ETV Bharat / bharat

ಸಿಲ್ಕ್ಯಾರಾ ಕಾರ್ಯಾಚರಣೆ ಮಾನವೀಯತೆ ಮತ್ತು ಟೀಂ ವರ್ಕ್​ಗೆ ಉದಾಹರಣೆ: ಮೋದಿ ಶ್ಲಾಘನೆ

ಸಿಲ್ಕ್ಯಾರಾ ಸುರಂಗ ಕಾರ್ಯಾಚರಣೆಯು ಮಾನವೀಯತೆ ಹಾಗೂ ಟೀಮ್​ವರ್ಕ್​ಗೆ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

author img

By ETV Bharat Karnataka Team

Published : Nov 28, 2023, 10:50 PM IST

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಸಿಲ್ಕ್ಯಾರಾ ಸುರಂಗ ಕಾರ್ಯಾಚರಣೆಯಲ್ಲಿ ತೊಡಗಿದ್ದ ರಕ್ಷಕರ ಶೌರ್ಯ ಮತ್ತು ಸಂಕಲ್ಪವನ್ನು ಮಂಗಳವಾರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 17 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ರಕ್ಷಕರು ಹೊಸ ಜೀವನವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಈ ಕಾರ್ಯಾಚರಣೆ "ಮಾನವೀಯತೆ ಮತ್ತು ಟೀಮ್‌ವರ್ಕ್​ಗೆ ಉದಾಹರಣೆ" ಎಂದು ಬಣ್ಣಿಸಿದ್ದಾರೆ.

ಈ ಬಗ್ಗೆ ಎಕ್ಸ್ ಆ್ಯಪ್​​ನಲ್ಲಿ( ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿರುವ ಅವರು, ​ಉತ್ತರಕಾಶಿಯಲ್ಲಿನ ನಮ್ಮ ಕಾರ್ಮಿಕ ಸಹೋದರರ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಲುಕಿರುವ ಸ್ನೇಹಿತರಿಗೆ ನಾನು ಹೇಳಲು ಬಯಸುತ್ತೇನೆ ಎಂದಿದ್ದಾರೆ.

ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯ ಬಯಸುತ್ತೇನೆ. ದೀರ್ಘಕಾಲದ ಕಾಯುವಿಕೆ ನಂತರ, ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವುದು ತುಂಬಾ ತೃಪ್ತಿಯ ವಿಷಯವಾಗಿದೆ. ಈ ಸವಾಲಿನ ಸಮಯದಲ್ಲಿ ಈ ಎಲ್ಲ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯವನ್ನು ಎಷ್ಟು ಗುಣಗಾನ ಮಾಡಿದರೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಸಾಂಘಿಕ ಕಾರ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೇಂದ್ರ ರಾಜ್ಯ ಸಚಿವ ಜನರಲ್ (ನಿವೃತ್ತ) ವಿ ಕೆ ಸಿಂಗ್ ಅವರೊಂದಿಗೆ ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಭೇಟಿ ಮಾಡಿದರು. 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ರಕ್ಷಕರಿಗೆ ಸ್ಥಳೀಯರು ಸಿಹಿ ಹಂಚಿದರು. ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಇದು ನಮಗೆ ಸಮಾಧಾನ ಮತ್ತು ಸಂತಸವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಕಳೆದ 16 ದಿನಗಳಿಂದ ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು. ಇತ್ತೀಚೆಗೆ ಎಂಡೋಸ್ಕೋಪಿ ಮಾದರಿಯ ಕ್ಯಾಮೆರಾವನ್ನು ಸುರಂಗದೊಳಗೆ ಕಳುಹಿಸಿ ಕಾರ್ಮಿಕರ ಸುರಕ್ಷತೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಮತ್ತು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂಬುದನ್ನ ದೃಢಪಡಿಸಿಕೊಂಡಿದ್ದರು. ಆ ಬಳಿಕ ಆಹಾರ ಮತ್ತು ಪಾನೀಯಗಳನ್ನು ಪೈಪ್‌ ಮೂಲಕ ಕಳುಹಿಸಿ ಕಾರ್ಮಿಕರ ಆರೋಗ್ಯ ಕಾಪಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ವಾಕಿ- ಟಾಕಿಗಳ ಮೂಲಕ ಸಂತ್ರಸ್ತರೊಂದಿಗೆ ಮಾತನಾಡುತ್ತಿದ್ದರು. ಈ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು. ಅಂತಿಮವಾಗಿ ಇದೀಗ ಎಲ್ಲಾ ಕಾರ್ಮಿಕರು ಹೊರಗೆ ಬಂದಿದ್ದಾರೆ.

ಇದನ್ನೂ ಓದಿ: ರಾಟ್ ಹೋಲ್ ಕಾರ್ಯಾಚರಣೆ; ಸಿಲ್ಕ್ಯಾರಾ ಸುರಂಗದಿಂದ ಕಾರ್ಮಿಕರು ಹೊರಬರಲು ಕ್ಷಣಗಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.