ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ( Morning Consult Global Leader Approval Rating Tracker ) ಪ್ರಕಾರ ಈ ವರ್ಷವೂ ಅವರು ವಿಶ್ವದ ಅಗ್ರ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ. ಹಾಗೆ ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿಶ್ವದ ಹಲವು ನಾಯಕರನ್ನು ಮೋದಿ ಹಿಂದಿಕ್ಕಿದ್ದಾರೆ.
-
PM @NarendraModi ji continues to be the most admired world leader.
— Piyush Goyal (@PiyushGoyal) November 6, 2021 " class="align-text-top noRightClick twitterSection" data="
With an approval rating of 70% he once again leads among global leadershttps://t.co/zlyROFfBIV pic.twitter.com/3fa2O4cW0M
">PM @NarendraModi ji continues to be the most admired world leader.
— Piyush Goyal (@PiyushGoyal) November 6, 2021
With an approval rating of 70% he once again leads among global leadershttps://t.co/zlyROFfBIV pic.twitter.com/3fa2O4cW0MPM @NarendraModi ji continues to be the most admired world leader.
— Piyush Goyal (@PiyushGoyal) November 6, 2021
With an approval rating of 70% he once again leads among global leadershttps://t.co/zlyROFfBIV pic.twitter.com/3fa2O4cW0M
ಗ್ಲೋಬಲ್ ಲೀಡರ್ ಟ್ರ್ಯಾಕರ್‌ನಲ್ಲಿ ಮೋದಿ ಅತ್ಯಧಿಕ ಅಂದರೆ ಶೇಕಡಾ 70 ರೇಟಿಂಗ್ ಅನ್ನು ಪಡೆದುಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಮೆಕ್ಸಿಕೊ ಅಧ್ಯಕ್ಷ ಲೋಪೆಜ್ ಒಬ್ರಡಾರ್ (66%) ಪ್ರತಿಶತದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ (58%) ಮೂರನೇ ಸ್ಥಾನದಲ್ಲಿದ್ದರೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ (54%), ಯುಎಸ್ ಅಧ್ಯಕ್ಷ ಜೋ ಬೈಡನ್ (44%)ರೊಂದಿಗೆ ಆರನೇ ಸ್ಥಾನ ಪಡೆದಿದ್ದಾರೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 43 ಪ್ರತಿಶತ ರೇಟಿಂಗ್‌ನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ ಮತ್ತು ದಕ್ಷಿಣ ಕೊರಿಯಾದ ನಾಯಕ ಮೂನ್ ಜೇ-ಇನ್ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ ಅಂದರೆ, ಟಾಪ್ ಟೆನ್ನಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ಸಚಿವ ಮತ್ತು ಆಹಾರ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ಮಾಹಿತಿಯನ್ನು ಕೂ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ರೇಟಿಂಗ್ ಹೊರಬಿದ್ದಿದೆ. ಪ್ರತಿ ವರ್ಷ 13 ವಿಶ್ವ ನಾಯಕರನ್ನು ಮಾರ್ನಿಂಗ್ ಕನ್ಸಲ್ಟ್ ಮೂಲಕ ರೇಟ್ ಮಾಡಲಾಗುತ್ತದೆ. ಇವುಗಳಲ್ಲಿ ಆಸ್ಟ್ರೇಲಿಯಾ, ಭಾರತ, ಬ್ರೆಜಿಲ್, ಯುಎಸ್ಎ, ಯುಕೆ, ಜಪಾನ್, ಇಟಲಿ, ಮೆಕ್ಸಿಕೊ, ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಕೆನಡಾ ಸೇರಿವೆ.
ಸಂಸ್ಥೆಯು ಪ್ರತಿ ದೇಶದಲ್ಲಿಯೂ ಸಮೀಕ್ಷೆಯನ್ನು ನಡೆಸುತ್ತದೆ. ಅದರ ಆಧಾರದ ಮೇಲೆ ಆಯಾ ನಾಯಕರ ಜನಪ್ರಿಯತೆಯ ರೇಟಿಂಗ್ ಅನ್ನು ನೀಡಲಾಗುತ್ತದೆ. ರೇಟಿಂಗ್ ಪ್ರಪಂಚದಾದ್ಯಂತದ ನಾಯಕರ ಜನಪ್ರಿಯತೆಯನ್ನು ತೋರಿಸುತ್ತದೆ. ಕಳೆದ ವರ್ಷವೂ ಪ್ರಧಾನಿ ಮೋದಿ ರೇಟಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು.
ಯಾರ್ಯಾರಿಗೆ ಎಷ್ಟು ರೇಟಿಂಗ್..
1 | ನರೇಂದ್ರ ಮೋದಿ | ಶೇ 70 |
2 | ಲೋಪೆಜ್ ಒಬ್ರಡಾರ್ | ಶೇ 66 |
3 | ಮಾರಿಯೋ ಡ್ರಾಘಿ | ಶೇ 58 |
4 | ಏಂಜೆಲಾ ಮರ್ಕೆಲ್ | ಶೇ 54 |
5 | ಸ್ಕಾಟ್ ಮಾರಿಸನ್ | ಶೇ 47 |
6 | ಜೋ ಬೈಡನ್ | ಶೇ 44 |
7 | ಜಸ್ಟಿನ್ ಟ್ರುಡೊ | ಶೇ 43 |
8 | ಫ್ಯೂಮಿಯೊ ಕಿಶಿಡಾ | ಶೇ 42 |
9 | ಮೂನ್ ಜೇ-ಇನ್ | ಶೇ 41 |
10 | ಬೋರಿಸ್ ಜಾನ್ಸನ್ | ಶೇ 40 |
11 | ಪೆಡ್ರೊ ಸ್ಯಾಂಚೆಜ್ | ಶೇ 37 |
12 | ಎಮ್ಯಾನುಯೆಲ್ ಮ್ಯಾಕ್ರನ್ | ಶೇ 36 |
13 | ಜೈರ್ ಬೋಲ್ಸನಾರೊ | ಶೇ 35 |