ETV Bharat / bharat

ಮೋದಿ ಫೋಟೋಕ್ಕಾಗಿ ಬಿಜೆಪಿ- ಟಿಆರ್​ಎಸ್​ ಕಿತ್ತಾಟ.. ಚಿತ್ರ ಅಂಟಿಸಿ ಬೆಲೆಏರಿಕೆ ವಿರುದ್ಧ ಕುಚೋದ್ಯ - ಪಡಿತರ ಅಂಗಡಿಯಲ್ಲಿ ಮೋದಿ ಫೋಟೋ

ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಬಿಜೆಪಿ ಮಧ್ಯೆ ಪ್ರಧಾನಿ ಮೋದಿ ಫೋಟೋಕ್ಕಾಗಿ ಜಗಳ ನಡೆದಿದೆ. ಪಡಿತರ ಅಂಗಡಿಯಲ್ಲಿ ಪ್ರಧಾನಿ ಚಿತ್ರ ಇಲ್ಲದ್ದನ್ನು ಪ್ರಶ್ನಿಸಿದ್ದಕ್ಕೆ ಟಿಆರ್​ಎಸ್​, ಬೆಲೆ ಏರಿಕೆಯನ್ನು ಕುಚೋದ್ಯ ಮಾಡಿ ಸಿಲಿಂಡರ್​ ಮೇಲೆ ಮೋದಿ ಚಿತ್ರ ಅಂಟಿಸಿದೆ.

pm-modi-pictures
ಮೋದಿ ಫೋಟೋಕ್ಕಾಗಿ ಬಿಜೆಪಿ- ಟಿಆರ್​ಎಸ್​ ಕಿತ್ತಾಟ
author img

By

Published : Sep 3, 2022, 10:50 PM IST

ಹೈದರಾಬಾದ್: ಬಿಜೆಪಿ ಮತ್ತು ಟಿಆರ್​ಎಸ್​ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಫೋಟೋಗಾಗಿ ಕಿತ್ತಾಟ ಜೋರಾಗಿದೆ. ಪಡಿತರ ಅಕ್ಕಿ ವಿತರಣೆಯಲ್ಲಿ ಕೇಂದ್ರದ ಪಾಲಿನ ಬಗ್ಗೆ ಉತ್ತರಿಸದ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತರಾಟೆಗೆ ತೆಗೆದುಕೊಂಡಿದ್ದರು. ಪಡಿತರ ಅಂಗಡಿಯಲ್ಲಿ ಮೋದಿ ಫೋಟೋ ಹಾಕಿದ್ದನ್ನು ಪ್ರಶ್ನಿಸಿದ್ದರು.

ಇದಕ್ಕೆ ವ್ಯಂಗ್ಯವಾಗಿ ತಿರುಗೇಟು ನೀಡಿರುವ ಟಿಆರ್​ಎಸ್​, ಅಡುಗೆ ಸಿಲಿಂಡರ್​ಗಳ ಮೇಲೆ ಮೋದಿ ನಗುತ್ತಿರುವ ಫೋಟೋ ಅಂಟಿಸಿ ಅದರ ಮೇಲೆ 1105 ರೂಪಾಯಿ ಬೆಲೆ ಬರೆದು "ನಿರ್ಮಲಾ ಸೀತಾರಾಮನ್​ ಅವರೇ ನೋಡಿಲ್ಲಿ" ಎಂದು ಛೇಡಿಸಿದ್ದಾರೆ.

"ನಿಮಗೆ ಪಡಿತರ ಅಂಗಡಿ ಮೇಲೆ ಪ್ರಧಾನಿ ಮೋದಿ ಅವರ ಚಿತ್ರ ಬೇಕಿದ್ದವು. ಇಲ್ಲಿ ಹಾಕಲಾಗಿದೆ. ನೀವು ತೆಲಂಗಾಣದಲ್ಲೇ ಇದ್ದೀರಲ್ಲಾ ನೋಡಿ" ಬೆಲೆ ಏರಿಕೆಯನ್ನು ವ್ಯಂಗ್ಯ ಮಾಡಿದಂತೆ ತೋರುವ ಪ್ರಧಾನಿ ಮೋದಿ ಭಾವಚಿತ್ರವನ್ನು ಹಾಕಿ ಬೆಲೆ ಸಮೇತ ಟಿಆರ್​ಎಸ್​ ಸಾಮಾಜಿಕ ಮಾಧ್ಯಮ ಟ್ವೀಟ್​ ಮಾಡಿದೆ.

ಇದಕ್ಕೂ ಮೊದಲು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲು ಎಷ್ಟು ಎಂಬುದಕ್ಕೆ ಉತ್ತರ ನೀಡಲು ಸಾಧ್ಯವಾಗದ ಬೀರ್ಕೂರ್​ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರ ಸರ್ಕಾರದ ಅಲ್ಲದೇ ಹೆಚ್ಚಿದ್ದರೂ ಪ್ರಧಾನಿಗಳ ಫೋಟೋ ಹಾಕದೇ ಇರುವ ಕ್ರಮವನ್ನು ಟೀಕಿಸಿದ್ದರು. ಇದು ಬಿಜೆಪಿ ಮತ್ತು ಟಿಆರ್​ಎಸ್​ ಮಧ್ಯೆ ಜಗಳಕ್ಕೆ ಕಾರಣವಾಗಿದೆ.

ಓದಿ: ಪಡಿತರದಲ್ಲಿ ಕೇಂದ್ರ ಸರ್ಕಾರದ ಪಾಲು ಗೊತ್ತಿರದ ಡಿಸಿಗೆ ಕೇಂದ್ರ ಹಣಕಾಸು ಸಚಿವರಿಂದ ತರಾಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.