ETV Bharat / bharat

ಜ. 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ.. ಈ ಹಡಗಿನಲ್ಲಿದೆ ಐಷಾರಾಮಿ ಸೌಲಭ್ಯ - ರಿವರ್ ಕ್ರೂಸ್

ಎಂವಿ ಗಂಗಾ ವಿಲಾಸ್​ಗೆ ಜನವರಿ 13ರಂದು ಪ್ರಧಾನಿ ಮೋದಿ ಚಾಲನೆ - ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆ - ಭಾರತ ಮತ್ತು ಬಾಂಗ್ಲಾದೇಶದ ನದಿಗಳಲ್ಲಿ 51 ದಿನಗಳ ಕಾಲ 3,200 ಕಿಲೋಮೀಟರ್‌ ಸಂಚಾರ

pm-modi-to-flag-off-luxury-cruise-mv-ganga-vilas-on-january-13-know-all-about-this
ಜನವರಿ 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ: ಇದು ಐಷಾರಾಮಿ ಸೌಲಭ್ಯಗಳ ಹಡಗು
author img

By

Published : Jan 8, 2023, 8:08 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 13ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆಯಾದ 'ಎಂವಿ ಗಂಗಾ ವಿಲಾಸ್'ಗೆ ಚಾಲನೆ ನೀಡಲಿದ್ದಾರೆ. ಪಂಚತಾರಾ ಹೋಟೆಲ್‌ನಂತಹ ಸೌಲಭ್ಯಗಳನ್ನು ಹೊಂದಿರುವ ಈ ವಿಹಾರ ನೌಕೆಯಿಂದ ಭಾರತದ 'ರಿವರ್ ಕ್ರೂಸ್' ಪ್ರವಾಸೋದ್ಯಮದ ಹೊಸ ದೆಸೆ ಆರಂಭವಾಗಲಿದೆ. ಈ ವಿಹಾರ ನೌಕೆಯು 51 ದಿನಗಳ ಕಾಲ 3,200 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ ಎಂದೇ ಹೇಳಲಾಗುತ್ತಿದೆ.

ಐಷಾರಾಮಿಯಾದ ಎಂವಿ ಗಂಗಾ ವಿಲಾಸ್ ನೌಕೆಯು ಭಾರತವನ್ನು ವಿಶ್ವದ ನದಿ ವಿಹಾರ ನಕ್ಷೆಯಲ್ಲಿ ಉನ್ನತ ಎತ್ತರಕ್ಕೆ ಕೊಂಡೊಯ್ಯಲಿದೆ. ಭಾರತ ಮತ್ತು ಬಾಂಗ್ಲಾದೇಶದ ನದಿಗಳ ಮೂಲಕ ಹಾದುಹೋಗುವ ಈ ರಿವರ್​ ಕ್ರೂಸ್ 27 ವಿವಿಧ ನದಿಗಳಲ್ಲಿ ಪ್ರಯಾಣಿಸಲಿದೆ. ಈ ಜಲ ಮಾರ್ಗದುದ್ದಕ್ಕೂ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳಲ್ಲಿ ನಿಲ್ಲುಗಡೆಯಾಗಲಿದೆ.

ಎಂವಿ ಗಂಗಾ ವಿಲಾಸ್ ನೌಕೆ
ಎಂವಿ ಗಂಗಾ ವಿಲಾಸ್ ನೌಕೆ

ಐಷಾರಾಮಿ ಸೌಲಭ್ಯಗಳ ನೌಕೆ: ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ರಿವರ್ ಕ್ರೂಸ್​ಅನ್ನು ಖಾಸಗಿ ಕಂಪನಿಗಳಾದ ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್ ಮತ್ತು ಜೆಎಂ ಬ್ಯಾಕ್ಸಿ ರಿವರ್ ಕ್ರೂಸಸ್ ಜೊತೆಗೆ ಭಾರತದ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಎಐ) ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತದೆ. ಗಂಗಾ ವಿಲಾಸ್ ನೌಕೆಯು 18 ಕ್ಯಾಬಿನ್‌ಗಳು ಸೇರಿದಂತೆ ಎಲ್ಲ ಇತರ ಸೌಕರ್ಯಗಳನ್ನು ಹೊಂದಿದೆ. ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ.

