ETV Bharat / bharat

ನಾಳೆ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ - ಡ್ರಗ್ ಫಾರ್ಮಾ ಪಾರ್ಕ್‌

ಹಿಮಾಚಲ ಪ್ರದೇಶದ ಉನಾ ಮತ್ತು ದೆಹಲಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಸಿರು ನಿಶಾನೆ ತೋರಿಸಲಿದ್ದಾರೆ.

pm-modi-to-flag-off-vande-bharat-express-in-himachal-tomorrow
ನಾಳೆ ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
author img

By

Published : Oct 12, 2022, 3:23 PM IST

ಉನಾ (ಹಿಮಾಚಲ ಪ್ರದೇಶ): ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಿಮಾಚಲ ಪ್ರದೇಶದ ಉನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ (ಗುರುವಾರ) ಚಾಲನೆ ನೀಡಲಿದ್ದಾರೆ. ಉನಾ ಮತ್ತು ದೆಹಲಿ ನಡುವಿನ ಈ ಎಕ್ಸ್‌ಪ್ರೆಸ್ ರೈಲು ಚಂಡೀಗಢ ಮೂಲಕ ಕೇವಲ ಐದು ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತಲುಪಲಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಚಂಬಾದಲ್ಲಿ ಅಕ್ಟೋಬರ್ 13ರಂದು ತಮ್ಮ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಜರಾಗಲಿದ್ದಾರೆ. ಜೊತೆಗೆ ಉನಾದಲ್ಲಿ ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್‌ಗೆ ಶಂಕುಸ್ಥಾಪನೆ ಮತ್ತು ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: 100 ಕಿಮೀ ವೇಗದಲ್ಲಿ ಚಲಿಸಿ.. ವ್ಹೀಲ್ ಜಾಮ್​ ಆಗಿ ನಿಂತ ವಂದೇ ಭಾರತ್ ರೈಲು

ಈ ಮೊದಲು ಪ್ರಧಾನಿ ಮೋದಿ ಚಂಬಾ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಇಂದು ಹೊಸ ಬೆಳವಣಿಗೆ ಕಂಡು ಬಂದಿದೆ. ಚಂಬಾಗೆ ತೆರಳುವ ಮೊದಲು ಪ್ರಧಾನಿ ಉನಾಗೆ ಭೇಟಿ ನೀಡಲಿದ್ದಾರೆ. ಚಂಬಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ಸಿಎಂ ಠಾಕೂರ್ ತಿಳಿಸಿದರು.

ಒಂಬತ್ತೇ ದಿನದಲ್ಲಿ ಮೋದಿ 2ನೇ ಭೇಟಿ: ಇದೇ ನವೆಂಬರ್​ನಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣಾ ಹೊಸ್ತಿಲಲ್ಲೇ ಪ್ರಧಾನಿ ಮೋದಿ ನಾಳೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಕೇವಲ ಒಂಬತ್ತೇ ದಿನಗಳಲ್ಲಿ ಮೋದಿ ಅವರ ಎರಡನೇ ಭೇಟಿಯಾಗಿದೆ. ಇದಕ್ಕೂ ಮುನ್ನ ಮೋದಿ ಅಕ್ಟೋಬರ್ 5ರಂದು ಬಿಲಾಸ್ಪುರ್ ಮತ್ತು ಕುಲು ಜಿಲ್ಲೆಗಳಿಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಕುಲು ದಸರಾ ಉತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ: ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ

ನಾಳಿನ ಭೇಟಿ ವೇಳೆ ಪ್ರಧಾನಿ ಮೋದಿ 180 ಮೆಗಾವ್ಯಾಟ್ ಬಾಜೋಲಿ ಜಲವಿದ್ಯುತ್ ಯೋಜನೆ ಉದ್ಘಾಟಿಸಲಿದ್ದಾರೆ. 48 ಮೆಗಾವ್ಯಾಟ್ ಚಂಜು-III ಜಲವಿದ್ಯುತ್ ಯೋಜನೆ ಮತ್ತು 30.5 ಮೆಗಾವ್ಯಾಟ್ ದೆಯೋತಲ್ ಚಂಜು ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.