ETV Bharat / bharat

ಇಂದು ಹವಾಮಾನ ಕುರಿತ ಶೃಂಗಸಭೆ ಉದ್ದೇಶಿಸಿ ಪಿಎಂ ಮೋದಿ ಮಾತು

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 2 ದಿನ ನಡೆಯುವ ಹವಾಮಾನ ಕುರಿತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶೃಂಗಸಭೆ ​​​​​​​ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

modi
ಮೋದಿ
author img

By

Published : Apr 21, 2021, 9:41 PM IST

Updated : Apr 22, 2021, 5:00 AM IST

ನವದೆಹಲಿ: ಇಂದು ಮತ್ತು ನಾಳೆ ನಡೆಯಲಿರುವ ಹವಾಮಾನ ಕುರಿತ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ತಿಳಿಸಿದೆ.

ಶೃಂಗಸಭೆಯಲ್ಲಿ ಸುಮಾರು 40 ಮಂದಿ ಇತರ ವಿಶ್ವ ನಾಯಕರು ಭಾಗವಹಿಸುತ್ತಿದ್ದಾರೆ ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತ ಒಳಗೊಂಡಂತೆ ಇತರ ಪ್ರಮುಖ ಆರ್ಥಿಕ ವೇದಿಕೆಯ ಸದಸ್ಯ ದೇಶಗಳು ಈ ಸಭೆಯಲ್ಲಿ ಭಾಗವಹಿಸಲಿವೆ. ಅಲ್ಲದೇ ಹವಾಮಾನ ಬದಲಾವಣೆಗೆ ಗುರಿಯಾಗುವ ದೇಶಗಳು ಸಹಾ ಪಾಲ್ಗೊಳ್ಳಲಿವೆ ಎಂದು ತಿಳಿಸಿದೆ.

ಇಂದು ಸಂಜೆ 5.30 ರಿಂದ 7.30 ರವರೆಗೆ ಈ ಅಧಿವೇಶನದಲ್ಲಿ ಪ್ರಧಾನಿ ಮೋದಿ 'ಅವರ್ ಕಲೆಕ್ಟಿವ್ ಸ್ಪ್ರಿಂಟ್​ ಟು 2030' ವಿಷಯದ ಮೇಲೆ ಮಾತನಾಡಲಿದ್ದಾರೆ.

ಶೃಂಗಸಭೆಯಲ್ಲಿ, ಹವಾಮಾನ ಬದಲಾವಣೆ, ಹವಾಮಾನ ಕ್ರಮಗಳನ್ನು ಹೆಚ್ಚಿಸುವುದು, ಹವಾಮಾನ ವೈಪರೀತ್ಯಗಳನ್ನು ತಗ್ಗಿಸುವಿಕೆ ಮತ್ತು ಹವಾಮಾನ ಹೊಂದಾಣಿಕೆಯ ಕಡೆಗೆ ಹಣಕಾಸು ಸಜ್ಜುಗೊಳಿಸುವುದು, ಪ್ರಕೃತಿ ಆಧಾರಿತ ಪರಿಹಾರಗಳು, ಹವಾಮಾನ ಸುರಕ್ಷತೆ ಮತ್ತು ಶುದ್ಧ ಶಕ್ತಿಗಾಗಿ ತಾಂತ್ರಿಕ ಆವಿಷ್ಕಾರಗಳ ಬಗ್ಗೆ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ರಾಷ್ಟ್ರೀಯ ಸನ್ನಿವೇಶಗಳು ಮತ್ತು ಸುಸ್ಥಿರ ಅಭಿವೃದ್ಧಿ ಆದ್ಯತೆಗಳನ್ನು ಗೌರವಿಸುವಾಗ, ಹವಾಮಾನ ಕ್ರಿಯೆಯನ್ನು ಅಂತರ್ಗತ ಮತ್ತು ಸ್ಥಿತಿಸ್ಥಾಪಕ ಆರ್ಥಿಕ ಅಭಿವೃದ್ಧಿಯೊಂದಿಗೆ ಜಗತ್ತು ಹೇಗೆ ಹೊಂದಿಸಬಹುದು ಎಂಬುದರ ಕುರಿತು ವಿಶ್ವ ನಾಯಕರು ಮಾತುಕತೆ ನಡೆಸಲಿದ್ದಾರೆ.

ಈ ಶೃಂಗಸಭೆಯು ಹವಾಮಾನ ಸಮಸ್ಯೆಗಳನ್ನು ಕೇಂದ್ರೀಕರಿಸುವ ಜಾಗತಿಕ ಸಭೆಗಳ ಒಂದು ಭಾಗವಾಗಿದೆ. ಈ ಸಭೆಯು 2021ರ ನವಂಬರ್​ವರೆಗೆ ನಡೆಯಲಿದೆ.

Last Updated : Apr 22, 2021, 5:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.