ETV Bharat / bharat

ವೀರಪುತ್ರರ ದುರಂತ ಸಾವು: ಪಾರ್ಥಿವ ಶರೀರದ ಅಂತಿಮ ದರ್ಶನ, ಕುಟುಂಬಸ್ಥರಿಗೆ ನಮೋ ಸಾಂತ್ವನ - ದೆಹಲಿಯ ಪಾಲಂ ಏರ್​ಬೇಸ್​​

ಹೆಲಿಕಾಪ್ಟರ್​​​ ಅಪಘಾತದಲ್ಲಿ ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಎಲ್ಲರ ಪಾರ್ಥಿವ ಶರೀರ ಈಗಾಗಲೇ ದೆಹಲಿಯ ಪಾಲಂ ಏರ್​ಬೇಸ್​ಗೆ ಆಗಮಿಸಿದ್ದು, ಪ್ರಧಾನಿ ಮೋದಿ ಅಂತಿಮ ದರ್ಶನ ಪಡೆದುಕೊಂಡರು.

Modi Pays Tribute To General Bipin Rawat

author img

By

Published : Dec 9, 2021, 9:34 PM IST

ನವದೆಹಲಿ: ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಹೆಲಿಕಾಪ್ಟರ್​​​​ ಅಪಘಾತದಲ್ಲಿ ಸೇನಾ ಮುಖಂಡ ಬಿಪಿನ್​ ರಾವತ್​​​ ಅವರ ಪತ್ನಿ ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಅವರ ಪಾರ್ಥಿವ ಶರೀರಗಳನ್ನ ದೆಹಲಿಯ ಪಾಲಂ ಏರ್​ಬೇಸ್​ಗೆ ತೆಗೆದುಕೊಂಡು ಬರಲಾಗಿದೆ.

ಪಾರ್ಥಿವ ಶರೀರದ ಅಂತಿಮ ದರ್ಶನ,ಕುಟುಂಬಸ್ಥರಿಗೆ ನಮೋ ಸಾಂತ್ವನ

ಪಾಲಂ ಏರ್​​ಬೇಸ್​​​ನಲ್ಲಿ ಪಾರ್ಥಿವ ಶರೀರಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದ್ದು, ಅಂತಿಮ ದರ್ಶನ ಪಡೆದುಕೊಂಡರು. ಭಾರತಾಂಬೆಯ ವೀರ ಪುತ್ರರ ದುರಂತ ಅಂತ್ಯಕ್ಕೆ ನಮೋ ಭಾವುಕರಾಗಿದ್ದು, ಈ ವೇಳೆ ಕಂಡು ಬಂತು. ಇದರ ಬಳಿಕ ಯೋಧರ ಕುಟುಂಬಸ್ಥರಿಗೆ ನಮೋ ಸಾಂತ್ವನ ಹೇಳಿದರು.

ಇದನ್ನೂ ಓದಿರಿ: ಹೆಲಿಕಾಪ್ಟರ್​ ಪತನ: ದೆಹಲಿ ತಲುಪಿದ ಯೋಧರ ಪಾರ್ಥಿವ ಶರೀರ, ಅಂತಿಮ ದರ್ಶನ ಪಡೆದ ರಾಜನಾಥ್​ ಸಿಂಗ್​​​

ಪ್ರಧಾನಿ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್, ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅಂತಿಮ ನಮನ ಸಲ್ಲಿಸಿದರು. ಇದರ ಜೊತೆಗೆ ಮೂರು ಸೇನೆಯ ಪಡೆಗಳು ಅಗಲಿದ ವೀರ ಯೋಧರಿಗೆ ಗೌರವ ಸಲ್ಲಿಕೆ ಮಾಡಿದವು.

  • The 3 service chiefs - Army Chief Gen MM Naravane, Navy Chief Admiral R Hari Kumar & IAF chief Air Chief Marshal VR Chaudhari pay last respects to CDS Gen Bipin Rawat, his wife Madhulika Rawat & other 11 Armed Forces personnel who lost their lives in military chopper crash y'day. pic.twitter.com/HoXt8Jw0U6

    — ANI (@ANI) December 9, 2021 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.