ETV Bharat / bharat

ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ - Vande Bharat Express

ಹೈದರಾಬಾದ್​ ಪ್ರವಾಸದ ಬಳಿಕ ಚೆನ್ನೈಗೆ ಆಗಮಿಸಿದ ಪ್ರಧಾನಿ ಮೋದಿ, ಇಲ್ಲಿನ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಚೆನ್ನೈ - ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು.

PM Modi inauguates Chennai airport's new terminal building
ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ
author img

By

Published : Apr 8, 2023, 4:29 PM IST

Updated : Apr 8, 2023, 5:11 PM IST

ಚೆನ್ನೈ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 1,260 ಕೋಟಿ ರೂಪಾಯಿ ವೆಚ್ಚದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ (New Integrated Terminal Building-NITB) ವನ್ನು ಉದ್ಘಾಟಿಸಿದರು. ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವುದರೊಂದಿಗೆ ಎನ್​ಐಟಿಬಿ ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ.

ಹೈದರಾಬಾದ್​ ಪ್ರವಾಸದ ಬಳಿಕ ಪ್ರಧಾನಿ ಮೋದಿ ವಿಮಾನದಲ್ಲಿ ಚೆನ್ನೈಗೆ ಬಂದಿಳಿದರು. ಅವರನ್ನು ರಾಜ್ಯಪಾಲ ಆರ್‌ಎನ್ ರವಿ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಚಿವರು, ಸಂಸದರು ಮತ್ತು ಇತರ ಗಣ್ಯರು ಸ್ವಾಗತಿಸಿದರು. ನಂತರ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ಒಂದನೇ ಹಂತವನ್ನು ಪ್ರಧಾನಿ ಉದ್ಘಾಟಿಸಿದರು. ಇದೇ ವೇಳೆ ಮೋದಿ ಟರ್ಮಿನಲ್​ಅನ್ನು ಸುತ್ತಾಡಿ ವೀಕ್ಷಿಸಿದರು. ಸಿಎಂ ಸ್ಟಾಲಿನ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಎಂ ಸಿಂಧಿಯಾ ಜೊತೆಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮತ್ತು ಸಿಎಂ ಇಬ್ಬರೂ ಸೌಹಾರ್ದಯುತವಾಗಿ ಕಾಣಿಸಿಕೊಂಡರು. ಅಲ್ಲದೇ, ಇಬ್ಬರು ಪರಸ್ಪರ ಕೈ ಹಿಡಿದುಕೊಂಡು ಮುಗುಳ್ನಕ್ಕರು.

ಈ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು ವಿಮಾನ ನಿಲ್ದಾಣದ ಪ್ರಯಾಣಿಕರ ಸೇವೆಯ ಸಾಮರ್ಥ್ಯವನ್ನು ವಾರ್ಷಿಕ 23 ಮಿಲಿಯನ್ ಪ್ರಯಾಣಿಕರಿಂದ 30 ಮಿಲಿಯನ್​ಗೆ ಹೆಚ್ಚಿಸುತ್ತದೆ. ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಸಾಂಪ್ರದಾಯಿಕ ವೈಶಿಷ್ಟ್ಯಗಳಾದ ಕೋಲಂ, ಸೀರೆ, ದೇವಾಲಯಗಳು ಮತ್ತು ನೈಸರ್ಗಿಕ ಪರಿಸರವನ್ನು ಎತ್ತಿ ತೋರಿಸುವ ಅಂಶಗಳನ್ನು ಕಟ್ಟಡವು ಒಳಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಕಂದರಾಬಾದ್​ - ತಿರುಪತಿ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಚೆನ್ನೈನಲ್ಲಿ ಮೋದಿ ರೋಡ್​ ಶೋ: ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ ಭಾರತೀಯ ಭಾರತೀಯ ನೌಕಾಪಡೆ ಐಎನ್​ಎಸ್​ಗೆ ಆಗಮಿಸಿದರು. ಅಲ್ಲಿಂದ ಡಾ ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣದವರೆಗೆ ರೋಡ್​ ಶೋ ನಡೆಸಿದರು.

ಇದಾದ ಬಳಿಕ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿ ಚೆನ್ನೈ - ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಆಧುನಿಕ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಸೌಕರ್ಯಗಳಿಂದ ರೈಲು ಕೂಡಿದೆ. ಇದು ರಾಜ್ಯದ ರಾಜಧಾನಿ ಮತ್ತು ಪಶ್ಚಿಮ ಕೈಗಾರಿಕಾ ನಗರದ ನಡುವಿನ ಪ್ರಯಾಣದ ಸಮಯವನ್ನು ಒಂದು ಗಂಟೆಗೂ ಹೆಚ್ಚು ಕಡಿತಗೊಳಿಸುವ ನಿರೀಕ್ಷೆಯಿದೆ. ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದರು.

ಚೆನ್ನೈ - ಕೊಯಮತ್ತೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ 5 ಗಂಟೆ 50 ನಿಮಿಷ ಪ್ರಯಾಣಿಸಲಿದೆ. ಎರಡು ತಮಿಳುನಾಡಿನ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಸ್ಥಳೀಯ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯಾದ 'ಕವಚ' ತಂತ್ರಜ್ಞಾನ ಹೊಂದಿದೆ. ಎಲ್ಲ ಕೋಚ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಮತ್ತು ಸ್ವಯಂಚಾಲಿತ ಸ್ಲೈಡಿಂಗ್ ಡೋರ್‌ಗಳು ಇದ್ದು, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲ, ದಿವ್ಯಾಂಗ ಸ್ನೇಹಿ ವಾಶ್‌ರೂಮ್‌ಗಳು, ಬ್ರೈಲ್ ಲಿಪಿಯಲ್ಲಿ ಸೀಟ್ ಹ್ಯಾಂಡಲ್ ಸಂಖ್ಯೆಗಳು, ಎಲ್​ಇಡಿ ದೀಪಗಳು ಮತ್ತು 360-ಡಿಗ್ರಿ ತಿರುಗಬಹುದಾದ ಆಸನಗಳಂತಹ ಆಧುನಿಕ, ವೈಶಿಷ್ಟ್ಯ ಸೌಕರ್ಯಗಳು ಈ ರೈಲಿನಲ್ಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಖೋಯ್ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಯಣ

Last Updated : Apr 8, 2023, 5:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.