ಲಖನೌ( ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ನವೀಕೃತಗೊಂಡಿರುವ ರಾಷ್ಟ್ರೀಯ ಹೆದ್ದಾರಿ 19 ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
ಇನ್ನು ಕಾಶಿ ವಿಶ್ವನಾಥನ ದರ್ಶನ ಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿ, ದೇವಸ್ಥಾನದ ಕಾರಿಡಾರ್ ಪ್ರಾಜೆಕ್ಟ್, ಸಾರಾನಾಥ್ ಆರ್ಕ್ಯಾಲಾಜಿಕಲ್ ಸೈಟ್, ಆ ಬಳಿಕ ಪ್ರಧಾನಿ ದೇವ ದೀಪಾವಳಿ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಳಿದ್ದಾರೆ.
ಓದಿ:ಇಂದು ಭಾರತದ ನೇತೃತ್ವದಲ್ಲಿ ಶಾಂಘೈ ಸಹಕಾರ ಸಂಘಟನೆ ರಾಷ್ಟ್ರಗಳ ಸಭೆ
ರಾಷ್ಟ್ರೀಯ ಹೆದ್ದಾರಿ 19 ರ 73 ಕಿ.ಮೀ ದೂರವನ್ನ ಆರು ಲೇನ್ಗಳಾಗಿ ಪರಿವರ್ತನೆ ಮಾಡಲಾಗಿದೆ. ಸುಮಾರು 2,447 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ರಸ್ತೆ ನವೀಕರಣದಿಂದ ಅಲಹಾಬಾದ್ ಟು ವಾರಣಾಸಿಯ ದೂರವನ್ನು 1 ಗಂಟೆ ಕಡಿಮೆ ಗೊಳಿಸಿದಂತಾಗಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.