ETV Bharat / bharat

ಅಪ್ರತಿಮ ದೇಶ ಭಕ್ತ ಭಗತ್ ಸಿಂಗ್ ಜನ್ಮದಿನ: ಗೌರವ ಸಲ್ಲಿಸಿದ ಪ್ರಧಾನಿ ಮೋದಿ - ಪ್ರಧಾನಿ ಮೋದಿ

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

pm modi
ಪ್ರಧಾನಿ ಮೋದಿ
author img

By PTI

Published : Sep 28, 2023, 10:38 AM IST

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನ್ಯಾಯ ಮತ್ತು ಅವಿರತ ಹೋರಾಟದ ಪ್ರತೀಕವಾಗಿದ್ದಾರೆ. ತ್ಯಾಗ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ಅಚಲವಾದ ಸಮರ್ಪಣೆ ನಮ್ಮ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಅವರ ಜನ್ಮದಿನವನ್ನು ಇಂದು ಹೃದಯಪೂರ್ವಕವಾಗಿ ಸ್ಮರಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಜಿ ಸಚಿವ ವಿ. ಸೋಮಣ್ಣ ಟ್ವೀಟ್​ : ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮಾಡಿರುವ ಸೋಮಣ್ಣ, "ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ಅವರ ವಿಚಾರವನ್ನಲ್ಲ. ಭಾರತದ ಅನರ್ಘ್ಯ ಕ್ರಾಂತಿ ರತ್ನ, ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು" ಎಂದು ಬರೆದುಕೊಂಡಿದ್ದಾರೆ.

  • Remembering Shaheed Bhagat Singh on his birth anniversary. His sacrifice and unwavering dedication to the cause of India’s freedom continue to inspire generations. A beacon of courage, he will forever be a symbol of India's relentless fight for justice and liberty. pic.twitter.com/cCoCT8qE43

    — Narendra Modi (@narendramodi) September 28, 2023 " class="align-text-top noRightClick twitterSection" data=" ">

ಬಿ.ಶ್ರೀರಾಮುಲು ಟ್ವೀಟ್ ​: ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್‌ ಸಿಂಗ್ ಅವರ ಜನ್ಮದಿನದಂದು ಅನಂತ ಕೋಟಿ ಪ್ರಣಾಮಗಳು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಜೊತೆಗೆ, ಪ್ರತಾಪ್​ ಸಿಂಹ ಕೂಡ ಎಕ್ಸ್​ ಆ್ಯಪ್​ನಲ್ಲಿ ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್‌ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್​ಸಿಂಗ್​ ಹೆಸರು.. ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಘೋಷಣೆ

ಭಗತ್ ಸಿಂಗ್ ಅವರು ಸೆಪ್ಟೆಂಬರ್ 28, 1907 ರಲ್ಲಿ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ ಜನಿಸಿದ್ದರು. ಇವರ ತಂದೆ ಕಿಶನ್‌ ಸಿಂಗ್‌, ತಾಯಿ ವಿದ್ಯಾವತಿ. ಕಿಶನ್ ಸಿಂಗ್ ಜೀವ ವಿಮಾ ಕಂಪನಿಯಲ್ಲಿ ಏಜೆಂಟ್‌ ರಾಗಿ ಕೆಲಸ ಮಾಡುತ್ತಿದ್ದರು. ಭಗತ್ ಸಿಂಗ್ ಹುಟ್ಟಿದ ದಿನವೇ ಅವರ ತಂದೆ ಮತ್ತು ಅವರ ಇಬ್ಬರು ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್‌ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ : ಭಗತ್ ಸಿಂಗ್ ಮರಣದಂಡನೆ ರಿಹರ್ಸಲ್​.. ಚಿತ್ರದುರ್ಗದಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ವಿದ್ಯಾರ್ಥಿ ದುರಂತ ಅಂತ್ಯ

ಬಾಲ್ಯದಿಂದಲೇ ಭಗತ್​ ಸಿಂಗ್​ ಅವರು ಬ್ರಿಟಿಷರ ವಿರುದ್ಧ ಹೋರಾಡಬೇಕು, ಬ್ರಿಟಿಷ್​ ಮುಕ್ತ ಭಾರತದ ಕನಸು ಕಂಡಿದ್ದರು. ಇದಕ್ಕಾಗಿ ಸಮರ ಸಾರಲು ಹೊಲ, ಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನೇ ಬೆಳೆಯಬೇಕು ಎಂದು ಅವರು ಹೇಳುತ್ತಿದ್ದರು. ಇಂಕ್ವಿಲಾಬ್​ ಜಿಂದಾಬಾದ್​ ಎಂಬ ಘೋಷಣೆ ಹುಟ್ಟು ಹಾಕಿದ್ದರು.​ ಇದರ ಅರ್ಥ ಕ್ರಾಂತಿ ಚಿರಾಯುವಾಗಲಿ ಎಂಬುದಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು 1931 ರಲ್ಲಿ ಬ್ರಿಟಿಷರು 23 ನೇ ವಯಸ್ಸಿನಲ್ಲಿ ಗಲ್ಲಿಗೇರಿಸಿದರು.

ಇದನ್ನೂ ಓದಿ : ಲಾಲಾ ಲಜಪತ್​ ರಾಯ್​ ಸಾವಿಗೆ ಸೇಡು.. ಬ್ರಿಟಿಷ್ ಅಧಿಕಾರಿಯ ಹತ್ಯೆಗೆ ಶಪಥ ಮಾಡಿದ್ದರು ಭಗತ್ ಸಿಂಗ್..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.