ಎಂವಿ ಗಂಗಾ ವಿಲಾಸ್ ನೌಕೆ
ಎಂವಿ ಗಂಗಾ ವಿಲಾಸ್ ನೌಕೆ

ಜೊತೆಗೆ ಗಂಗಾ ವಿಲಾಸ್ ನೌಕೆಯು ಸಾಂಸ್ಕೃತಿಕ ಸ್ಪರ್ಶವನ್ನು ಹೊಂದಿದೆ. ಇದರೊಂದಿಗೆ ಸ್ನಾನಗೃಹ, ಕನ್ವರ್ಟಿಬಲ್ ಬೆಡ್, ಫ್ರೆಂಚ್ ಬಾಲ್ಕನಿ, ಎಲ್ಇಡಿ ಟಿವಿ, ಸ್ಮೋಕ್ ಡಿಟೆಕ್ಟರ್, ಲೈಫ್ ವೆಸ್ಟ್ ಮತ್ತು ಸ್ಪ್ರಿಂಕ್ಲರ್​ನಂತಹ ಆಧುನಿಕ ಸವಲತ್ತುಗಳನ್ನು ಹೊಂದಿದೆ. ಅತಿಥಿಗಳಿಗೆ ಮದು ಅನುಭವ ನೀಡುವ ಈ ನೌಕೆಯು ರೆಸ್ಟೋರೆಂಟ್, ಸ್ಪಾ ಮತ್ತು ಸಂಡೆಕ್​ ಸಹ ಹೊಂದಿದೆ. ಇದರ ರೆಸ್ಟೊರೆಂಟ್‌ನಲ್ಲಿ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕಪದ್ಧತಿಯನ್ನು ಒದಗಿಸುವ ಬಫೆ ಕೌಂಟರ್‌ಗಳು ಸಹ ಇವೆ.

ಮಾರ್ಗದ ಯೋಜನೆ ಏನು ಗೊತ್ತಾ?: ಸಕಲ ಸೌಲಭ್ಯಗಳೊಂದಿಗೆ 80 ಪ್ರಯಾಣಿಕರ ಸಾಮರ್ಥ್ಯದ ಐಷಾರಾಮಿ ನದಿ ನೌಕೆಯು ಕೋಲ್ಕತ್ತಾದ ಹೂಗ್ಲಿ ನದಿಯಿಂದ ವಾರಣಾಸಿಯ ಗಂಗಾ ನದಿಗೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಪ್ರಯಾಣಿಸಲಿದೆ. ಈ ಹಿಂದೆ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಗಂಗಾ ವಿಲಾಸ್ ಕ್ರೂಸ್ ವಾರಣಾಸಿಯಿಂದ ಪ್ರಯಾಣ ಆರಂಭಿಸಿ ಬಕ್ಸರ್, ರಾಮನಗರ, ಗಾಜಿಪುರ ಮಾರ್ಗವಾಗಿ 8ನೇ ದಿನ ಪಾಟ್ನಾ ತಲುಪಲಿದೆ.

