ETV Bharat / bharat

ಭಾರತದ ಆರ್ಥಿಕ ಸ್ಥಿರತೆಗೆ ವಿಶ್ವಬ್ಯಾಂಕ್ ಅಧ್ಯಕ್ಷರ ಮೆಚ್ಚುಗೆ - ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್

ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರಿಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

World Bank president meets
World Bank president meets
author img

By

Published : Feb 23, 2023, 4:58 PM IST

ನವದೆಹಲಿ : ಜಾಗತಿಕ ಆರ್ಥಿಕ ಹಿಂಜರಿತದ ಮಧ್ಯೆಯೂ ಸ್ಥಿರ ಅಭಿವೃದ್ಧಿ ದರವನ್ನು ಕಾಯ್ದುಕೊಂಡಿದ್ದಕ್ಕೆ ವಿಶ್ವಬ್ಯಾಂಕ್ ಅಧ್ಯಕ್ಷ ಮಾಲ್ಪಾಸ್ ಭಾರತವನ್ನು ಶ್ಲಾಘಿಸಿದ್ದಾರೆ. ವ್ಯಾಪಾರ ವ್ಯವಹಾರಕ್ಕೆ ಪೂರಕವಾದ ವಾತಾವರಣವನ್ನು ಉತ್ತೇಜಿಸಲು ಮತ್ತು ಇಂಧನ ಬದಲಾವಣೆ ಪ್ರಕ್ರಿಯೆಯನ್ನು ವೇಗಗೊಳಿಸಲು ಅವರು ಈ ಸಂದರ್ಭದಲ್ಲಿ ಒತ್ತು ನೀಡಿದರು.

G20 ದೇಶದ ಹಣಕಾಸು ಸಚಿವರುಗಳು ಮತ್ತು ಸೆಂಟ್ರಲ್ ಬ್ಯಾಂಕ್‌ನ ಗವರ್ನರ್‌ಗಳ ಸಭೆಯಲ್ಲಿ ಭಾಗವಹಿಸಲು ಮಾಲ್ಪಾಸ್ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಮಾಲ್ಪಾಸ್, ಭಾರತವು ಶೇಕಡಾ 8 ರಷ್ಟು ಬೆಳವಣಿಗೆ ಸಾಧಿಸುವ ಮತ್ತು ಉಳಿಸಿಕೊಳ್ಳುವ ಗುರಿಯನ್ನು ಕುರಿತು ಚರ್ಚಿಸಿದರು. ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತವು ಸ್ಪರ್ಧಾತ್ಮಕತೆಯನ್ನು ನಿರ್ಮಿಸುವುದರಿಂದ ಖಾಸಗಿ ವಲಯದ ಹೂಡಿಕೆ ಮತ್ತು ವಾಣಿಜ್ಯ ಸಾಲದ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಮಾಲ್ಪಾಸ್ ಉಲ್ಲೇಖಿಸಿದರು.

ಬಂಡವಾಳ ಮಾರುಕಟ್ಟೆಗಳ ವಿಸ್ತರಣೆ ಮತ್ತು ವಿದೇಶಿ ನೇರ ಹೂಡಿಕೆಯ ದೊಡ್ಡ ಹೊಸ ಒಳಹರಿವುಗಳನ್ನು ಆಕರ್ಷಿಸುವ ಮಾರ್ಗವಾಗಿ ಡಿ-ಲಿಸ್ಟಿಂಗ್ ಕಂಪನಿಗಳ ಪಟ್ಟಿಯನ್ನು ತೆಗೆದುಹಾಕುವ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದರು. ಮಾಲ್ಪಾಸ್ ಮತ್ತು ಪ್ರಧಾನಿ ಮೋದಿ ಅವರು ವಿವಿಧ ಸಬ್ಸಿಡಿಗಳ ಪಾತ್ರ, ವೆಚ್ಚ ಮತ್ತು ಸಣ್ಣ ರೈತರು ಮತ್ತು ದುರ್ಬಲ ವಲಯಗಳಿಗೆ ನೀಡಬೇಕಾದ ಬೆಂಬಲದ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿದರು.

