ETV Bharat / bharat

ಜಿ 7 ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್​ಗೆ ತೆರಳಿದ ಪ್ರಧಾನಿ ಮೋದಿ - G20 ಅಧ್ಯಕ್ಷ ಸ್ಥಾನ

ಜಪಾನ್, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ ಭೇಟಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

pm modi
ಪಿಎಂ ಮೋದಿ
author img

By

Published : May 19, 2023, 2:29 PM IST

ನವದೆಹಲಿ: ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತವನ್ನು ಅತಿಥಿ ರಾಷ್ಟ್ರವಾಗಿ ಆಹ್ವಾನಿಸಲಾಗಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಜಪಾನ್‌ಗೆ ತೆರಳಿದ್ದಾರೆ. ಜಪಾನ್​ ಭೇಟಿಯ ಬಳಿಕ ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾಕ್ಕೂ ಭೇಟಿ ನೀಡಲಿದ್ದಾರೆ.

ಜಿ7 ಶೃಂಗಸಭೆ ಹಿರೋಷಿಮಾದಲ್ಲಿ ಮೇ 19ರಿಂದ 21 ರವರೆಗೆ ನಡೆಯಲಿದೆ. ಈ ವರ್ಷ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಹತ್ವದ್ದಾಗಿದೆ. ಈ ಕುರಿತು ಟ್ವೀಟ್​ ಮಾಡಿರುವ ಮೋದಿ, "ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಭಾಗವಹಿಸಲು ಹಿರೋಷಿಮಾಕ್ಕೆ ತೆರಳುತ್ತಿದ್ದೇನೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಕಿಶಿಡಾ ಅವರನ್ನು ಮತ್ತೊಮ್ಮೆ ಭೇಟಿಯಾಗಲು ಸಂತೋಷವಾಗುತ್ತಿದೆ. ಈ ವರ್ಷ ಭಾರತವು ಡಿ20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಈ ಜಿ7 ಶೃಂಗಸಭೆಯಲ್ಲಿ ಭಾಗಿಯಾಗುವುದು ಅರ್ಥಪೂರ್ಣ" ಎಂದು ತಿಳಿಸಿದ್ದಾರೆ. ಹಾಗೆಯೇ, ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ.

  • Leaving for Japan, where I will be joining the @G7 Summit in Hiroshima. Looking forward to a healthy exchange of views on diverse global subjects. https://t.co/TYYOLeHAFH

    — Narendra Modi (@narendramodi) May 19, 2023 " class="align-text-top noRightClick twitterSection" data=" ">

ಇದನ್ನೂ ಓದಿ : ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?

ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ವೈವಿಧ್ಯಮಯ ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಶಾಂತಿ, ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿ, ಸಮೃದ್ಧಿಯಂತಹ ವಿಷಯಗಳ ಕುರಿತು ಪಾಲುದಾರ ರಾಷ್ಟ್ರಗಳೊಂದಿಗೆ ಚರ್ಚಿಸಲಾಗುತ್ತದೆ. ಜೊತೆಗೆ ಆಹಾರ, ರಸಗೊಬ್ಬರ, ಭದ್ರತೆ, ಆರೋಗ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಹಕಾರ ವಿಷಯಗಳ ಕುರಿತು ಮಾತು ನಡೆಯಲಿದ್ದು, ಶೃಂಗಸಭೆಯ ಜೊತೆಗೆ ಕೆಲವು ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ.

ಕಳೆದ ಮಾರ್ಚ್‌ 20 ರಂದು ಜಪಾನ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದರು. ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ಬಲಪಡಿಸುವ ಜವಾಬ್ದಾರಿಯನ್ನು ಎರಡೂ ದೇಶಗಳು ಹಂಚಿಕೊಳ್ಳುತ್ತವೆ ಎಂದು ಉಭಯ ನಾಯಕರು ದೃಢಪಡಿಸಿದ್ದರು. ಈ ವಿಚಾರವನ್ನು ಜಿ7 ಮತ್ತು ಜಿ20 ಸಭೆಗಳಲ್ಲಿ ಸ್ಪಷ್ಟವಾಗಿ ವಿವರಿಸುವುದಾಗಿ ಒಪ್ಪಿಕೊಂಡರು.

ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪಪುವಾ ನ್ಯೂಗಿನಿ ದೇಶಕ್ಕೆ ತೆರಳಲಿದ್ದಾರೆ. ಪಪುವಾ ನ್ಯೂಗಿನಿಯಾದಲ್ಲಿ FIPIC ಶೃಂಗಸಭೆ ನಡೆಯಲಿದೆ, ಈ ಸಭೆಯಲ್ಲಿ ಸಹ ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ಆರೋಗ್ಯ ರಕ್ಷಣೆ ಸೇರಿದಂತೆ ಇತರೆ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ.

ಇದನ್ನೂ ಓದಿ: ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಮೋದಿ..

ಆಸ್ಟ್ರೇಲಿಯಾ ಭೇಟಿ ಕುರಿತು ಟ್ವೀಟ್​ ಮಾಡಿದ ಪ್ರಧಾನಿ, "ನಾನು ಆಸ್ಟ್ರೇಲಿಯಾಕ್ಕೆ ಕೂಡ ಭೇಟಿ ನೀಡುತ್ತಿದ್ದೇನೆ, ಅಲ್ಲಿ ನನ್ನ ಸ್ನೇಹಿತ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಈ ಭೇಟಿಯು ಭಾರತ - ಆಸ್ಟ್ರೇಲಿಯಾದ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಮತ್ತು ಮೇ 23 ರಂದು ಸಿಡ್ನಿಯಲ್ಲಿ ಹಮ್ಮಿಕೊಂಡಿರುವ ಸಮುದಾಯದ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದು, ಆಸ್ಟ್ರೇಲಿಯಾದ ಉನ್ನತ CEO ಗಳನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ : ನಾಳೆಯಿಂದ ಮೋದಿ ವಿದೇಶ ಪ್ರವಾಸ: ಜಪಾನ್, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.