ETV Bharat / bharat

ಶೀಘ್ರದಲ್ಲೇ ಉತ್ತರಪ್ರದೇಶ 'ಆಧುನಿಕ ರಾಜ್ಯ'ವಾಗಲಿದೆ.. ಗಂಗಾ ಎಕ್ಸ್‌ಪ್ರೆಸ್‌ವೇ ಶಂಕುಸ್ಥಾಪನೆ ಬಳಿಕ ಪ್ರಧಾನಿ ಮಾತು

ಇಂದು ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಹಣವನ್ನು ಹೂಡಿಕೆ ಮಾಡುತ್ತಿದೆ. ಉತ್ತರಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಮೂಲಸೌಕರ್ಯವು ಸಂಪನ್ಮೂಲಗಳನ್ನು ಹೇಗೆ ಸರಿಯಾಗಿ ಬಳಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು..

PM Modi lays foundation stone of Ganga Expressway
ಪ್ರಧಾನಿ ನರೇಂದ್ರ ಮೋದಿ
author img

By

Published : Dec 18, 2021, 7:24 PM IST

ಶಹಜಹಾನ್‌ಪುರ (ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. 36,200 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದೆ.

ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ತಾಯಿ ಗಂಗೆ ಎಲ್ಲಾ ಐಶ್ವರ್ಯ ಮತ್ತು ಸಮೃದ್ಧಿಯ ಮೂಲವಾಗಿದ್ದಾಳೆ. ಎಲ್ಲರಿಗೂ ಸಂತೋಷ ನೀಡಿ, ನೋವುಗಳನ್ನು ದೂರ ಮಾಡುತ್ತಾಳೆ. ಹಾಗೆಯೇ, ಗಂಗಾ ಎಕ್ಸ್‌ಪ್ರೆಸ್‌ವೇ ಉತ್ತರಪ್ರದೇಶದ ಸಮೃದ್ಧಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ.

ಎಕ್ಸ್‌ಪ್ರೆಸ್‌ವೇಗಳು, ವಿಮಾನ ನಿಲ್ದಾಣಗಳು ಮತ್ತು ರೈಲುಮಾರ್ಗಗಳು ರಾಜ್ಯದ ಜನತೆಗೆ ವರದಾನವಾಗಲಿವೆ. ಮುಂದಿನ ಪೀಳಿಗೆಗೆ ಬೇಕಾದ ಎಲ್ಲಾ ಮೂಲಸೌಕರ್ಯಗಳೊಂದಿಗೆ ಶೀಘ್ರದಲ್ಲೇ ಉತ್ತರಪ್ರದೇಶ 'ಆಧುನಿಕ ರಾಜ್ಯ' ಎಂದು ಕರೆಯಲ್ಪಡುತ್ತದೆ ಎಂದರು.

  • आज यूपी में एक्सप्रेस-वे का जो जाल बिछ रहा है, जो नए एयरपोर्ट बनाए जा रहे हैं, नए रेलवे रूट बन रहे हैं, वो लोगों के लिए अनेक वरदान एक साथ लेकर आ रहे हैं। pic.twitter.com/RuzY2Qtidm

    — Narendra Modi (@narendramodi) December 18, 2021 " class="align-text-top noRightClick twitterSection" data=" ">

ಉತ್ತರಪ್ರದೇಶದಲ್ಲಿ ಐದು ವರ್ಷಗಳ ಹಿಂದಿನ ಸ್ಥಿತಿಯನ್ನು ನೆನಪಿಸಿಕೊಳ್ಳಿ. ರಾಜ್ಯದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಇತರ ನಗರಗಳು ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಲಭ್ಯವಿರಲ್ಲ. ಸಾರ್ವಜನಿಕ ಹಣವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಜನರು ಚೆನ್ನಾಗಿ ನೋಡಿದ್ದಾರೆ. ಆದರೆ,

ಇಂದು ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಹಣವನ್ನು ಹೂಡಿಕೆ ಮಾಡುತ್ತಿದೆ. ಉತ್ತರಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಮೂಲಸೌಕರ್ಯವು ಸಂಪನ್ಮೂಲಗಳನ್ನು ಹೇಗೆ ಸರಿಯಾಗಿ ಬಳಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: 'ಕಾಶಿ ವಿಶ್ವನಾಥ ಧಾಮ' ದೇಶದ ಸಂಸ್ಕೃತಿ, ಪ್ರಾಚೀನ ಇತಿಹಾಸಕ್ಕೆ ಸಾಕ್ಷಿ - ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ : ನಾವು ಇಲ್ಲಿ ಕೆಲವು ರಾಜಕೀಯ ಪಕ್ಷಗಳನ್ನು ಹೊಂದಿದ್ದೇವೆ. ಅವುಗಳು ಪರಂಪರೆಯ ಜೊತೆಗೆ ದೇಶದ ಅಭಿವೃದ್ಧಿಯ ಸಮಸ್ಯೆಗಳನ್ನು ಹೊಂದಿವೆ. ಅವರು ತಮ್ಮ ಮತ ಬ್ಯಾಂಕ್‌ನ ಬಗ್ಗೆ ಹೆಚ್ಚು ಚಿಂತಿಸುವುದರಿಂದ ದೇಶದ ಪರಂಪರೆ ಉಳಿಸುವುದು ಅವರಿಗೆ ಬೇಕಾಗಿಲ್ಲ.

ಕಾಶಿಯಲ್ಲಿ ಬಾಬಾ ವಿಶ್ವನಾಥ ಧಾಮದ ಪುನಶ್ಚೇತನ ಹಾಗೂ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯವಾದ ಮಂದಿರದ ನಿರ್ಮಾಣ ಮಾಡುವುದರಲ್ಲಿ ಅವರಿಗೆ ಸಮಸ್ಯೆ ಇದೆ. ಅಷ್ಟೇ ಅಲ್ಲ, ಅವರು, ಭಾರತೀಯ ವಿಜ್ಞಾನಿಗಳು ತಯಾರಿಸಿದ ಕೋವಿಡ್ ಲಸಿಕೆ ಬಗ್ಗೆಯೂ ಅನುಮಾನಗಳನ್ನು ವ್ಯಕ್ತಪಡಿಸಿದ್ದರು ಎಂದು ಮೋದಿ ಆರೋಪಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.