಸಿದೆ..

PM Modi to inaugurate world's Largest Cricket Stadium at Motera
ಮೊಟೆರಾದಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ ಮೋದಿ
author img

By

Published : Feb 14, 2021, 4:31 PM IST

Updated : Feb 14, 2021, 5:22 PM IST

ಅಹಮದಾಬಾದ್ : ಫೆಬ್ರವರಿ 24ರಂದು ಮೊಟೆರಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಫೆಬ್ರವರಿ 23ರಂದು ಕ್ರೀಡಾಂಗಣವನ್ನು ಅಧಿಕೃತವಾಗಿ ಮೋದಿ ಉದ್ಘಾಟಿಸಲಿದ್ದಾರೆ.

ಮೂಲಗಳ ಪ್ರಕಾರ ಫೆಬ್ರವರಿ 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ರಾಮನಾಥ್ ಕೋವಿಂದ್ ಮತ್ತು ಗೃಹ ಸಚಿವ ಅಮಿತ್ ಶಾ ಹಾಜರಾಗಲಿದ್ದಾರೆ.

ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡವು ಎರಡು ಟೆಸ್ಟ್ ಪಂದ್ಯಗಳು ಮತ್ತು ಐದು ಟಿ -20 ಪಂದ್ಯಗಳನ್ನು ಆಡಲು ಸುಮಾರು ಒಂದು ತಿಂಗಳು ಅಹಮದಾಬಾದ್‌ನಲ್ಲಿ ಉಳಿಯಲಿದೆ.

ವಿಶ್ವ ದರ್ಜೆಯ ಮೊಟೆರಾ ಕ್ರೀಡಾಂಗಣದ ವಿಶೇಷತೆ ಏನು?

