ETV Bharat / bharat

ಎಂಜಿಆರ್ ವೈದ್ಯಕೀಯ ವಿವಿ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ - ತಮಿಳುನಾಡಿನಲ್ಲಿ ಪ್ರಧಾನಿ ಮೋದಿ ಭಾಷಣ

ಈ ವಿಶ್ವವಿದ್ಯಾಲಯದಲ್ಲಿ 41 ವೈದ್ಯಕೀಯ ಕಾಲೇಜುಗಳು, 19 ದಂತ ವೈದ್ಯ ಕಾಲೇಜುಗಳು, 48 ಆಯುಷ್ ಕಾಲೇಜುಗಳು, 199 ನರ್ಸಿಂಗ್ ಕಾಲೇಜುಗಳು, 81 ಫಾರ್ಮಸಿ ಕಾಲೇಜುಗಳು ಬರುತ್ತವೆ..

pm modi
ಪ್ರಧಾನಿ ನರೇಂದ್ರ ಮೋದಿ
author img

By

Published : Feb 26, 2021, 8:52 AM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದು, ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಘಟಿಕೋತ್ಸವದಲ್ಲಿ ಸುಮಾರು 17,591 ಅಭ್ಯರ್ಥಿಗಳಿಗೆ ಪದವಿ ಮತ್ತು ಡಿಪ್ಲೊಮಾಗಳನ್ನು ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸಮಾರಂಭದಲ್ಲಿ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು.. ಕಾರಣ ಇಲ್ಲದಿಲ್ಲ..

ಈ ವಿಶ್ವವಿದ್ಯಾಲಯಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ.ಎಂ.ಜಿ. ರಾಮಚಂದ್ರನ್ ಹೆಸರಿಡಲಾಗಿದೆ. ವಿಶ್ವವಿದ್ಯಾಲಯದ ಅಡಿಯಲ್ಲಿ ಸುಮಾರು 686 ಇನ್ಸ್​ಟಿಟ್ಯೂಷನ್​ಗಳು ಬರಲಿವೆ. ಈ ವಿವಿ ಮೆಡಿಸಿನ್, ಡೆಂಟಿಸ್ಟ್ರಿ, ಫಾರ್ಮಸಿ, ನರ್ಸಿಂಗ್, ಆಯುಷ್, ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗಗಳನ್ನು ಒಳಗೊಂಡಿದೆ.

ಈ ವಿಶ್ವವಿದ್ಯಾಲಯದಲ್ಲಿ 41 ವೈದ್ಯಕೀಯ ಕಾಲೇಜುಗಳು, 19 ದಂತ ವೈದ್ಯ ಕಾಲೇಜುಗಳು, 48 ಆಯುಷ್ ಕಾಲೇಜುಗಳು, 199 ನರ್ಸಿಂಗ್ ಕಾಲೇಜುಗಳು, 81 ಫಾರ್ಮಸಿ ಕಾಲೇಜುಗಳು ಬರುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.