ETV Bharat / bharat

Interview: ವಿಶ್ವದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿದೆ ಭಾರತ: ಪ್ರಧಾನಿ ಮೋದಿ

author img

By

Published : Jun 20, 2023, 1:10 PM IST

ಭಾರತವು ಯಾವುದೇ ದೇಶದ ಮೇಲೆ ದಬ್ಬಾಳಿಕೆ ಎಸಗುತ್ತಿಲ್ಲ. ಆದರೆ ವಿಶ್ವದಲ್ಲಿ ತನಗೆ ಸಿಗಬೇಕಾದ ಸರಿಯಾದ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾ ಸಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

PM Modi interview: 'India gaining rightful position in world'

ಹೈದರಾಬಾದ್ : ಯಾವುದೇ ದೇಶದ ವಿರುದ್ಧ ಅನ್ಯಾಯ ಮಾಡದೇ, ಭಾರತವು ವಿಶ್ವದಲ್ಲಿ ತನಗೆ ಸಿಗಬೇಕಾದ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಭಾರತವು ಹೆಚ್ಚು ಉನ್ನತ, ಆಳವಾದ ಮತ್ತು ವಿಶಾಲವಾದ ಗೌರವ ಮತ್ತು ಪಾತ್ರಕ್ಕೆ ಅರ್ಹವಾಗಿದೆ. ಭಾರತವು ಯಾವುದೇ ದೇಶದ ಮೇಲೆ ದಬ್ಬಾಳಿಕೆ ಎಸಗುವ ಮನಸ್ಥಿತಿ ಹೊಂದಿಲ್ಲ. ಭಾರತವು ವಿಶ್ವದಲ್ಲಿ ತನಗೆ ಸಿಗಬೇಕಾದ ಸೂಕ್ತ ಸ್ಥಾನಮಾನವನ್ನು ಪಡೆಯುತ್ತಿರುವುದು ಗೋಚರವಾಗುತ್ತಿದೆ ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

India’s Modi Sees Unprecedented Trust With U.S., Touts New Delhi’s Leadership Role ಶೀರ್ಷಿಕೆಯಡಿ ಪ್ರಧಾನಿ ಮೋದಿಯವರ ಸಂದರ್ಶನದ ಪೂರ್ಣಪಾಠ ವಾಲ್ ಸ್ಟ್ರೀಟ್​ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ವಿಶ್ವದ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮತ್ತು ಜಾಗತಿಕ ಸಂಸ್ಥೆಗಳ ಪುನಾರಚನೆಯ ಬಗ್ಗೆ ಮೋದಿ ಒಲವು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ಕುರಿತು ಚರ್ಚಿಸಿದ ಸಂದರ್ಶನದಲ್ಲಿ, ಪ್ರಧಾನಿ ಮೋದಿ ಅವರು "ಅಮೆರಿಕ ಮತ್ತು ಭಾರತದ ನಾಯಕರ ನಡುವೆ ಅಭೂತಪೂರ್ವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ಚೀನಾದ ಗಡಿ ಅತಿಕ್ರಮಣದ ಬಗ್ಗೆ ಮೋದಿ ಹೇಳಿದ್ದಿಷ್ಟು : ಚೀನಾಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ, ಭಾರತವು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತದೆ ಮತ್ತು ಇದು ಚೀನಾದೊಂದಿಗೆ ಸಾಮಾನ್ಯ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಲು ಅತ್ಯಗತ್ಯವಾಗಿದೆ ಎಂದರು. ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತವು ತನ್ನ ಸಾರ್ವಭೌಮತೆ ಮತ್ತು ಘನತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ ಎಂದು ಹೇಳಿದರು.

ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು, ಕಾನೂನಿನ ನಿಯಮವನ್ನು ಗಮನಿಸುವುದು ಮತ್ತು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಅದೇ ಸಮಯದಲ್ಲಿ, ಭಾರತವು ತನ್ನ ಸಾರ್ವಭೌಮತ್ವ ಮತ್ತು ಘನತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

ಭಾರತದ ಆದ್ಯತೆ ಶಾಂತಿ: ಎಲ್ಲ ದೇಶಗಳು ಅಂತಾರಾಷ್ಟ್ರೀಯ ಕಾನೂನು ಮತ್ತು ದೇಶಗಳ ಸಾರ್ವಭೌಮತ್ವವನ್ನು ಗೌರವಿಸಬೇಕು. ವಿವಾದಗಳನ್ನು ರಾಜತಾಂತ್ರಿಕತೆ ಮತ್ತು ಮಾತುಕತೆ ಮೂಲಕ ಪರಿಹರಿಸಬೇಕೇ ಹೊರತು ಯುದ್ಧದಿಂದ ಅಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ನಾವು ತಟಸ್ಥರು ಎಂದು ಕೆಲವರು ಹೇಳುತ್ತಾರೆ, ಆದರೆ, ನಾವು ತಟಸ್ಥರಲ್ಲ. ನಾವು ಶಾಂತಿಯ ಕಡೆ ಇದ್ದೇವೆ. ಭಾರತದ ಪ್ರಮುಖ ಆದ್ಯತೆ ಶಾಂತಿ ಎಂದು ಜಗತ್ತಿಗೆ ಸಂಪೂರ್ಣ ವಿಶ್ವಾಸವಿದೆ ಎಂದು ಮೋದಿ ಸಂದರ್ಶನದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇಂದು ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿದೆ ಮತ್ತು ಪರಸ್ಪರ ಅವಲಂಬಿತವಾಗಿದೆ. ಸ್ಥಿರತೆಯನ್ನು ಸಾಧಿಸಲು ಪೂರೈಕೆ ಸರಪಳಿಗಳಲ್ಲಿ ಹೆಚ್ಚಿನ ವೈವಿಧ್ಯತೆ ಇರಬೇಕು ಎಂದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವ ವಿಚಾರ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವದ ಕುರಿತು ಮಾತನಾಡಿದ ಪ್ರಧಾನಿ, ಪ್ರಸ್ತುತ ಸದಸ್ಯತ್ವದ ಮೌಲ್ಯಮಾಪನ ನಡೆಯಲಿ ಮತ್ತು ಭಾರತವು ಸದಸ್ಯತ್ವ ಪಡೆಯಬೇಕಾ ಎಂಬುದರ ಕುರಿತು ಮತ ಚಲಾವಣೆ ಆಗಲಿ ಎಂದು ಮೋದಿ ಸಲಹೆ ನೀಡಿದರು. ಭಾರತವು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಮತ್ತು ಸಂಘರ್ಷವನ್ನು ಕೊನೆಗೊಳಿಸಲು ಮತ್ತು ನಿರಂತರ ಶಾಂತಿ, ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ: ನಾನು ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿ ಮತ್ತು ಅದಕ್ಕಾಗಿಯೇ ನನ್ನ ಆಲೋಚನಾ ಕ್ರಮ, ನನ್ನ ನಡವಳಿಕೆ, ನಾನು ಏನು ಹೇಳುತ್ತೇನೆ ಮತ್ತು ಮಾಡುತ್ತೇನೆ ಎಂಬೆಲ್ಲ ಅಂಶಗಳು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಪ್ರೇರಿತವಾಗಿವೆ ಮತ್ತು ಪ್ರಭಾವಿತವಾಗಿದೆ. ನಾನು ಅದರಿಂದ ನನ್ನ ಶಕ್ತಿಯನ್ನು ಪಡೆಯುತ್ತೇನೆ. ನಾನು ನನ್ನ ದೇಶವನ್ನು ಅದು ಹೇಗಿದೆಯೋ ಹಾಗೆ ಮತ್ತು ನಾನು ಹೇಗಿರುವೆನೋ ಹಾಗೆ ಜಗತ್ತಿಗೆ ಪ್ರಸ್ತುತಪಡಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ : Footwear Norms: ಪಾದರಕ್ಷೆಗೂ ಬಂತು ಗುಣಮಟ್ಟದ ನಿಯಮ: ಜುಲೈ 1 ರಿಂದ ಜಾರಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.