ETV Bharat / bharat

ಒಲಿಂಪಿಕ್ಸ್​ ಸಾಧಕರ​​ ಜೊತೆ ಮೋದಿ ಬ್ರೇಕ್​ಫಾಸ್ಟ್: ಐಸ್​ಕ್ರೀಂ​​ ಸವಿದು ಸಂಭ್ರಮಿಸಿದ ಪಿ.ವಿ ಸಿಂಧು - ಪಿ.ವಿ. ಸಿಂಧು ಬ್ರೇಕ್​ಫಾಸ್ಟ್​

ಟೋಕಿಯೋ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಭಾರತದ ಪಿ.ವಿ ಸಿಂಧು ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಐಸ್​ ಕ್ರೀಂ ಸವಿದರು.

Indian Olympics contingent
Indian Olympics contingent
author img

By

Published : Aug 16, 2021, 2:19 PM IST

ನವದೆಹಲಿ: ಜಪಾನ್​​ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಭಾರತದ ಅಥ್ಲೀಟ್ಸ್​ ಜೊತೆ ಪ್ರಧಾನಿ ನರೇಂದ್ರ ಮೋದಿ ಉಪಹಾರದಲ್ಲಿ (ಬ್ರೇಕ್​ಫಾಸ್ಟ್) ಭಾಗಿಯಾದರು.

ಈ ವೇಳೆ ಜಾವೆಲಿನ್​ ಥ್ರೋವರ್​ ನೀರಜ್​ ಚೋಪ್ರಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ತಮ್ಮಿಷ್ಟದ ತಿಂಡಿ ಸವಿದು, ಖುಷಿಪಟ್ಟರು.

Indian Olympics contingent
ಬ್ಯಾಡ್ಮಿಂಟನ್​ ತಾರೆ ಪಿ.ವಿ ಸಿಂಧು ಜೊತೆ ಪ್ರಧಾನಿ

ಭಾರತದ ಅಥ್ಲೀಟ್ಸ್​ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಲು ತೆರಳುವುದಕ್ಕೂ ಮುನ್ನ ಎಲ್ಲರೊಂದಿಗೆ ಮೋದಿ ಸಂವಾದ ನಡೆಸಿ ಧೈರ್ಯ ತುಂಬಿದ್ದರು. ಇದೇ ವೇಳೆ, ಕ್ರೀಡಾಕೂಟದಿಂದ ವಾಪಸ್​ ಬಂದ ಬಳಿಕ ಪಿ.ವಿ ಸಿಂಧು ಜೊತೆಗೆ ಐಸ್​ ಕ್ರೀಂ ಸವಿಯುವುದಾಗಿ ಮೋದಿ ಭರವಸೆ ನೀಡಿದ್ದರು. ಅದರಂತೆ ಕಂಚಿನ ಪದಕ ವಿಜೇತೆ ಜೊತೆ ಪ್ರಧಾನಿ ಮೋದಿ ಇಂದು ಐಸ್​ ಕ್ರೀಂ ಸವಿದರು.

Indian Olympics contingent
ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್ಸ್‌ ಜೊತೆ ಪ್ರಧಾನಿ ಮೋದಿ

ಇದೇ ವೇಳೆ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್​ ಚೋಪ್ರಾ ಅವರ ಜೊತೆಗೆ ಮೋದಿ ಚೂರ್ಮಾ (churma) ಸೇವಿಸಿದರು. ಪ್ರಧಾನಿ ನಿವಾಸದಲ್ಲಿ ಆಯೋಜನೆಗೊಂಡಿದ್ದ ಸಮಾರಂಭಕ್ಕೆ ಎಲ್ಲ ಒಲಿಂಪಿಕ್ಸ್​ ಕ್ರೀಡಾಪಟುಗಳು ಆಗಮಿಸಿದ್ದರು.

Indian Olympics contingent
ಕ್ರೀಡಾಪಟುವಿನೊಂದಿಗೆ ನಮೋ ಮಾತು

ಇದಕ್ಕೂ ಮೊದಲು ಕ್ರೀಡಾಪಟುಗಳು ನಿನ್ನೆ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಒಟ್ಟು 7 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದು ಹೊಸ ದಾಖಲೆ ಬರೆದಿದೆ. ವಿಶೇಷವೆಂದರೆ, 120 ವರ್ಷಗಳ ಒಲಿಂಪಿಕ್ಸ್​ ಇತಿಹಾಸದಲ್ಲಿ ಮೊದಲ ಬಾರಿಗೆ ನೀರಜ್​ ಚೋಪ್ರಾ ಜಾವೆಲಿನ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.