ETV Bharat / bharat

9 ಕೋಟಿ ರೈತರಿಗಾಗಿ 18,000 ಕೋಟಿ ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ - 'ಆತ್ಮನಿರ್ಭರ ಭಾರತ'

ದೇಶದ 9 ಕೋಟಿ ರೈತರಿಗೆ ತಲಾ 2 ಸಾವಿರದಂತೆ 18,000 ಕೋಟಿ ರೂಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

PM Modi releases Rs 18,000 cr to farmers under PM-KISAN
ಪ್ರಧಾನಿ ಮೋದಿ
author img

By

Published : Dec 25, 2020, 1:26 PM IST

Updated : Dec 25, 2020, 2:32 PM IST

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಇಂದು 18,000 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಇದೀಗ 9 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ರೂಪಾಯಿ ಹಣ ಜಮೆಯಾಗಲಿದೆ. ಅರ್ಹ ಫಲಾನುಭವಿ ರೈತರಿಗೆ ವರ್ಷಕ್ಕೆ 6 ಸಾವಿರದಂತೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿ ಪಾವತಿಸಲಾಗುವುದು ಎಂದು ಪ್ರಧಾನಿ ವಿವರಿಸಿದರು.

  • Today, more than Rs 18,000 crores have been directly deposited in the accounts of farmers; no middlemen, no commissions: PM Narendra Modi addresses farmers pic.twitter.com/wXA1HweLqH

    — ANI (@ANI) December 25, 2020 " class="align-text-top noRightClick twitterSection" data=" ">

ಹಣ ಬಿಡುಗಡೆ ಮಾಡಿದ ಬಳಿಕ ರೈತರೊಂದಿಗೆ ವರ್ಚುವಲ್​ ಸಂವಾದ ನಡೆಸಿದ ಮೋದಿ, ಇಲ್ಲಿ ಯಾವುದೇ ಮಧ್ಯವರ್ತಿಗಳಿರುವುದಿಲ್ಲ, ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

'ಆತ್ಮನಿರ್ಭರ' ಕೃಷಿಕ ಮಾತ್ರ 'ಆತ್ಮನಿರ್ಭರ ಭಾರತ'ಕ್ಕೆ ಅಡಿಪಾಯ ಹಾಕಬಹುದು

ಇಂದು ಪ್ರತಿಯೊಬ್ಬ ರೈತನು ತನ್ನ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಎಲ್ಲಿ ಪಡೆಯುತ್ತಾನೆಂದು ತಿಳಿದಿದ್ದಾನೆ. ಈ ನೂತನ ಕೃಷಿ ಕಾನೂನುಗಳೊಂದಿಗೆ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತರಿಗೆ ಅನುಕೂಲವಾಗುತ್ತಿರುವುದರಲ್ಲಿ ತಪ್ಪು ಏನಿದೆ? ಎಂದು ತಮ್ಮ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.

ಹಲವಾರು ವರ್ಷ ಆಡಳಿತ ನಡೆಸಿದ ಹಿಂದಿನ ಸರ್ಕಾರ ರೈತರನ್ನು, ನೀಡಿದ ಭರವಸೆಗಳನ್ನು ಮರೆತುಬಿಟ್ಟಿದ್ದರು. ಹಿಂದಿನ ಸರ್ಕಾರದ ಕೃಷಿ ನೀತಿಗಳಿಂದಾಗಿ ಬಡವರು ಬಡವರಾದರು. ಈಗಲಾದರು ರೈತರ ಸ್ಥಿತಿಯನ್ನು ಬದಲಾಯಿಸುವುದು ಮುಖ್ಯವಲ್ಲವೇ? ಎಂದ ಪ್ರಧಾನಿ ರೈತರ ಬಗೆಗಿನ ನಮ್ಮ ಬದ್ಧತೆಯಿಂದಾಗಿ ಅವರ ಎಲ್ಲ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ನಾವು ಸಿದ್ಧರಿದ್ದೇವೆ. ನಮ್ಮ ಸರ್ಕಾರವು ನಮ್ಮನ್ನು ವಿರೋಧಿಸುವವರೊಂದಿಗೆ ಮಾತನಾಡಲು ಸಿದ್ಧವಾಗಿದೆ. 'ಆತ್ಮನಿರ್ಭರ' ಕೃಷಿಕ ಮಾತ್ರ 'ಆತ್ಮನಿರ್ಭರ ಭಾರತ'ಕ್ಕೆ ಅಡಿಪಾಯ ಹಾಕಬಹುದು ಎಂದರು.

