ETV Bharat / bharat

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೊಮ್ಮಗಳ ಮದುವೆ ಆರತಕ್ಷತೆ; ಅಮಾನತುಗೊಂಡ ಸಂಸದರು ಹಾಜರ್ - ಅಮಾನತುಗೊಂಡ ರಾಜ್ಯಸಭೆಯ ಸದಸ್ಯರ ಹೆಸರು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ವಿವಾಹ ಆರತಕ್ಷತೆ ಸೋಮವಾರ ದೆಹಲಿಯಲ್ಲಿ ನಡೆಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರಾಜ್ಯಸಭೆಯ ಅಮಾನತುಗೊಂಡ ಸದಸ್ಯರೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

wedding reception of venkaiah naidus granddaughter
ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡ ಗಣ್ಯರು
author img

By

Published : Dec 21, 2021, 10:51 PM IST

ನವದೆಹಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಮೊಮ್ಮಗಳು ನಿಹಾರಿಕಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮವು ಸೋಮವಾರ ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದು ನವದಂಪತಿಗೆ ಆಶೀರ್ವಾದ ಮಾಡಿದರು.

wedding reception of venkaiah naidus granddaughter
ಮದುವೆ ಆರತಕ್ಷತೆಯಲ್ಲಿ ಪಾಲ್ಗೊಂಡ ಗಣ್ಯರು

ಉಪರಾಷ್ಟ್ರಪತಿಯವರ ನಿವಾಸದಲ್ಲಿ ನಡೆದ ಈ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದರು. ಇದೇ ವೇಳೆ ನವವಿವಾಹಿತ ದಂಪತಿಗೆ ಪ್ರಧಾನಿ ಮೋದಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಇವರಷ್ಟೇ ಅಲ್ಲದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ರಕ್ಷಣಾ ಸಚಿವ ರಾಜನಾಥ್ ಸಿಂಗ್.

ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವು ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಆರತಕ್ಷತೆಗೆ ಆಗಮಿಸಿದ್ದ ಎಲ್ಲ ಗಣ್ಯರು ನವದಂಪತಿಗೆ ಆಶೀರ್ವದಿಸಿ ಶುಭ ಕೋರಿದರು.

ಎಂ.ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಉಷಾ ನಾಯ್ಡು ಅವರು ಉಪರಾಷ್ಟ್ರಪತಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಈ ಆರತಕ್ಷತೆ ಸಮಾರಂಭಕ್ಕೆ ಅಮಾನತುಗೊಂಡ ರಾಜ್ಯಸಭೆಯ ಎಲ್ಲ ಸಂಸದರು ಆಗಮಿಸಿದ್ದು ಹೆಚ್ಚು ಗಮನ ಸೆಳೆಯಿತು. ಇದನ್ನೂ ಓದಿ: ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು: ರಾಜ್ಯಸಭೆಯ 12 ವಿಪಕ್ಷ ಸಂಸದರು ಅಮಾನತು

ಅಮಾನತಿಗೆ ಕಾರಣ:

ಆಗಸ್ಟ್ 11 ರಂದು ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಶಿಸ್ತು ತೋರಿದ 12 ಸಂಸದರನ್ನು ಅಮಾನತು ಮಾಡಿ ಸಭಾಪತಿಗಳು ಆದೇಶ ನೀಡಿದ್ದು ಇದು ಸಂಸತ್ತಿನ ಕೋಲಾಹಲಕ್ಕೆ ದಾರಿ ಮಾಡಿಕೊಟ್ಟಿದೆ.

ಅಮಾನತುಗೊಂಡ ಸಂಸದರು:

ಅಖಿಲೇಶ್ ಪ್ರಸಾದ್ ಸಿಂಗ್ (ಕಾಂಗ್ರೆಸ್), ರಿಪುನ್ ಬೋರಾ (ಕಾಂಗ್ರೆಸ್), ಛಾಯಾ ವರ್ಮಾ (ಕಾಂಗ್ರೆಸ್), ರಾಜಮಣಿ ಪಟೇಲ್ (ಕಾಂಗ್ರೆಸ್), ಸೈಯದ್ ನಾಸಿರ್ ಹುಸೇನ್ (ಕಾಂಗ್ರೆಸ್), ಎಲಮರಮ್ ಕರೀಂ (ಸಿಪಿಎಂ). ಬಿನಯ್ ವಿಶ್ವಂ (ಸಿಪಿಐ), ಡೋಲಾ ಸೇನ್ (ಟಿಎಂಸಿ), ಶಾಂತಾ ಛೆಟ್ರಿ (ಟಿಎಂಸಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ), ಅನಿಲ್ ದೇಸಾಯಿ (ಶಿವಸೇನೆ). ಇದನ್ನೂ ಓದಿ: ಸರಿಯಾಗಿ ಕೆಲಸ ಮಾಡದ ವೈದ್ಯರನ್ನ ಕೂಡಲೇ ಅಮಾನತು ಮಾಡಿ: ಪ್ರಲ್ಹಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.