ETV Bharat / bharat

ವರ್ಷದ ಕೊನೆಯ ಮೋದಿ 'ಮನ್ ಕಿ ಬಾತ್' ಇಂದು: 11 ಗಂಟೆಗೆ ಪ್ರಸಾರ - ಮನ್ ಕಿ ಬಾತ್ 108ನೇ ಸಂಚಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್' ಇಂದು ಬೆಳಿಗ್ಗೆ ಪ್ರಸಾರವಾಗಲಿದೆ. ಇದು ಈ ವರ್ಷದ ಕೊನೆಯ ಸಂಚಿಕೆ.

PM Modi
ಪ್ರಧಾನಿ ಮೋದಿ
author img

By ETV Bharat Karnataka Team

Published : Dec 31, 2023, 9:02 AM IST

ನವದೆಹಲಿ: ಇಂದು 2023ನೇ ವರ್ಷದ ಕೊನೆಯ ದಿನ. ಒಂದೆಡೆ ಈ ವರ್ಷ ಮುಗಿಯುತ್ತಿದ್ದರೆ ಇನ್ನೊಂದೆಡೆ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರುಷದ ಉದಯವಾಗಲಿದೆ. ವರ್ಷದ ಕಟ್ಟಕಡೆಯ ದಿನವಾದ ಇಂದು (ಡಿಸೆಂಬರ್ 31) ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಜೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ. ಇದು ಮನ್ ಕಿ ಬಾತ್‌ನ 108ನೇ ಸಂಚಿಕೆಯಾಗಿದೆ.

2023ರ ಕೊನೆಯ ಕಾರ್ಯಕ್ರಮ ಇದಾಗಿದ್ದು, ಪ್ರತಿ ಬಾರಿಯಂತೆ ಬೆಳಿಗ್ಗೆ 11ಕ್ಕೆ ಪ್ರಸಾರವಾಗಲಿದೆ. ದೂರದರ್ಶನ, ಆಲ್ ಇಂಡಿಯಾ ರೇಡಿಯೋ ಮತ್ತು ಭಾರತೀಯ ಜನತಾ ಪಕ್ಷದ ಫೇಸ್‌ಬುಕ್, ಎಕ್ಸ್‌ ಮತ್ತು ಯೂಟ್ಯೂಬ್‌ನಲ್ಲಿ ಈ ಕಾರ್ಯಕ್ರಮವನ್ನು ಕೇಳಬಹುದು.

ಪ್ರಧಾನಿ ಇಂದಿನ ಹೊಸ ಸಂಚಿಕೆಯ ಮೂಲಕ ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯ ಕೋರಲಿದ್ದಾರೆ. ಇದಲ್ಲದೆ, ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರ ಮತ್ತು ಅದರ ಪ್ರತಿಷ್ಠಾಪನೆಯ ಬಗ್ಗೆಯೂ ಪ್ರಸ್ತಾಪಿಸಬಹುದು. ಏಪ್ರಿಲ್ 30, 2023ರಂದು 'ಮನ್ ಕಿ ಬಾತ್' ಕಾರ್ಯಕ್ರಮದ 100 ಸಂಚಿಕೆಗಳು ಪೂರ್ಣಗೊಂಡಿವೆ. ಈ ಐತಿಹಾಸಿಕ ಕ್ಷಣವನ್ನು ದೇಶಾದ್ಯಂತ ನೇರಪ್ರಸಾರ ಮಾಡಲಾಗಿತ್ತು.

ಇಂದಿನ ಮನ್ ಕಿ ಬಾತ್ ವಿಶೇಷತೆಯೇನು?: ಹೊಸ ಆರೋಗ್ಯ ಸ್ಟಾರ್ಟಪ್‌ಗಳು, ಪೌಷ್ಟಿಕಾಂಶ ಮತ್ತು ಧ್ಯಾನ, ಯೋಗದ ಕುರಿತು ತಮ್ಮ ಅಭಿಪ್ರಾಯಗಳನ್ನು ಇಂದಿನ ಮನ್ ಕಿ ಬಾತ್‌ನಲ್ಲಿ ವ್ಯಕ್ತಪಡಿಸಬಹುದು. 'ಈ ಬಾರಿ ನಾವು ಚರ್ಚಿಸಲಿರುವ ವಿಷಯಗಳಲ್ಲಿ ಯುವಕರು ಹೆಚ್ಚು ಇಷ್ಟಪಡುವ ಫಿಟ್ ಇಂಡಿಯಾ ಅಂಶ ಒಳಗೊಂಡಿರುತ್ತದೆ' ಎಂದು ಪ್ರಧಾನಿ ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

11 ವಿದೇಶಿ ಭಾಷೆಗಳಲ್ಲಿ ಪ್ರಸಾರ: 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಹಾಗೂ 22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆಲ್ ಇಂಡಿಯಾ ರೇಡಿಯೋದ 500ಕ್ಕೂ ಹೆಚ್ಚು ಕೇಂದ್ರಗಳಿಂದಲೂ ಪ್ರಸಾರ ಮಾಡಲಾಗುತ್ತದೆ.

2023ರ ಕೊನೆಯ ಸೂರ್ಯೋದಯ: ತಮಿಳುನಾಡಿನ ರಾಮೇಶ್ವರಂ ಸೇರಿದಂತೆ ದೇಶದ ವಿವಿಧ ಕರಾವಳಿ ಪ್ರದೇಶಗಳಲ್ಲಿ ಇಂದು 2023ರ ಕೊನೆಯ ಸೂರ್ಯೋದಯವನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸಿದ್ದುದು ಕಂಡುಬಂತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.