ಮಮತಾ ಬ್ಯಾನರ್ಜಿ ಸಿದ್ಧಾಂತ ಬಂಗಾಳವನ್ನು ನಾಶಪಡಿಸಿದೆ

ಪಶ್ಚಿಮ ಬಂಗಾಳದ ರೈತರು ಕೇಂದ್ರದ ಯೋಜನೆಗಳ ಲಾಭದಿಂದ ವಂಚಿತರಾಗಿದ್ದಾರೆ. ಯೋಜನೆಗಳ ಪ್ರಯೋಜನಗಳನ್ನು ರೈತರಿಗೆ ತಲುಪಲು ಅನುಮತಿಸದ ಏಕೈಕ ರಾಜ್ಯವೆಂದರೆ ಅದು ಪಶ್ಚಿಮ ಬಂಗಾಳ. ಸಿಎಂ ಮಮತಾ ಬ್ಯಾನರ್ಜಿಯ ಸಿದ್ಧಾಂತವು ರಾಜ್ಯವನ್ನು ನಾಶಪಡಿಸಿದೆ. ರೈತರ ವಿರುದ್ಧ ಅವರು ತೆಗೆದುಕೊಂಡ ಕ್ರಮಗಳು ನನಗೆ ತುಂಬಾ ನೋವುಂಟುಮಾಡಿದೆ. ಈ ಬಗ್ಗೆ ಪ್ರತಿಪಕ್ಷಗಳು ಏಕೆ ಶಾಂತವಾಗಿವೆ?

ಓದಿ: 30ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ.. ಮತ್ತೆ ಕೇಂದ್ರದ ಪತ್ರ, ಎಂಎಸ್​ಪಿ ಕಾನೂನಿಗೆ ನಕಾರ

ಮಂಡಿಗಳು, ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಬಗ್ಗೆ ಮಾತನಾಡುವ ಗುಂಪುಗಳು ಪಶ್ಚಿಮ ಬಂಗಾಳ, ಕೇರಳವನ್ನು ನಾಶಪಡಿಸಿದ್ದಾವೆ. ಕೇರಳದಲ್ಲಿ ಎಪಿಎಂಸಿ ಮತ್ತು ಮಂಡಿಗಳೇ ಇಲ್ಲ. ಆದರೂ ಕೇರಳದಲ್ಲಿ ಯಾಕೆ ಪ್ರತಿಭಟನೆಗಳು ನಡೆಯುತ್ತಿಲ್ಲ? ಪಂಜಾಬ್‌ನ ರೈತರನ್ನು ಮಾತ್ರ ದಾರಿ ತಪ್ಪಿಸಲಾಗುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ಒಪ್ಪಂದದ ಕೃಷಿ ನಡೆಸಲು ಪ್ರಯತ್ನಿಸಲಾಗಿದೆ. ಇದನ್ನು ಡೈರಿ ಉದ್ಯಮದಲ್ಲಿ ನಡೆಸಲಾಗಿದೆ. ಯಾವುದಾದರೂ ಕಂಪನಿ ಡೈರಿ ಉದ್ಯಮವನ್ನು ಏಕಸ್ವಾಮ್ಯಗೊಳಿಸಿದೆ ಎಂಬುದನ್ನು ನೀವು ಕೇಳಿದ್ದೀರಾ?

ಇದೇ ವೇಳೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಮನವಿ ಮಾಡಿದರು.

Last Updated : Dec 25, 2020, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.