ನವದೆಹಲಿ : ಕೇರಳದ ವಿಶೇಷ ಚೇತನ ವೃದ್ಧರೊಬ್ಬರು ಸ್ವಚ್ಛತೆಗೆ ನೀಡಿದ ಕೊಡುಗೆಗಾಗಿ ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅವರನ್ನು ಶ್ಲಾಘಿಸಿದ್ದಾರೆ.
ತಮ್ಮ ರೇಡಿಯೊ ಕಾರ್ಯಕ್ರಮದಲ್ಲಿ ಕೇರಳದ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಜವಾಬ್ದಾರಿಗಳನ್ನು ನೆನಪಿಸುವ ಇನ್ನೊಂದು ಸುದ್ದಿಯನ್ನು ತಾನು ನೋಡಿದ್ದೇನೆ.
ಕೇರಳದ ಕೊಟ್ಟಾಯಂ ನಿವಾಸಿಯಾಗಿರುವ ಎನ್.ಎಸ್. ರಾಜಪ್ಪನ್ ಎಂಬುವರು ದಿವ್ಯಾಂಗರಾಗಿದ್ದಾರೆ. ಪಾರ್ಶ್ವವಾಯುಗೆ ತುತ್ತಾಗಿರುವ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಸ್ಪಚ್ಛತೆ ಬಗ್ಗೆ ಅವರಿಗಿರುವ ಬದ್ಧತೆ ಮಾತ್ರ ಕ್ಷೀಣಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮನ್ ಕಿ ಬಾತ್ನಲ್ಲಿ 'ಹೈದರಾಬಾದ್ನ ತರಕಾರಿ ಮಾರುಕಟ್ಟೆ' ಶ್ಲಾಘಿಸಿದ ಪ್ರಧಾನಿ
ಕಳೆದ ಹಲವಾರು ವರ್ಷಗಳಿಂದ, ವೆಂಬನಾಡ್ ಸರೋವರದಲ್ಲಿ ಅವರು ತಮ್ಮ ದೋಣಿಯನ್ನು ಓಡಿಸುತ್ತಾರೆ. ಅಲ್ಲಿ ಬಿಸಾಕಿರುವ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳನ್ನು ತೆರವುಗೊಳಿಸುತ್ತಾರೆ.
ಅವರು ಸ್ವಚ್ಛತೆ ಕುರಿತು ಎಷ್ಟರಮಟ್ಟಿಗೆ ಯೋಚಿಸುತ್ತಾರೆಂದು ಊಹಿಸಿ. ರಾಜಪ್ಪನ್ ಅವರಿಂದ ಸ್ಫೂರ್ತಿ ಪಡೆದು ನಮ್ಮ ಕೈಲಾದಷ್ಟು ಸ್ವಚ್ಛತೆಗೆ ನಾವೂ ಸಹಕರಿಸಬೇಕು, ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ ಅವರನ್ನು ಕೊಂಡಾಡಿದ್ದಾರೆ.