ನವದೆಹಲಿ: ಇಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ 73 ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಯಲಲಿತಾ ಅವರನ್ನು ಸ್ಮರಿಸಿಕೊಂಡಿದ್ದಾರೆ.
"ನಮ್ಮ 'ನಾರಿ ಶಕ್ತಿ'ಯನ್ನು ಸಬಲೀಕರಣಗೊಳಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದರು" ಎಂದು ಜಯಾ ಸಾಧನೆಯನ್ನು ಸ್ಮರಿಸಿದ್ದಾರೆ.
"ಜಯಲಲಿತಾ ಅವರ ಜನ್ಮ ವಾರ್ಷಿಕೋತ್ಸವದಂದು ಸ್ಮರಿಸಿಕೊಳ್ಳುತ್ತೇನೆ. ಅವರು ಜನರ ಪರವಾದ ನೀತಿಗಳು ಮತ್ತು ದೀನ ದಲಿತರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳಿಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದರು. ನಮ್ಮ ನಾರಿ ಶಕ್ತಿಯನ್ನು ಸಶಕ್ತಗೊಳಿಸಲು ಅವರು ಗಮನಾರ್ಹ ಪ್ರಯತ್ನಗಳನ್ನು ಸಹ ಮಾಡಿದ್ದಾರೆ. ನಾನು ಅವರೊಂದಿಗೆ ಹಲವಾರು ಸಂವಾದಗಳನ್ನು ನಡಸಿದ್ದೇನೆ" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
1948ರಲ್ಲಿ ಜನಿಸಿದ ಜಯಲಲಿತಾ 1991 ರಿಂದ 2016ರ ನಡುವೆ ಹದಿನಾಲ್ಕು ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಐದು ಅವಧಿಗೆ ಸೇವೆ ಸಲ್ಲಿಸಿದರು. 1982 ರಲ್ಲಿ ಎಂಜಿ ರಾಮಚಂದ್ರನ್ ಸ್ಥಾಪಿಸಿದ ಎಐಎಡಿಎಂಕೆ ಪಕ್ಷ ಸೇರ್ಪಡೆಗೊಂಡಿದ್ದರು.