ETV Bharat / bharat

ಕೇರಳದಲ್ಲಿ ಯುಡಿಎಫ್-ಎಲ್​ಡಿಎಫ್ ಎರಡೂ ಅವಳಿ-ಜವಳಿ ಇದ್ದಂತೆ: ಮೋದಿ ವಾಗ್ದಾಳಿ

author img

By

Published : Apr 3, 2021, 3:00 AM IST

ದೇವರನಾಡು ಕೇರಳದಲ್ಲಿ ಶುಕ್ರವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಡಳಿತಾರೂಢ ಎಡ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರುದ್ಧ ವಾಗ್ದಾಳಿ ನಡೆಸಿದರು.

pm-modi-slams-udf-ldf-says-they-are-twins
ಯುಡಿಎಫ್-ಎಲ್​ಡಿಎಫ್

ತಿರುವನಂತಪುರಂ: ಕೇರಳದಲ್ಲಿ ಆಡಳಿತಾರೂಢ ಎಡಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಈ ಎರಡೂ ಬಣಗಳನ್ನು ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸಾಚಾರದಲ್ಲಿ ಅವಳಿ-ಜವಳಿಗಳೆಂದು ಟೀಕಿಸಿದ್ದಾರೆ.

ಶುಕ್ರವಾರ ಕೇರಳದಲ್ಲಿ ವಿಧಾನಸಭೆ ಚುನಾವಣೆಯ ತಮ್ಮ 2ನೇ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಯುಡಿಎಫ್ ಮತ್ತು ಎಲ್​ಡಿಎಫ್ ಅವಳಿ-ಜವಳಿ ಇದ್ದಂತೆ. ಅವರೆಡೂ ಪಕ್ಷಗಳು ಭ್ರಷ್ಟಾಚಾರ, ರಾಜಕೀಯ ಹಿಂಸೆ, ಕೋಮುವಾದ, ಜಾತಿವಾದ, ಕ್ರೋನಿಯಿಸಂ, ಸ್ವಜನಪಕ್ಷಪಾತ ಮತ್ತು ಇನ್ನಿತರ ವಿಷಯಗಳಲ್ಲಿ ಅವಳಿ-ಜವಳಿ ಎಂದು ವ್ಯಂಗ್ಯವಾಡಿದರು.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ನಡುವಿನ ಮೈತ್ರಿ ಉಲ್ಲೇಖಿಸಿ, ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣ ಎಲ್ಲರಿಗೂ ಸ್ಪಷ್ಟವಾಗಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಕಾಂಗ್ರೆಸ್ ಮತ್ತು ಎಡಪಂಥೀಯರು ಹತ್ತಿರವಾಗುತ್ತಿದ್ದಾರೆ. ಅಂತಹ ನಿಕಟತೆಯು ಕಾಂಗ್ರೆಸ್ ಮತ್ತು ಎಡಪಂಥೀಯರ ವಿಲೀನತೆಯನ್ನು ತೋರಿಸುತ್ತದೆ. ಇವೆರಡನ್ನೂ ಸೇರಿಸಿ ಹೊಸದಾಗಿ 'ಸಿಸಿಪಿ-ಕಾಮ್ರೇಡ್ ಕಾಂಗ್ರೆಸ್' ಪಕ್ಷ ಅಂತ ಕರೆಯಬಹುದು ಎಂದು ಹೀಗಳೆದರು.

ಇದನ್ನೂ ಓದಿ : ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುವುದು ಬಿಜೆಪಿ ಕಾರ್ಯವಿಧಾನ: ರಾಹುಲ್ ವ್ಯಂಗ್ಯ

ಅವಳಿ-ಜವಳಿ ಆಗಿರುವುದರಿಂದಲೇ ಯುಡಿಎಫ್‌ಗೆ ಎಲ್​ಡಿಎಫ್​ನ್ನು ಸೋಲಿಸುವ ಸಾಮರ್ಥ್ಯವಿಲ್ಲ. ಈ ಬಾರಿ ಎನ್​ಡಿಎಗೆ ಬೆಂಬಲ ಸಿಗುವುದರಲ್ಲಿ ಆಶ್ಚರ್ಯವಿಲ್ಲ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿ ಪಥ್ನಮತ್ತಟ್ಟ ಜಿಲ್ಲೆಯ ಕೊನ್ನಿಯಲ್ಲಿ ನಡೆದ ರ‍್ಯಾಲಿಯಲ್ಲಿನ ಭಾಷಣದಲ್ಲೂ ಎರಡೂ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.