  • 800 ಕೋಟಿ ರೂ.ಗಳ ಅತ್ಯಾಧುನಿಕ ವಿಶ್ವ ದರ್ಜೆಯ ಕ್ರೀಡಾಂಗಣದ ನಿರ್ಮಾಣ ಕಾರ್ಯವನ್ನು 2017ರ ಜನವರಿಯಲ್ಲಿ ಅಹಮದಾಬಾದ್‌ನ ಸಬರಮತಿ ಪ್ರದೇಶದಲ್ಲಿ ಆರಂಭಿಸಲಾಯಿತು. 1,00,000ಕ್ಕೂ ಹೆಚ್ಚು ಜನ ಕುಳಿತುಕೊಳ್ಳುವ ಸಾಮರ್ಥ್ಯವಿರುವ ಕ್ರೀಡಾಂಗಣ ಇದಾಗಿದೆ. ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರೀಡಾಂಗಣಕ್ಕಿಂತ ದೊಡ್ಡದಿದೆ.
  • ಹಳೆಯ ಮೊಟೆರಾ ಕ್ರೀಡಾಂಗಣವನ್ನು ನೆಲಸಮ ಮಾಡಿದ ನಂತರ ಈಗ ಈ ಕ್ರೀಡಾಂಗಣ ವಿಶ್ವ ದರ್ಜೆಯ ಕ್ರೀಡಾಂಗಣವಾಗಿ ಬದಲಾಗುತ್ತಿದೆ. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​ಈ ಹೊಸ ಕ್ರೀಡಾಂಗಣವನ್ನು ನಿರ್ಮಿಸುವ ಕೆಲಸ ಪೂರೈಸಿದೆ.
  • ಕ್ರೀಡಾಂಗಣವು 75 ಕಾರ್ಪೊರೇಟ್ ಬಾಕ್ಸ್​ಗಳು ಮತ್ತು ಆಟಗಾರರು, ಅಂಪೈರ್‌ಗಳು ಮತ್ತು ಮಾಧ್ಯಮ ವ್ಯಕ್ತಿಗಳಿಗೆ ಪ್ರತ್ಯೇಕ ಬಾಕ್ಸ್‌ಗಳನ್ನು ಒಳಗೊಂಡಂತೆ ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಆಟಗಾರರು ಮತ್ತು ಪ್ರೇಕ್ಷಕರಿಗೆ ಮೀಸಲಾದ ಐಷಾರಾಮಿ ಕ್ಲಬ್ ಹೌಸ್ ಕೂಡ ಇದರಲ್ಲಿದೆ.
  • ಸ್ತಂಭಗಳಿಲ್ಲದ ದೇಶದ ಮೊದಲ ಕ್ರೀಡಾಂಗಣ ಇದಾಗಿದೆ. ಇದು ಪ್ರೇಕ್ಷಕರಿಗೆ ಕ್ಷೇತ್ರದ ತಡೆರಹಿತ 360 ಡಿಗ್ರಿ ನೋಟ ನೀಡುತ್ತದೆ. ಕ್ರೀಡಾಂಗಣದಲ್ಲಿ ಅಲ್ಟ್ರಾ ಮಾಡರ್ನ್ ಲೈಟ್ ಮತ್ತು ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ.
  • ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಈ ಎಲ್ಇಡಿ ದೀಪಗಳನ್ನು 90 ಮೀಟರ್ ಗೋಪುರದ ಮೇಲೆ ಜೋಡಿಸಲಾಗಿದ್ದು, ಇದು 25 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮನಾಗಿದೆ.
  • ಕೆಂಪು ಮತ್ತು ಕಪ್ಪು ಮಣ್ಣಿನಿಂದ ಮಾಡಿದ ಕ್ರೀಡಾಂಗಣದಲ್ಲಿ 11 ಪಿಚ್‌ಗಳಿವೆ. ಕ್ರೀಡಾಂಗಣವು ಉಪ-ಮೇಲ್ಮೈ ಒಳಚರಂಡಿ ವ್ಯವಸ್ಥೆ ಹೊಂದಿದೆ. 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮಳೆನೀರನ್ನು ತೆರವುಗೊಳಿಸುತ್ತದೆ ಹಾಗೆ ಕ್ರಿಕೆಟ್ ಆಡಲು ಪಿಚ್ ಸೂಕ್ತವಾಗಿರುತ್ತದೆ.
  • ಇದು 76 ಕಾರ್ಪೊರೇಟ್​ ಬಾಕ್ಸ್​ಗಳನ್ನು ಒಳಗೊಂಡಿದೆ. ದೇಶದ ಯಾವುದೇ ಕ್ರೀಡಾಂಗಣದಲ್ಲಿ ಈ ವ್ಯವಸ್ಥೆ ಇಲ್ಲ. ಕ್ರಿಕೆಟ್ ಹೊರತುಪಡಿಸಿ ಫುಟ್ಬಾಲ್, ಹಾಕಿ, ಖೋ-ಖೋ, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್‌ಬಾಲ್, ಟೆನಿಸ್ ಮತ್ತು ಬ್ಯಾಡ್ಮಿಂಟನ್‌ನಂತಹ ಕ್ರೀಡೆಗಳನ್ನು ಸಹ ಇಲ್ಲಿ ಆಡಬಹುದುದಾಗಿದೆ.