ವಿಶ್ವ ಬ್ಯಾಂಕ್ ಅಧ್ಯಕ್ಷ ಮಾಲ್ಪಾಸ್ ಅವರು ಸರ್ಕಾರದ ಹೊಸ ಬಜೆಟ್ ಮತ್ತು ರೂಪಾಯಿಯ ಇತ್ತೀಚಿನ ಸ್ಥಿರತೆಯನ್ನು ಸ್ವಾಗತಿಸಿದರು. ಇದು ವೇಗದ ಮತ್ತು ಸುಸ್ಥಿರ ಬೆಳವಣಿಗೆಗೆ ಅನುಕೂಲವಾಗಿದೆ ಎಂದ ಅವರು ಮಹಿಳಾ ಕಾರ್ಮಿಕ ಬಲದ ಹೆಚ್ಚಳ, ಮೂಲಸೌಕರ್ಯ ವಿಸ್ತರಣೆ, ಹಸಿರು ಹಣಕಾಸು, ಸುಸ್ಥಿರ ಕೃಷಿ ಮತ್ತು ನವೀಕರಿಸಬಹುದಾದ ಇಂಧನಕ್ಕೆ ವಿಶ್ವ ಬ್ಯಾಂಕ್ ಸಮೂಹದ ಬೆಂಬಲವನ್ನು ವ್ಯಕ್ತಪಡಿಸಿದರು.

ವಿಶ್ವಬ್ಯಾಂಕ್ ಕಾರ್ಯಕ್ಷಮತೆ ಪರಿಶೀಲಿಸಲು ಜಿ20 ಗ್ರೂಪ್: ವಿಶ್ವ ಬ್ಯಾಂಕ್‌ನ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಹವಾಮಾನ ಹಣಕಾಸಿಗಾಗಿ ಸಂಸ್ಥೆಯ ಸಾಲ ಸಾಮರ್ಥ್ಯವನ್ನು ಹೆಚ್ಚಿಸಲು ಪರಿಣಿತ ಜಿ 20 ಗುಂಪನ್ನು ರಚಿಸುವಂತೆ ಭಾರತ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾವನೆಯನ್ನು ಈ ವಾರ ಬೆಂಗಳೂರಿನ ನಂದಿ ಹಿಲ್ಸ್​ನಲ್ಲಿ ನಡೆಯಲಿರುವ G20 ಸಭೆಯಲ್ಲಿ ಮಂಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಾಲದ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಚರ್ಚೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಭಾರತವು ವಿಶ್ವಬ್ಯಾಂಕ್‌ಗೆ ಸುಧಾರಣೆಗಳಿಗಾಗಿ ಗುಂಪನ್ನು ರಚಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಮೂಲವೊಂದು ತಿಳಿಸಿದೆ.

ಜೂನ್​ನಲ್ಲಿ ಮಾಲ್ಪಾಸ್ ನಿವೃತ್ತಿ: ವಿಶ್ವಬ್ಯಾಂಕ್‌ನ ಸದ್ಯದ ಅಧ್ಯಕ್ಷರಾಗಿರುವ ಡೇವಿಡ್ ಮಾಲ್ಪಾಸ್ ಅವರು ತಮ್ಮ ಅವಧಿ ಮುಗಿಯುವ ಒಂದು ವರ್ಷದ ಮೊದಲು ಜೂನ್‌ನಲ್ಲಿ ತಮ್ಮ ಸ್ಥಾನ ತ್ಯಜಿಸುವ ನಿರ್ಧಾರವನ್ನು ಇತ್ತೀಚೆಗೆ ಪ್ರಕಟಿಸಿದರು. ವಿಶ್ವಬ್ಯಾಂಕ್​ನ ಮುಖ್ಯಸ್ಥರಾಗಿ ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಇವರು COVID-19 ಸಾಂಕ್ರಾಮಿಕ ಮತ್ತು ಉಕ್ರೇನ್‌ನ ರಷ್ಯಾದ ಆಕ್ರಮಣ ಮುಂತಾದ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಜಗತ್ತು ಹೇಗೆ ಮುಂದೆ ಸಾಗಿದೆ ಎಂಬುದನ್ನು ನೋಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಕುಡಿಯುವ ನೀರಿನ ಯೋಜನೆಗಳಿಗೆ ವಿಶ್ವಬ್ಯಾಂಕ್‌ನಿಂದ ₹51.7 ಕೋಟಿ ಡಾಲರ್ ಸಾಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.