ETV Bharat / bharat

ರಾಜೀವ್ ಗಾಂಧಿ 32ನೇ ಪುಣ್ಯತಿಥಿ: ಟ್ವೀಟ್​ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ

author img

By

Published : May 21, 2023, 1:28 PM IST

ರಾಜೀವ್ ಗಾಂಧಿ 32ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

modi
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಭೇಟಿ ನೀಡಿ ಇದೀಗ ಪಪುವಾ ನ್ಯೂಗಿನಿಗೆ ಪ್ರಯಾಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರತ್ನ ರಾಜೀವ್ ಗಾಂಧಿ ಅವರ 32 ನೇ ಪುಣ್ಯತಿಥಿಯ ಅಂಗವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿ, "ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ" ಎಂದಿದ್ದಾರೆ.

  • I pay tributes to former PM Shri Rajiv Gandhi Ji on his death anniversary.

    — Narendra Modi (@narendramodi) May 21, 2023 " class="align-text-top noRightClick twitterSection" data=" ">

ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇತರೆ ಗಣ್ಯರು ದೆಹಲಿಯ ವೀರ ಭೂಮಿಯಲ್ಲಿ ಮಾಜಿ ಪ್ರಧಾನಿಗೆ ಪುಷ್ಪ ನಮನ ಸಲ್ಲಿಸಿದರು.

  • पापा, आप मेरे साथ ही हैं, एक प्रेरणा के रूप में, यादों में, सदा! pic.twitter.com/WioVkdPZcr

    — Rahul Gandhi (@RahulGandhi) May 21, 2023 " class="align-text-top noRightClick twitterSection" data=" ">

'​ಅಪ್ಪಾ ನೀವು ಯಾವತ್ತಿಗೂ ನನಗೆ ಸ್ಪೂರ್ತಿ'​: ದಿವಂಗತ ರಾಜೀವ್ ಗಾಂಧಿ ಅವರ 32ನೇ ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಟ್ವೀಟ್​ ಮೂಲಕ ಪುತ್ರ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಕೋರಿದ್ದಾರೆ. ​ಅಪ್ಪಾ ನೀವು ಯಾವತ್ತಿಗೂ ನನಗೆ ಸ್ಪೂರ್ತಿಯಾಗಿರುತ್ತೀರಿ. ನನ್ನ ನೆನಪಿನಲ್ಲಿ ಸದಾ ಇರುತ್ತೀರಿ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಜೊತೆಗೆ ವಿಡಿಯೋ ಹಂಚಿಕೊಂಡಿದ್ದಾರೆ.

'ಭಾರತ ಮಾತೆಯ ಶ್ರೇಷ್ಠ ಸುಪುತ್ರ'​ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಟ್ವೀಟ್​ ಮಾಡಿ ನಮನ ಸಲ್ಲಿಸಿದ್ದಾರೆ, ರಾಜೀವ್ ಗಾಂಧಿ ಭಾರತ ಮಾತೆಯ ಶ್ರೇಷ್ಠ ಸುಪುತ್ರ. ಮತದಾನದ ವಯಸ್ಸನ್ನು ಕಡಿಮೆಗೊಳಿಸುವುದು, ಪಂಚಾಯತ್ ರಾಜ್, ಟೆಲಿಕಾಂ ಮತ್ತು ಐಟಿ ಕ್ಷೇತ್ರವನ್ನು ಬಲಪಡಿಸುವುದು ಸೇರಿದಂತೆ 21ನೇ ಶತಮಾನದಲ್ಲಿ ಭಾರತವನ್ನು ಪರಿವರ್ತಿಸಿದರು. ಅವರ ಹುತಾತ್ಮ ದಿನದಂದು ನಮ್ಮ ನಮನಗಳು" ಎಂದಿದ್ದಾರೆ.

ಇದನ್ನೂ ಓದಿ : ರಾಜೀವ್ ಗಾಂಧಿ 32ನೇ ಪುಣ್ಯತಿಥಿ : ಖರ್ಗೆ, ಸೋನಿಯಾ ಸೇರಿದಂತೆ ಗಣ್ಯರಿಂದ ಶ್ರದ್ಧಾಂಜಲಿ

ಆಗಸ್ಟ್ 20, 1944 ರಂದು ಜನಿಸಿದ ರಾಜೀವ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಸಂಸದೀಯ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಭಾರತ ರತ್ನ ಪುರಸ್ಕೃತರಾದ ಅವರು 1984 ರಿಂದ 1989 ರವರೆಗೆ ಭಾರತದ ಆರನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1984 ರಲ್ಲಿ ಅವರ ತಾಯಿ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಜೊತೆಗೆ, 'ಅತ್ಯಂತ ಕಿರಿಯ ಪ್ರಧಾನಿ' ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಇದನ್ನೂ ಓದಿ : ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ..

ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿ ನಡೆಸುತ್ತಿದ್ದ ವೇಳೆ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಆತ್ಮಹತ್ಯಾ ಬಾಂಬರ್‌ನಿಂದ ರಾಜೀವ್ ಗಾಂಧಿಯನ್ನು ಹತ್ಯೆಗೀಡಾದರು. ಅವರ ಪುಣ್ಯತಿಥಿಯನ್ನು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.