ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದು ಈ ವರ್ಷದ ಅವರ ಕೊನೆಯ ಮನ್ ಕಿ ಬಾತ್ ಆಗಿದ್ದರಿಂದ ಸ್ವಲ್ಪ ವಿಶೇಷತೆ ಪಡೆದುಕೊಂಡಿದೆ. ಇಂದಿನ ಮನ್ ಕಿ ಬಾತ್ ಬಗ್ಗೆ ಮೋದಿ ಟ್ವೀಟ್ ಮಾಡಿಕೊಂಡಿದ್ದಾರೆ. ಬರುವ 2021ನೇ ವರ್ಷವನ್ನು ಯಾವ ರೀತಿ ಮುನ್ನಡೆಸುವಿರಿ ಅನ್ನೋದನ್ನು ಹಂಚಿಕೊಳ್ಳಿ ಎಂದು ವಾರದ ಹಿಂದೆಯೇ ಈ ಬಗ್ಗೆ ಟ್ವೀಟ್ ಮಾಡಿದ್ದರು.
-
Tune-in tomorrow at 11 AM. #MannKiBaat pic.twitter.com/knB24XhvQt
— Narendra Modi (@narendramodi) December 26, 2020 " class="align-text-top noRightClick twitterSection" data="
">Tune-in tomorrow at 11 AM. #MannKiBaat pic.twitter.com/knB24XhvQt
— Narendra Modi (@narendramodi) December 26, 2020Tune-in tomorrow at 11 AM. #MannKiBaat pic.twitter.com/knB24XhvQt
— Narendra Modi (@narendramodi) December 26, 2020
ಡಿಸೆಂಬರ್ 27 ರಂದು ಈ ವರ್ಷದ ಕೊನೆಯ ಮನ್ ಕಿ ಬಾತ್ ನಡೆಯಲಿದೆ. ನಿಮ್ಮ ಸಂದೇಶವನ್ನು ನೀವು 1800-11-7800 ಗೆ ಕಳುಹಿಸಬಹುದು ಅಥವಾ ನಮೋ ಅಪ್ಲಿಕೇಶನ್ ಅಥವಾ ಮೈಗೋವಿ ಅಪ್ಲಿಕೇಶನ್‌ನಲ್ಲಿ ಕಳುಹಿಸಬಹುದು. ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು.
ಪ್ರಧಾನಮಂತ್ರಿಯವರ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತಿದ್ದು, ಅವರು ಇತ್ತೀಚಿನ ವಿಷಯಗಳ ಕುರಿತು ಮಾತನಾಡಲಿದ್ದಾರೆ.