ETV Bharat / bharat

ಕಾನ್ಪುರದಲ್ಲಿ ಮೆಟ್ರೋ ಮಾರ್ಗ ಉದ್ಘಾಟಿಸಿದ ನಮೋ.. ಖುದ್ದು ಟಿಕೆಟ್​ ಖರೀದಿಸಿ 10 ನಿಮಿಷ ಪ್ರಯಾಣ

author img

By

Published : Dec 28, 2021, 8:34 PM IST

PM Modi travels in Kanpur Metro rail: ಉತ್ತರ ಪ್ರದೇಶ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ, ಕಾನ್ಪುರದಲ್ಲಿ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿ 10 ನಿಮಿಷಗಳ ಕಾಲ ಪ್ರಯಾಣ ಬೆಳೆಸಿದರು.

PM Modi ride kanpur Metro
PM Modi ride kanpur Metro

ಕಾನ್ಪುರ(ಉತ್ತರ ಪ್ರದೇಶ): ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಭಾರತೀಯ ಜನತಾ ಪಾರ್ಟಿ ಮೇಲಿಂದ ಮೇಲೆ ಪ್ರಧಾನಿ ಮೋದಿ ಅವರಿಂದ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ಮಾಡಿಸುತ್ತಿದೆ. ಇಂದು ಕೂಡ ಕಾನ್ಪುರಕ್ಕೆ ಭೇಟಿ ನೀಡಿದ್ದ ನಮೋ, ಅಲ್ಲಿನ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದರು.

ಕಾನ್ಪುರ ಮೆಟ್ರೋದಲ್ಲಿ ಪ್ರಯಾಣ ಮಾಡಿದ ನರೇಂದ್ರ ಮೋದಿ

ಸುಮಾರು ₹11 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 32 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ, ಐಐಟಿ ಕಾನ್ಪುರ್​​ ಮೆಟ್ರೋ ನಿಲ್ದಾಣದಿಂದ ಗೀತಾ ನಗರದವರೆಗೆ ಪ್ರಯಾಣ ಬೆಳೆಸಿದರು. ಸುಮಾರು 10 ನಿಮಿಷಗಳ ಕಾಲ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​,​ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್​ ಸಿಂಗ್​ ಪುರಿ ಅವರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.

ಇದನ್ನೂ ಓದಿರಿ: IIT ಕಾನ್ಪುರಗೆ ಪಿಎಂ ಭೇಟಿ: ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಭೇಟಿ ಮಾಡಿದ ನಮೋ!

ಖುದ್ದಾಗಿ ಟಿಕೆಟ್ ಖರೀದಿಸಿದ ನಮೋ

ಮೆಟ್ರೋದಲ್ಲಿ ಪ್ರಯಾಣ ಬೆಳೆಸುವುದಕ್ಕೂ ಮುಂಚಿತವಾಗಿ ಟಿಕೆಟ್​ ಕೌಂಟರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಟಿಕೆಟ್​ ಖರೀದಿಸಿ ಎಲ್ಲರ ಗಮನ ಸೆಳೆದರು.

ಐಐಟಿ ಕಾನ್ಪುರ ಘಟಿಕೋತ್ಸವದಲ್ಲಿ ಭಾಗಿ

ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಐಐಟಿ ಕಾನ್ಪುರ ಘಟಿಕೋತ್ಸವದಲ್ಲಿ ಭಾಗಿಯಾದರು. ಈ ವೇಳೆ ಭಾಷಣ ಮಾಡಿದ ನಮೋ, ವಿದ್ಯಾರ್ಥಿಗಳಿಗೆ ಮಹತ್ವದ ಕಿವಿಮಾತು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.