ETV Bharat / bharat

ಜುಲೈ 14ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಂತ್ರಿ ಪರಿಷತ್‌ನ ಸಭೆ

ಕಳೆದ ಕೆಲವು ದಿನಗಳಿಂದ ಜನರು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್​ ಇಲ್ಲದೇ ಓಡಾಡುತ್ತಿರುವ ಚಿತ್ರಗಳು, ವಿಡಿಯೋಗಳು ನನಗೆ ಬರುತ್ತಿವೆ. ಕೋವಿಡ್ ವಿರುದ್ಧ ನಿರ್ಲಕ್ಷ್ಯ ಭಾವನೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆಂದು ತಿಳಿದು ಬಂದಿದೆ..

PM Modi to chair Council of Ministers meeting on July 14
ಜುಲೈ 14ಕ್ಕೆ ಪ್ರಧಾನಿ ನೇತೃತ್ವದಲ್ಲಿ ಮಂತ್ರಿಗಳ ಪರಿಷತ್​ ಸಭೆ
author img

By

Published : Jul 10, 2021, 2:48 PM IST

ನವದೆಹಲಿ : ಕೇಂದ್ರ ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಜುಲೈ 14ರಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಚಿವರ ಪರಿಷತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಮಂತ್ರಿ ಮಂಡಳಿಯೊಡನೆ ನಡೆಸಲಿರುವ ಎರಡನೇ ಸಭೆ ಇದಾಗಿದೆ.

ಕೇಂದ್ರ ಸಚಿವ ಸಂಪುಟ ಪುನಾರಚನೆಯ ಒಂದು ದಿನದ ನಂತರ ಪ್ರಧಾನಿ ಕೇಂದ್ರ ಸಚಿವ ಸಂಪುಟ ಮತ್ತು ಸಚಿವರ ಪರಿಷತ್ತಿನೊಂದಿಗೆ ಸಭೆ ನಡೆಸಿದ್ದರು. ಈಗ ಮತ್ತೊಮ್ಮೆ ಸಚಿವರ ಮಂತ್ರಿ ಪರಿಷತ್‌ನ ಸಭೆ ಬುಧವಾರ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಗುರುವಾರ ಸಭೆಯೊಂದು ನಡೆದಿದ್ದು, ಕೋವಿಡ್​​ ವಿರುದ್ಧದ ಹೋರಾಟದಲ್ಲಿ ಯಾವುದೇ ಅಜಾಗರೂಕತೆ ತೋರಬಾರದು ಎಂದು ಪ್ರಧಾನಿಮಂತ್ರಿಗಳು ನೂತನ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ.. ಜೈಲಿನಲ್ಲಿ ತಟ್ಟೆ, ಸ್ಪೂನ್​ಗಳನ್ನೇ ಮಾರಕಾಸ್ತ್ರಗಳನ್ನಾಗಿ ಮಾಡಿದ ಕೈದಿಗಳು!

ಕಳೆದ ಕೆಲವು ದಿನಗಳಿಂದ ಜನರು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್​ ಇಲ್ಲದೇ ಓಡಾಡುತ್ತಿರುವ ಚಿತ್ರಗಳು, ವಿಡಿಯೋಗಳು ನನಗೆ ಬರುತ್ತಿವೆ. ಕೋವಿಡ್ ವಿರುದ್ಧ ನಿರ್ಲಕ್ಷ್ಯ ಭಾವನೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.