ಸಬರಕಾಂತ (ಗುಜರಾತ್): ಗುಜರಾತ್‌ನ ಸಬರಕಾಂತದಲ್ಲಿರುವ ಗಧೋಡಾ ಚೌಕಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಸಬರ್ ಡೈರಿಯ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೆರವೇರಿಸಿದರು.
ಸಬರ್ ಡೈರಿಯಲ್ಲಿ ದಿನಕ್ಕೆ 120 ಮೆಟ್ರಿಕ್ ಟನ್ ಪೌಡರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ ಅವರು, ಇದು ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರ ಸಬಲೀಕರಣ ಹಾಗೂ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಅಲ್ಲದೇ, ಸಬರಕಾಂತ ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ ಎಂದು ಹೇಳಿದರು.
-
Gujarat | Prime Minister Narendra Modi inaugurate & lay the foundation stone of multiple projects of Sabar Dairy at Gadhoda Chowki, Sabarkantha to boost the rural economy, support local farmers and milk producers. pic.twitter.com/h95bLoryVN
— ANI (@ANI) July 28, 2022 " class="align-text-top noRightClick twitterSection" data="
">Gujarat | Prime Minister Narendra Modi inaugurate & lay the foundation stone of multiple projects of Sabar Dairy at Gadhoda Chowki, Sabarkantha to boost the rural economy, support local farmers and milk producers. pic.twitter.com/h95bLoryVN
— ANI (@ANI) July 28, 2022Gujarat | Prime Minister Narendra Modi inaugurate & lay the foundation stone of multiple projects of Sabar Dairy at Gadhoda Chowki, Sabarkantha to boost the rural economy, support local farmers and milk producers. pic.twitter.com/h95bLoryVN
— ANI (@ANI) July 28, 2022
ಜೊತೆಗೆ ಇದೇ ಸಬರ್ ಡೈರಿಯಲ್ಲಿ ಅಸೆಪ್ಟಿಕ್ ಮಿಲ್ಕ್ ಪ್ಯಾಕೇಜಿಂಗ್ ಘಟಕವನ್ನು ಪ್ರಧಾನಿ ಉದ್ಘಾಟಿಸಿದರು. ಇದು ಅತ್ಯಾಧುನಿಕ ಸ್ಥಾವರವಾಗಿದ್ದು, ದಿನಕ್ಕೆ 3 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದೇ ವೇಳೆ, ಅಂದಾಜು ವೆಚ್ಚ ಸುಮಾರು 600 ಕೋಟಿ ರೂ. ವೆಚ್ಚದ ಸಬಾರ್ ಚೀಸ್ ಮತ್ತು ವೇ ಡ್ರೈಯಿಂಗ್ ಪ್ಲಾಂಟ್ ಯೋಜನೆಗೂ ಮೋದಿ ಅಡಿಗಲ್ಲು ಹಾಕಿದರು.
ನಾಳೆ ಗಿಫ್ಟ್ ಸಿಟಿಗೆ ಪ್ರಧಾನಿ ಭೇಟಿ: ಪ್ರಧಾನಿ ಮೋದಿ ನಾಳೆ (ಜುಲೈ 29) ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿ (Gujarat International Finance Tec-City)ಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ (ಐಎಫ್‌ಎಸ್‌ಸಿಎ)ದ ಪ್ರಧಾನ ಕಚೇರಿಯ ಕಟ್ಟಡದ ಶಂಕುಸ್ಥಾಪನೆಯನ್ನು ಅವರು ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಇಂಡಿಯಾ ಇಂಟರ್‌ನ್ಯಾಶನಲ್ ಬುಲಿಯನ್ ಎಕ್ಸ್‌ಚೇಂಜ್ (ಐಐಬಿಎಕ್ಸ್) ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಇದು ಭಾರತದ ಮೊದಲ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್ ಆಗಿದೆ. ಇದು ಭಾರತದಲ್ಲಿ ಚಿನ್ನದ ಆರ್ಥಿಕೀಕರಣಕ್ಕೆ ಉತ್ತೇಜನ ನೀಡುವುದಲ್ಲದೇ ಗುಣಮಟ್ಟ ಹಾಗೂ ಸಮರ್ಥ ಬೆಲೆ ಅನ್ವೇಷಣೆಯನ್ನು ಸುಗಮಗೊಳಿಸುತ್ತದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೇಜ್ರಿವಾಲ್ಗೆ ಪಂಜಾಬ್‌ನಲ್ಲೂ ವಿಶೇಷ ಭದ್ರತೆ: ಎಎಪಿ ಸರ್ಕಾರದ ಮೇಲೆ ಕಾಂಗ್ರೆಸ್ ವಾಗ್ದಾಳಿ