ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 104ನೇ ಸಂಚಿಕೆಯನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ. ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.
ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿರುವ ಪ್ರಧಾನಿ, "ಭಾನುವಾರ ಬೆಳಗ್ಗೆ 11 ಗಂಟೆಗೆ 'ಮನ್ ಕಿ ಬಾತ್' ಕೇಳಿ. ಭಾರತದಾದ್ಯಂತ ಸ್ಪೂರ್ತಿದಾಯಕ ಜೀವನ ಪ್ರಯಾಣಗಳ ಬಗ್ಗೆ ಮಾತನಾಡಲು ನನಗೆ ಯಾವಾಗಲೂ ಸಂತೋಷವಾಗುತ್ತದೆ" ಎಂದು ಹೇಳಿದ್ದಾರೆ.
-
Tune in at 11 AM tomorrow. Always a delight to highlight inspiring life journeys from across India. #MannKiBaat pic.twitter.com/XixbJHB3VE
— Narendra Modi (@narendramodi) August 26, 2023 " class="align-text-top noRightClick twitterSection" data="
">Tune in at 11 AM tomorrow. Always a delight to highlight inspiring life journeys from across India. #MannKiBaat pic.twitter.com/XixbJHB3VE
— Narendra Modi (@narendramodi) August 26, 2023Tune in at 11 AM tomorrow. Always a delight to highlight inspiring life journeys from across India. #MannKiBaat pic.twitter.com/XixbJHB3VE
— Narendra Modi (@narendramodi) August 26, 2023
ಕಾರ್ಯಕ್ರಮವನ್ನು ಆಕಾಶವಾಣಿ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್, ಆಕಾಶವಾಣಿ ವೆಬ್‌ಸೈಟ್ ಮತ್ತು ನ್ಯೂಸನ್ ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಆಕಾಶವಾಣಿ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಆಕಾಶವಾಣಿ ಹಿಂದಿ ಪ್ರಸಾರವಾದ ತಕ್ಷಣ ಪ್ರಾದೇಶಿಕ ಭಾಷೆಗಳಲ್ಲಿಯೂ ಕಾರ್ಯಕ್ರಮ ಪ್ರಸಾರವಾಗುತ್ತದೆ.
ಮಾಧ್ಯಮ ವರದಿಗಳ ಪ್ರಕಾರ, ಜಾರ್ಖಂಡ್‌ನ ಲೋಹರ್ಡಗಾದ ಮಸಿಯತು ಗ್ರಾಮದ ಬಗ್ಗೆಯೂ ಇಂದಿನ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಲಿದ್ದಾರೆ. ಸ್ವಾವಲಂಬಿ ಭಾರತದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಗ್ರಾಮವನ್ನು ಪ್ರಧಾನಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಬಿದಿರಿನಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವುದು ಈ ಗ್ರಾಮದ ಜನರ ವಿಶೇಷತೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು 23 ಕೋಟಿ ಜನರು ಮನ್ ಕಿ ಬಾತ್ ಕಾರ್ಯಕ್ರಮವನ್ನು ನಿಯಮಿತವಾಗಿ ಕೇಳುತ್ತಿದ್ದಾರೆ.
ಇದನ್ನೂ ಓದಿ: Mann Ki Baat: ಇಂದು 11 ಗಂಟೆಗೆ 102ನೇ ಕಂತಿನ ಪ್ರಧಾನಿ ಮೋದಿ 'ಮನ್ ಕಿ ಬಾತ್'
ಅಕ್ಟೋಬರ್ 3, 2014ರಿಂದ ಆರಂಭವಾದ ತಮ್ಮ ಮನ್ ಕಿ ಬಾತ್ ಮೂಲಕ ನರೇಂದ್ರ ಮೋದಿ ಅವರು ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. 'ಮನ್ ಕಿ ಬಾತ್' ನ 103ನೇ ಆವೃತ್ತಿ ಜು.30ರಂದು ಪ್ರಸಾರವಾಗಿತ್ತು. ಮೋದಿ ಮೊದಲ ಬಾರಿಗೆ 'ನನ್ನ ಮಣ್ಣು, ನನ್ನ ದೇಶ' (Meri Mati Mera Desh) ಅಭಿಯಾನವನ್ನು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದರು. ಅಭಿಯಾನದಲ್ಲಿ ವೀರಯೋಧರನ್ನು ಸ್ಮರಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
102ನೇ ಸಂಚಿಕೆಯಲ್ಲಿ ಪ್ರಧಾನಿ 'ಯೋಗ ದಿನಾಚರಣೆ, ತುರ್ತು ಪರಿಸ್ಥಿತಿ, ಕ್ರೀಡೆ ಹಾಗೂ 2025ರ ವೇಳೆಗೆ ಭಾರತವನ್ನು ಟಿಬಿ ಮುಕ್ತಗೊಳಿಸುವ ಅಭಿಯಾನ ಮತ್ತು ಪ್ರಕೃತಿ ಸಂರಕ್ಷಣೆ' ಕುರಿತು ಮಾತನಾಡಿದ್ದರು. ಬಾನುಲಿ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ. ಆದರೆ ಪ್ರಧಾನಿ ಮೋದಿ ಜೂನ್ 21 ರಿಂದ ಜೂನ್ 24 ರವರೆಗೆ ಯುಎಸ್ ಪ್ರವಾಸದಲ್ಲಿದ್ದರು. ಹಾಗಾಗಿ ಕಾರ್ಯಕ್ರಮವನ್ನು ಜೂನ್ 18 ರಂದು ಪ್ರಸಾರ ಮಾಡಲಾಗಿತ್ತು.
30 ನಿಮಿಷಗಳ ಈ ಕಾರ್ಯಕ್ರಮ 30 ಏಪ್ರಿಲ್ 2023ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸಿತ್ತು. 22 ಭಾರತೀಯ ಭಾಷೆಗಳು ಮತ್ತು 29 ಉಪ ಭಾಷೆಗಳನ್ನು ಹೊರತುಪಡಿಸಿ, ಮನ್ ಕಿ ಬಾತ್ ಅನ್ನು 11 ವಿದೇಶಿ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗುತ್ತದೆ. (ಎಐಆರ್ ನ್ಯೂಸ್)
ಇದನ್ನೂ ಓದಿ: Mann Ki Baat: ತುರ್ತು ಪರಿಸ್ಥಿತಿ ಅವಧಿ ದೇಶದ ಇತಿಹಾಸದಲ್ಲಿ ಕರಾಳ ಯುಗ: ಪ್ರಧಾನಿ ಮೋದಿ