ETV Bharat / bharat

PM Modi: ತೆಲಂಗಾಣದಲ್ಲಿ 6100 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ - ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿ 6100 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
author img

By

Published : Jul 8, 2023, 2:49 PM IST

Updated : Jul 8, 2023, 3:00 PM IST

ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ವರಂಗಲ್(ತೆಲಂಗಾಣ): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣದಲ್ಲಿ 6,100 ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಶನಿವಾರ ಬೆಳಗ್ಗೆ ಹೈದರಾಬಾದ್‌ಗೆ ಬಂದಿಳಿದ ಪ್ರಧಾನಿ ಮೋದಿ, ಮೊದಲು ವರಂಗಲ್​​ನಲ್ಲಿ ಭದ್ರಕಾಳಿ ದೇವಿ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ಗೋವುಗಳಿಗೆ ಆಹಾರ ನೀಡಿ, ಬಳಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಇದರಲ್ಲಿ 5,550 ಕೋಟಿ ರೂಪಾಯಿ ಮೌಲ್ಯದ 176 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು 500 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ವ್ಯಾಗನ್ ಉತ್ಪಾದನಾ ಘಟಕ ಸೇರಿವೆ. ದೊಡ್ಡ ಪ್ರಮಾಣದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ರಾಜ್ಯಕ್ಕೆ ಬಂದ ಪ್ರಧಾನಿಯನ್ನು ಆಹ್ವಾನಿಸಲು ಮುಖ್ಯಮಂತ್ರಿ ಕೆಸಿಆರ್​ ಈ ಬಾರಿಯೂ ಆಗಮಿಸಿರಲಿಲ್ಲ.

  • #WATCH | "...The work of the BJP at the Center has truly empowered the tribal sections, poor & backward communities. Nowadays, some people are coming up with top guarantees to mislead the public before the elections...BJP never distributes empty promises & schemes...": PM… pic.twitter.com/SCXiZn1Yjd

    — ANI (@ANI) July 8, 2023 " class="align-text-top noRightClick twitterSection" data=" ">

ದೇಶದಲ್ಲಿ ಜಗತ್ತಿನ ಹೂಡಿಕೆ: ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರುಪ ಪ್ರಧಾನಿ ಮೋದಿ ಅವರು, ಇಡೀ ಜಗತ್ತೇ ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದೆ. ಭಾರತ ಹಲವು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸುತ್ತಿದೆ ಎಂದು ಹೇಳಿದರು.

ಉತ್ಪಾದನಾ ಕ್ಷೇತ್ರವು ದೇಶದ ಯುವಕರಿಗೆ ಉದ್ಯೋಗ ನೀಡುವ ದೊಡ್ಡ ವೇದಿಕೆಯಾಗಿದೆ. ಉತ್ಪಾದನೆಯನ್ನು ಉತ್ತೇಜಿಸಲು ನಾವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್‌ಐ) ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ 50 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ದಾಖಲೆ ಪ್ರಮಾಣದಲ್ಲಿ ಭಾರತ ರಕ್ಷಣಾ ರಫ್ತು ಮಾಡುತ್ತಿದೆ. 9 ವರ್ಷಗಳ ಹಿಂದೆ ಭಾರತದ ರಕ್ಷಣಾ ರಫ್ತು 1000 ಕೋಟಿ ರೂ.ಗಿಂತ ಕಡಿಮೆಯಿತ್ತು. ಈಗ ಅದು 16,000 ಕೋಟಿ ರೂ. ದಾಟಿದೆ ಎಂದು ಪ್ರಧಾನಿ ಹೇಳಿದರು.

ಪ್ರತಿ ರಾಜ್ಯಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳು ಮೊದಲಿಗಿಂತ ವೇಗವಾಗಿ ಪ್ರಗತಿ ಸಾಧಿಸುತ್ತಿವೆ. ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇ, ಆರ್ಥಿಕ ಕಾರಿಡಾರ್‌ ಮತ್ತು ಕೈಗಾರಿಕಾ ಕಾರಿಡಾರ್‌ಗಳು ಅಭಿವೃದ್ಧಿಶೀಲತೆಗೆ ಹೊಸ ಹಾದಿ ನೀಡಿವೆ. ತೆಲಂಗಾಣವು ನೆರೆಯ ಆರ್ಥಿಕ ರಾಜ್ಯಗಳನ್ನು ಸಂಪರ್ಕಿಸಲು ಇವೆಲ್ಲಾ ನೆರವಾಗಿವೆ ಎಂದು ಅವರು ಹೇಳಿದರು.

ಟೀಕಿಸುವುದೇ ಕೆಸಿಆರ್​ ಸಾಧನೆ: ಇದೇ ವೇಳೆ, ತೆಲಂಗಾಣ ಸರ್ಕಾರವನ್ನು ಟೀಕಿಸಿದ ಪ್ರಧಾನಿ, ರಾಜ್ಯದಲ್ಲಿ ಈಗಿರುವ ಸರ್ಕಾರ 4 ಕೆಲಸಗಳನ್ನು ಮಾತ್ರ ಮಾಡಿದೆ. ಅದರಲ್ಲಿ ಮೊದಲನೆಯದು ನನ್ನನ್ನು ಮತ್ತು ಬಿಜೆಪಿ ಸರ್ಕಾರದ ಟೀಕಿಸುವುದು, ಕುಟುಂಬ ಆಧರಿತ ಸರ್ಕಾರ, ಅಭಿವೃದ್ಧಿಯ ನಾಶ, ಭ್ರಷ್ಟಾಚಾರ ಸರ್ಕಾರದ ಸಾಧನೆಗಳಾಗಿವೆ. ತೆಲಂಗಾಣದಲ್ಲಿ ಜಾರಿಯಾದ ಯಾವುದೇ ಯೋಜನೆಗಳು ಭ್ರಷ್ಟಾಚಾರದ ಹೊರತಾಗಿಲ್ಲ ಎಂದು ಆರೋಪಿಸಿದರು.

ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ತೆಲಂಗಾಣದಲ್ಲಿ 2024ರ ವೇಳೆ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯಪಾಲೆ ಸೌಂದರರಾಜನ್‌, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿ ತೆಲಂಗಾಣ ಘಟಕದ ನೂತನ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ: DRDO scientist: ಪಾಕಿಸ್ತಾನ ಏಜೆಂಟ್ ಜೊತೆ ರಹಸ್ಯ ಮಾಹಿತಿ ಹಂಚಿಕೊಂಡ ಡಿಆರ್​ಡಿಒ ವಿಜ್ಞಾನಿ

Last Updated : Jul 8, 2023, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.