ETV Bharat / bharat

ಡಿಜಿಟಲ್​ ಪಾವತಿ 'e-RUPI' ನಮೋ ಚಾಲನೆ... ಭವಿಷ್ಯದ ಸುಧಾರಣೆಗಳಲ್ಲಿ ಇದು ಒಂದು ಎಂದ ಮೋದಿ - ಡಿಜಿಟಲ್​ ಪಾವತಿ ವಿಧಾನ ಇ-ರುಪಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ (E-RUPI) ಸೇವೆಗೆ ಇಂದು ಚಾಲನೆ ನೀಡಿದ್ದಾರೆ.

PM Modi Launches New Payment System
PM Modi Launches New Payment System
author img

By

Published : Aug 2, 2021, 5:50 PM IST

Updated : Aug 2, 2021, 5:56 PM IST

ನವದೆಹಲಿ: ಡಿಜಿಟಲ್​ ಪಾವತಿ ವಿಧಾನ ಇ - ರುಪಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದ್ದು, ನಗದು ರಹಿತ ಈ ಯೋಜನೆ ಭವಿಷ್ಯದ ಸುಧಾರಣೆಗಳಲ್ಲಿ ಒಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.

21ನೇ ಶತಮಾನದಲ್ಲಿ ಭಾರತ ಯಾವ ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗಿದೆ ಎಂಬುದಕ್ಕೆ e-RUPI ಒಂದು ಉದಾಹರಣೆಯಾಗಿದ್ದು, ತಂತ್ರಜ್ಞಾನದ ಸಹಾಯದಿಂದ ಇದೀಗ ಭಾರತ ಡಿಜಿಟಲ್​​ ಪಾವತಿ ಪರಿಹಾರಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು. 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂಭ್ರಮದಲ್ಲಿರುವ ನಾವು ಇದೀಗ ಇ-ರುಪಿ ಯೋಜನೆಗೆ ಚಾಲನೆ ನೀಡುತ್ತಿರುವುದು ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಡಿಜಿಟಲ್​ ಪಾವತಿ 'e-RUPI' ನಮೋ ಚಾಲನೆ

ಇ-ರುಪಿ ವೋಚರ್​ ದೇಶದಲ್ಲಿನ ಡಿಜಿಟಲ್​ ವಹಿವಾಟು ಮತ್ತು DBT ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ಪಾರದರ್ಶಕ ಹಾಗೂ ತೊಂದರೆ ರಹಿತ ಹಣಕಾಸಿನ ವರ್ಗಾವಣೆಗೆ ಎಲ್ಲರಿಗೂ ಸಹಕಾರಿಯಾಗಲಿದೆ ಎಂದು ನಮೋ ತಿಳಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ಇದರಲ್ಲಿ ಸೇರಿಸಲಾಗುವುದು ಎಂದರು.ಬರುವ ದಿನಗಳಲ್ಲಿ ಆಹಾರ ವಿತರಣೆ, ಆರೋಗ್ಯ ಸೇವೆಗಳು ಸೇರಿದಂತೆ ಬೇರೆ ವಲಯಗಳಿಗೆ ಈ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದಿರುವ ನಮೋ, ಇದರಿಂದ ದೇಶ ಮತ್ತಷ್ಟು ಡಿಜಟಲೀಕರಣದತ್ತ ದಾಪುಗಾಲು ಹಾಕಿದೆ ಎಂದರು.

ಇದನ್ನೂ ಓದಿರಿ: ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಸರ್ಕಾರಿ ಮಾತ್ರವಲ್ಲ ಸರ್ಕಾರಿಯೇತರ ಸಂಸ್ಥೆಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದ್ದು, ವೈದ್ಯಕೀಯ ಚಿಕಿತ್ಸೆ ವೇಳೆ ಹಣ ನೀಡುವ ಬದಲು e-RUPI ವೋಚರ್​ ನೀಡಬಹುದಾಗಿದೆ ಎಂದರು. ಆರಂಭದಲ್ಲಿ ಆರೋಗ್ಯ ವಲಯಕ್ಕೆ ಮಾತ್ರ ಇದನ್ನ ಸೇರಿಸಲಾಗುತ್ತಿದ್ದು, ಕೋವಿಡ್​ ವ್ಯಾಕ್ಸಿನ್ ಪಡೆದುಕೊಳ್ಳುವ ವೇಳೆ ಹಣ ನೀಡುವ ಬದಲಿಗೆ e-RUPE ವೋಚರ್ ನೀಡಬಹುದಾಗಿದೆ ಎಂದು ತಿಳಿಸಿದರು.

ಇ-ರುಪಿ ಎಂದರೇನು, ಕಾರ್ಯ ವಿಧಾನ ಹೇಗೆ?

ಇ-ರುಪಿ ನಗದುರಹಿತ ಮತ್ತು ಸಂಪರ್ಕರಹಿತ ಡಿಜಿಟಲ್ ಪಾವತಿ ವಿಧಾನ. ಕ್ಯು ಆರ್ ಕೋಡ್ ಅಥವಾ ಎಸ್​ಎಂಎಸ್ ಆಧಾರಿತ ಇ-ವೋಚರ್ ಫಲಾನುಭವಿಗಳ ಮೊಬೈಲ್​ಗೆ ಬರುತ್ತದೆ. ಈ ತಡೆರಹಿತ ಏಕಕಾಲದ ಪಾವತಿ ಕಾರ್ಯವಿಧಾನವು ಬಳಕೆದಾರರ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೇ ವೋಚರ್ ಅನ್ನು ರಿಡೀಮ್ ಮಾಡಲು ಅವಕಾಶ ಕಲ್ಪಿಸುತ್ತದೆ.

ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಇದನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ತನ್ನ ಯುಪಿಐ ವೇದಿಕೆಯಲ್ಲಿ ಅಭಿವೃದ್ಧಿಪಡಿಸಿದೆ.e-RUPI ವೋಚರ್​​ಗಳನ್ನ ಗಿಫ್ಟ್​ ಕಾರ್ಡ್​ಗಳ ರೀತಿ ಬಳಸಬಹುದಾಗಿದ್ದು, ಕಾರ್ಡ್​ನ ಕೋಡ್​ನ್ನ ಎಸ್​ಎಂಎಸ್ ಮೂಲಕ ಅಥವಾ ಕ್ಯೂ ಆರ್​ ಕೋಡ್ ಮೂಲಕ ಶೇರ್ ಮಾಡಬಹುದು.

Last Updated : Aug 2, 2021, 5:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.