ವಾಷಿಂಗ್ಟನ್(ಅಮೆರಿಕಾ): ರಷ್ಯಾ-ಉಕ್ರೇನ್ ಯುದ್ಧ ಹಾಗೂ ಭಾರತದ ನಿಲುವು, ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾದ ಕ್ರಮವನ್ನು ಖಂಡಿಸಿ ನಿರ್ಬಂಧ ಹೇರಿದ್ದರೂ ಅದೇ ದೇಶದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಭಾರತದ ವಿರುದ್ಧ ಅಮೆರಿಕ ಮುನಿಸಿಕೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜತೆ ಮಹತ್ವದ ವರ್ಚುಲ್ ಸಭೆ ನಡೆಸಲಿದ್ದಾರೆ.
-
PM Modi to hold virtual interaction with US President Joe Biden today
— ANI Digital (@ani_digital) April 11, 2022 " class="align-text-top noRightClick twitterSection" data="
Read @ANI Story | https://t.co/3FaQuabFxu#PMModi #JoeBiden pic.twitter.com/TNNT4hyec2
">PM Modi to hold virtual interaction with US President Joe Biden today
— ANI Digital (@ani_digital) April 11, 2022
Read @ANI Story | https://t.co/3FaQuabFxu#PMModi #JoeBiden pic.twitter.com/TNNT4hyec2PM Modi to hold virtual interaction with US President Joe Biden today
— ANI Digital (@ani_digital) April 11, 2022
Read @ANI Story | https://t.co/3FaQuabFxu#PMModi #JoeBiden pic.twitter.com/TNNT4hyec2
ಉಭಯ ನಾಯಕರು ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವುದು, ಹವಾಮಾನ ಬಿಕ್ಕಟ್ಟನ್ನು ಎದುರಿಸುವುದು, ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಭದ್ರತೆಯನ್ನು ಹೆಚ್ಚಿಸಲು ಮುಕ್ತ, ನಿಯಮ-ಆಧಾರಿತ ಅಂತಾರಾಷ್ಟ್ರೀಯ ಆದೇಶವನ್ನು ಎತ್ತಿಹಿಡಿಯುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಭಾನುವಾರ (ಸ್ಥಳೀಯ ಕಾಲಮಾನ) ಹೇಳಿದರು.
ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಈ ಸಭೆ ಮುಖ್ಯವಾಗಿದೆ. ಇಬ್ಬರೂ ನಾಯಕರು ಇಂಡೋ-ಪೆಸಿಫಿಕ್ ಬೆಳವಣಿಗೆ, ಮತ್ತು ಉತ್ತಮ-ಗುಣಮಟ್ಟದ ಮೂಲಸೌಕರ್ಯವನ್ನು ಒದಗಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಜೆನ್ ಪ್ಸಾಕಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡೋ- ಪೆಸಿಫಿಕ್ ನೀತಿ ಘೋಷಿಸಿದ ಬೈಡನ್: ಬಜೆಟ್ನಲ್ಲಿ 1.8 ಬಿಲಿಯನ್ ಅನುದಾನ ಘೋಷಣೆ... ಏಕೆ ಗೊತ್ತಾ?