ಲಖನೌ: ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನಕಾರಿಯಾಗಿರುವ ಉತ್ತರಪ್ರದೇಶದ ಬುಂದೇಲ್ಖಂಡದಲ್ಲಿ ನಿರ್ಮಿಸಲಾಗಿರುವ 296 ಕಿಮೀ ಉದ್ದದ ಚತುಷ್ಪಥ ಎಕ್ಸ್ಪ್ರೆಸ್ ವೇ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ.
ಬುಂದೇಲ್ಖಂಡದಲ್ಲಿ ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ. ಇದು ದೇಶದ ಉದ್ದದ ಚತುಷ್ಪಥಗಳಲ್ಲಿ ಒಂದಾಗಿದೆ.
ಫೆಬ್ರವರಿ 29, 2020 ರಂದು ಪ್ರಧಾನಿ ಮೋದಿ ಅವರು ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಈ ಯೋಜನೆಯನ್ನು 28 ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ. ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಡಿ ಸುಮಾರು14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿಮೀ ಉದ್ದದಲ್ಲಿ ನಿರ್ಮಿಸಲಾಗಿದೆ, ಇದನ್ನು ಮುಂದೆ ಆರು ಪಥಗಳಾಗಿ ವಿಸ್ತರಿಸಬಹುದಾಗಿದೆ.
ಈ ಎಕ್ಸ್‌ಪ್ರೆಸ್‌ವೇ ಸಂಪರ್ಕವನ್ನು ಸುಧಾರಿಸುವುದರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡಲಿದೆ. ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ರಚನೆಯ ಕೆಲಸ ಈಗಾಗಲೇ ಶುರುವಾಗಿದೆ.
ಓದೀ: ಗುರು ಗ್ರಹದಂತಹ ಹಾಟ್ ಗ್ರಹಗಳನ್ನು ಪತ್ತೆ ಮಾಡಿದ ಗಯಾ ಬಾಹ್ಯಾಕಾಶ ನೌಕೆ!