ನವದೆಹಲಿ: ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬದ್ಧ ಎದುರಾಳಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆ, ರಾಜಕೀಯ ಹೊರತು ಪಡಿಸಿದರೆ ಇಬ್ಬರ ಮಧ್ಯೆಯೂ ಉತ್ತಮ ಬಾಂಧವ್ಯ ಇದೆ ಎಂದೂ ಆಗಾಗ್ಗೆ ಕೆಲ ಸನ್ನಿವೇಶಗಳಿಂದ ಗೊತ್ತಾಗಿದೆ ಕೂಡ. ಇಂತಹ ಮತ್ತೊಂದು ಪ್ರಸಂಗ ಪ್ರಧಾನಿ ಮೋದಿ ಹಾಗೂ ಸಿಎಂ ಮಮತಾ ನಡುವೆ ಶನಿವಾರ ನಡೆದಿದೆ ಎನ್ನಲಾಗುತ್ತಿದೆ.
-
मोदी जी लाल मिर्ची का पेस्ट बनाने का फार्मूला बता रहे है ममता दीदी को,समझ रहे हो ना लाल मिर्च।https://t.co/5qROYW8cYD pic.twitter.com/MeffoTt6ve
— Ajay Sehrawat (@IamAjaySehrawat) April 30, 2022 " class="align-text-top noRightClick twitterSection" data="
">मोदी जी लाल मिर्ची का पेस्ट बनाने का फार्मूला बता रहे है ममता दीदी को,समझ रहे हो ना लाल मिर्च।https://t.co/5qROYW8cYD pic.twitter.com/MeffoTt6ve
— Ajay Sehrawat (@IamAjaySehrawat) April 30, 2022मोदी जी लाल मिर्ची का पेस्ट बनाने का फार्मूला बता रहे है ममता दीदी को,समझ रहे हो ना लाल मिर्च।https://t.co/5qROYW8cYD pic.twitter.com/MeffoTt6ve
— Ajay Sehrawat (@IamAjaySehrawat) April 30, 2022
ದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪಾಲ್ಗೊಂಡಿದ್ದರು. ಈ ಸಮಾವೇಶದಲ್ಲಿ ಮೋದಿ ಮತ್ತು ಮಮತಾ ಮುಖಾಮುಖಿಯಾಗಿದ್ದರು. ಅಷ್ಟೇ ಅಲ್ಲ, ಪರಸ್ಪರ ಮಾತುಕತೆ ಸಹ ನಡೆಸಿದ್ದರು.
ಇದೇ ವೇಳೆ ಪ್ರಧಾನಿ ಮೋದಿ ಸಿಎಂ ಮಮತಾ ಅವರಿಗೆ ಕೆಂಪು ಮೆಣಸಿನಕಾಯಿ ಕುರಿತು ಕೆಲ ಸಲಹೆಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಮೋದಿ ಸಲಹೆ ನೀಡುತ್ತಿದ್ದರೆ ಮಮತಾ ಆ ಮಾತನ್ನು ಬಹಳ ಸಾವಧಾನವಾಗಿ ಆಲಿಸುತ್ತಿದ್ದಾರೆ. ಇವರ ಇಬ್ಬರ ಮಧ್ಯೆ ಸಿಜೆಐ ಎನ್.ವಿ. ರಮಣ ಅವರು ನಿಂತಿದ್ದಾರೆ.
ಇದನ್ನೂ ಓದಿ: ಉಸ್ಮಾನಿಯಾ ವಿವಿಯಲ್ಲಿ ರಾಹುಲ್ ಗಾಂಧಿ ಸಭೆಗೆ ವಿರೋಧ: ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