  • ಮುಖ್ಯವಾಗಿ ಮೈದಾನದ ಹೊರತಾಗಿ, ಅಭ್ಯಾಸಕ್ಕಾಗಿ ಎರಡು ಕ್ರಿಕೆಟ್ ಮೈದಾನಗಳು ಮತ್ತು ಬಹು-ಕ್ರೀಡಾ ಮೈದಾನಗಳಿವೆ. ಗಾಯಗೊಂಡ ಕ್ರೀಡಾಪಟುಗಳಿಗೆ ಕ್ರೀಡಾಂಗಣದಲ್ಲಿ ಚಿಕಿತ್ಸೆಗೆ ಸೌಲಭ್ಯವನ್ನು ಸಹ ಒದಗಿಸಲಾಗಿದೆ.
  • ಕ್ರೀಡಾಂಗಣವನ್ನು ಎಷ್ಟು ವಿಸ್ತಾರವಾಗಿ ನಿರ್ಮಿಸಲಾಗಿದೆ ಅಂದರೆ ಆಟಗಾರ ನಾಲ್ಕು ಅಥವಾ ಆರು ರನ್​ ಭಾರಿಸಿದರೆ ಅದನ್ನು ಯಾವುದೇ ಅಡೆತಡೆಯಿಲ್ಲದೆ ನೋಡಬಹುದುದಾಗಿದೆ. ಪ್ರತಿ ಸ್ಟ್ಯಾಂಡ್ ಬಳಿ ಫುಡ್ ಕೋರ್ಟ್ ಇದೆ. ಕ್ರಿಕೆಟ್ ಅಕಾಡೆಮಿಗೆ ಯುವ ಕ್ರಿಕೆಟ್ ಉತ್ಸಾಹಿಗಳಿಗೆ ಸ್ಥಳಾವಕಾಶ ಕೂಡ ನೀಡಲಾಗಿದೆ.
  • ಕ್ರೀಡಾಂಗಣದ ಹೊರಗೆ 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. ದೇಶದ ಬೇರೆ ಯಾವುದೇ ಕ್ರೀಡಾಂಗಣದಲ್ಲಿ ಇಷ್ಟು ದೊಡ್ಡ ಪಾರ್ಕಿಂಗ್ ಸೌಲಭ್ಯವಿಲ್ಲ.
  • ಕ್ಲಬ್‌ಹೌಸ್‌ನಲ್ಲಿ 55 ಕೊಠಡಿಗಳಿವೆ, ಒಳಾಂಗಣ ಮತ್ತು ಹೊರಾಂಗಣ ಆಟಗಳ ಸೌಲಭ್ಯ, ರೆಸ್ಟೋರೆಂಟ್, ಒಲಿಂಪಿಕ್ ಗಾತ್ರದ ಈಜುಕೊಳ, ಜಿಮ್ನಾಷಿಯಂ ಮತ್ತು ಪಾರ್ಟಿ ಪ್ರದೇಶವಿದೆ. ಕ್ಲಬ್‌ಹೌಸ್‌ನ ಸದಸ್ಯತ್ವ ಶುಲ್ಕ 700,000 ರೂ.ಗಳು.
  • ಮುಂಬರುವ ಮೆಟ್ರೋ ರೈಲು ಈ ಕ್ರೀಡಾಂಗಣಕ್ಕೆ ಸಂಪರ್ಕವನ್ನು ಒದಗಿಸುತ್ತದೆ. ಸಣ್ಣ ಪೆವಿಲಿಯನ್‌ನಲ್ಲಿ ಎರಡು ಪ್ರತ್ಯೇಕ ಕ್ರಿಕೆಟ್ ಮೈದಾನಗಳನ್ನು ಸಹ ಮಾಡಲಾಗಿದೆ. ಉತ್ತರ ಪೆವಿಲಿಯನ್‌ಗೆ ರಿಲಯನ್ಸ್ ಗ್ರೂಪ್ ಹೆಸರಿಡಲಾಗಿದ್ದರೆ, ದಕ್ಷಿಣ ಪೆವಿಲಿಯನ್‌ಗೆ ಅದಾನಿ ಗ್ರೂಪ್ ಹೆಸರಿಡಲಾಗಿದೆ.
  • ಇದರ ನಿರ್ಮಾಣಕ್ಕೆ ಆಸ್ಟ್ರೇಲಿಯಾದ ಕಂಪನಿ ಪಾಪ್ಯುಲಸ್ ಮುಖ್ಯ ವಾಸ್ತುಶಿಲ್ಪಿ ಆಗಿದ್ದರೆ ಎಲ್&ಟಿ ಡೆವಲಪರ್ ಮತ್ತು ಎಸ್‌ಟಿಯುಪಿ ಯೋಜನಾ ಸಲಹೆಗಾರರಾಗಿ ಕೆಲಸ ಮಾಡಿವೆ.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿರುವ ಈ ಕ್ರೀಡಾಂಗಣವು ಗುಜರಾತಿಗೆ ಹೆಮ್ಮೆಯ ಕ್ರೀಡಾಂಗಣವಾಗಲಿದೆ. ಹಾಗೆಯೇ ಪ್ರತಿಯೊಬ್ಬ ಕ್ರೀಡಾಪಟುವಿಗೆ ಕನಸಿನ ಆಟದ ಮೈದಾನವಾಗಲಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದಾರೆ.

Last Updated : Feb 14, 2021, 5:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.