ಪಾಟ್ನಾದಿಂದ ಕ್ರೂಸ್ ಕೋಲ್ಕತ್ತಾಗೆ ಹೊರಟು 20ನೇ ದಿನದಂದು ಫರಕ್ಕಾ ಮತ್ತು ಮುರ್ಷಿದಾಬಾದ್ ಮೂಲಕ ಪಶ್ಚಿಮ ಬಂಗಾಳದ ರಾಜಧಾನಿಯನ್ನು ತಲುಪುತ್ತದೆ. ಮರುದಿನ, ಅದು ಢಾಕಾಗೆ ಹೊರಟು ಬಾಂಗ್ಲಾದೇಶದ ಗಡಿಯನ್ನು ಪ್ರವೇಶಿಸುತ್ತದೆ. ಇದು ಮುಂದಿನ 15 ದಿನಗಳ ಕಾಲ ಬಾಂಗ್ಲಾದೇಶದಲ್ಲಿ ಉಳಿಯುತ್ತದೆ. ಅಂತಿಮವಾಗಿ, ಇದು ಸಿಬ್ಸಾಗರ್ ಮೂಲಕ ನೌಕಾಯಾನ ಮಾಡುವ ಮೊದಲು ಗುವಾಹಟಿ ಮೂಲಕ ಭಾರತಕ್ಕೆ ಹಿಂತಿರುಗುತ್ತದೆ.

  • The launch of world’s longest river cruise with MV Ganga Vilas by Prime Minister Narendra Modi on 13 January, 2023 in Varanasi will herald a new age of river cruise tourism for India, said Union minister Sarbananda Sonowal: Ministry of Ports, Shipping and Waterways pic.twitter.com/Hma1nF0rUt

    — ANI (@ANI) January 8, 2023 " class="align-text-top noRightClick twitterSection" data=" ">

ಗಂಗಾ ವಿಲಾಸ್ ಕ್ರೂಸ್‌ನಲ್ಲಿರುವ ಅತಿಥಿಗಳು ವಾರಣಾಸಿಯಿಂದ ಹಿಡಿದು ಅದ್ಭುತವಾದ ಭಾರತೀಯ ತಾಣಗಳಿಗೆ ಭೇಟಿ ನೀಡಬಹುದು. ಎಂವಿ ಗಂಗಾ ವಿಲಾಸ್‌ನ ಮೊದಲ ಪ್ರವಾಸದಲ್ಲಿ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ವಾರಣಾಸಿಯಿಂದ ದಿಬ್ರುಗಢ್‌ಗೆ ಪ್ರಯಾಣಿಸಲಿದ್ದಾರೆ. ದಿಬ್ರುಗಢಕ್ಕೆ ಮಾರ್ಚ್ 1ರಂದು ಈ ನೌಕೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

ಮಾಲಿನ್ಯ ಮುಕ್ತ ಶಬ್ದ ನಿಯಂತ್ರಣ ತಂತ್ರಜ್ಞಾನ: ಎಂವಿ ಗಂಗಾ ವಿಲಾಸ್ ನೌಕೆಯು 62 ಮೀಟರ್ ಉದ್ದ, 12 ಮೀಟರ್ ಅಗಲವಿದೆ. ಇದು 1.4 ಮೀಟರ್‌ಗಳ ಡ್ರಾಫ್ಟ್‌ನೊಂದಿಗೆ ಆರಾಮವಾಗಿ ಚಲಿಸುತ್ತದೆ. ಇದು ಮೂರು ಡೆಕ್‌ಗಳನ್ನು ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸುವ ಎಲ್ಲ ಸೌಲಭ್ಯಗಳು ಸಹ ಇದರಲ್ಲಿವೆ. ಇಷ್ಟೇ ಅಲ್ಲ, ಮಾಲಿನ್ಯ ಮುಕ್ತ ವ್ಯವಸ್ಥೆಗಳು ಮತ್ತು ಶಬ್ದ ನಿಯಂತ್ರಣ ತಂತ್ರಜ್ಞಾನಗಳನ್ನೂ ಹೊಂದಿದೆ.

ಇದನ್ನೂ ಓದಿ: 'ಮಹತ್ವಾಕಾಂಕ್ಷಿ ಬ್ಲಾಕ್' ಯೋಜನೆ ಆರಂಭ: ತರ್ಕಹೀನ ನಿರ್ಬಂಧ ಬೇಡ ಎಂದ ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.