ಸೂರತ್: ಕಳೆದ ಎರಡು ದಶಕಗಳಲ್ಲಿ ಸೂರತ್‌ನಲ್ಲಿ ಸರ್ಕಾರ ಸುಮಾರು 80,000 ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಅವರ ಜೀವನಮಟ್ಟವನ್ನು ಉನ್ನತೀಕರಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಗುರುವಾರ ಸೂರತ್‌ನಲ್ಲಿ ತಮ್ಮ ರೋಡ್‌ಶೋ ನಡೆಸಿ ಬಳಿಕ ಮಾತನಾಡಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 4 ಕೋಟಿ ಬಡ ರೋಗಿಗಳು ದೇಶದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದು, ಅವರಲ್ಲಿ 32 ಲಕ್ಷಕ್ಕೂ ಹೆಚ್ಚು ರೋಗಿಗಳು ಗುಜರಾತ್ನವರು ಅದರಲ್ಲೂ 1.25ಲಕ್ಷ ರೋಗಿಗಳು ಸೂರತ್ನವರು ಎಂದರು.
ಶತಮಾನದ ಆರಂಭದ ದಶಕಗಳಲ್ಲಿ, ನಾವು 3P ಮಾದರಿಯನ್ನು ಅಂದರೆ ಸಾರ್ವಜನಿಕ, ಖಾಸಗಿ ಮತ್ತು ಪಾಲುದಾರಿಕೆ ಚರ್ಚಿಸುತ್ತಿದ್ದಾಗ ನಾನು ಸೂರತ್‌ಗೆ 4P ಅಂದರೆ ಜನರು, ಸಾರ್ವಜನಿಕ, ಖಾಸಗಿ ಮತ್ತು ಪಾಲುದಾರಿಕೆ, ಉದಾಹರಣೆಯನ್ನು ನೀಡಿದ್ದೆ. ಈ ಮಾದರಿಯಿಂದಾಗಿ ಈಗ ಸೂರತ್ ವಿಭಿನ್ನವಾಗಿ ರೂಪುಗೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ: ಸುನಿಲ್ ಛೆಟ್ರಿ ಬಗ್ಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಸಿರೀಸ್ ಬಿಡುಗಡೆ: ಪ್ರಧಾನಿ ಅಭಿನಂದನೆ